Kannada News: ಏನು ಸೈಡ್ ಎಫೆಕ್ಟ್ ಆಗದಂತೆ ಟ್ಯಾಟೂ ಹಾಕಿಸಿಕೊಳ್ಳಲು ದರ್ಶನ್ ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??
Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ ಎಂದೇ ಹೇಳಬಹುದು. ಅಲ್ಲದೇ ತಮ್ಮ ಅಭಿಮಾನಿಗಳನ್ನು ದರ್ಶನ್ ಸೆಲೆಬ್ರಿಟಿಸ್ ಎಂದೇ ಕರೆಯುತ್ತಾರೆ. ತನ್ನ ಅಭಿಮಾನಿಗಳನ್ನು ಅವರು ನಿಜಕ್ಕೂ ಅತ್ಯಂತ ಪ್ರೀತಿ ಆದರದಿಂದ ಕಾಣುತ್ತಾರೆ. ಹಾಗೆಯೇ ನಟ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಹುಚ್ಚು ಪ್ರೇಮ. ಅವರಿಗಾಗಿ ಏನನ್ನು ಬೇಕಾದರೂ ಮಾಡುವಂತ ಅಭಿಮಾನ ಅವರ ಫ್ಯಾನ್ಸ್ ಗೆ ಇದೆ. ದರ್ಶನ್ ಹುಟ್ಟು ಹಬ್ಬ ಬಂತು ಎಂದರೆ ತಮ್ಮ ಮನೆಯ ಹಬ್ಬ ಎಂಬಂತೆ ಅಭಿಮಾನಿಗಳು ಆಚರಿಸುತ್ತಾರೆ. ಅವರ ಸಿನಿಮಾ ಬಂದರೆ ದರ್ಶನ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುವಂತೆ ಮಾಡುತ್ತಾರೆ. ಈ ಪ್ರೀತಿ ಒಂದು ಕಡೆ ಇರಲಿ, ಆದರೆ ಮೊನ್ನೆ ಮೊನ್ನೆ ಅಷ್ಟೇ ನಟ ದರ್ಶನ್, ತಮ್ಮ ಅಭಿಮಾನಿಗಳಿಗಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಸಂಭ್ರಮಕ್ಕೆ ಕಾರಣವಾಗಿತ್ತು.
ಯಾವಾಗಲೂ ಸಹ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಅತ್ಯಂತ ಪ್ರೀತಿಯಿಂದ ನನ್ನ ಸೆಲೆಬ್ರಿಟಿಸ್ ಎಂದೇ ಕರೆಯುತ್ತಾರೆ. ತಮ್ಮ ಅಭಿಮಾನಿಗಳೆ ತನಗೆ ಸೆಲೆಬ್ರಿಟಿ. ತಾನು ಒಬ್ಬ ನಟ ತಾನು ಸೆಲೆಬ್ರಿಟಿ, ಇವರೆಲ್ಲ ನನ್ನ ಫ್ಯಾನ್ಸ್ ಎಂದು ದರ್ಶನ್ ಎಂದಿಗೂ ಹೇಳಿಕೊಂಡಿಲ್ಲ. ಬದಲಾಗಿ ನನಗೆ ಅಭಿಮಾನಿಗಳೇ ಸೆಲೆಬ್ರಿಟಿ, ನಾನು ಅವರ ದಾಸ ಎಂದೇ ದರ್ಶನ್ ಯಾವಾಗಲೂ ಹೇಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೇ ಹಂಚಿಕೊಂಡರು ಕೂಡ ತಮ್ಮ ಅಭಿಮಾನಿಗಳನ್ನು ಅವರು ಸೆಲೆಬ್ರಿಟಿಸ್ ಎಂದೇ ಸಂಭೋದಿಸುತ್ತಾರೆ ಮತ್ತು ತಮ್ಮನ್ನು ನಿಮ್ಮ ಪ್ರೀತಿಯ ದಾಸ ಎಂದೇ ಕರೆದುಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಅಭಿಮಾನಿಗಳೆಂದರೆ ದರ್ಶನ್ ಗೆ ಅಪಾರ ಪ್ರೇಮ. ಇದೇ ಪ್ರೇಮದ ಕಾರಣದಿಂದಾಗಿ ನಟ ದರ್ಶನ್ ಮೊನ್ನೆ ಅಷ್ಟೇ ತಮ್ಮ ಎದೆಯ ಮೇಲೆ ಅಭಿಮಾನಿಗಳ ನೆನಪಿಗೆ ಅವರ ಮೇಲಿನ ಪ್ರೀತಿಗೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ತಗ್ಗೆದೆ ಲೇ ಎನ್ನುತ್ತಿದ್ದ ಪೂಜಾ ಕೊನೆಗೂ ನಿರ್ಮಾಪಕರ ಡಿಮ್ಯಾಂಡ್ ಗೆ ಅವಕಾಶ ಪಡೆಯಲು ಒಪ್ಪಿಗೆ. ಫ್ಯಾನ್ಸ್ ಕಣ್ಣೀರು. ಏನಾಗಿದೆ ಗೊತ್ತೇ??
ನಟ ದರ್ಶನ್, ತಮ್ಮ ಅಭಿಮಾನಿಗಳ ಪ್ರೀತಿಗೆ ಅವರಿಗಾಗಿ ಟ್ಯಾಟು ಹಾಕಿಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಕೂಡ ಇದೇ ವಿಡಿಯೋ, ಸುದ್ದಿ ಹರಿದಾಡುತ್ತಿತ್ತು. ಅಭಿಮಾನಿಗಳು ತಮ್ಮ ವಾಟ್ಸಪ್ ಮತ್ತು ಇತರೆ ಸ್ಟೇಟಸ್ನಲ್ಲಿ ತಮ್ಮ ತಮ್ಮ ಡಿ ಬಾಸ್ ಅಭಿಮಾನಿಗಳಿಗಾಗಿ ಟ್ಯಾಟೂ ಹಾಕಿಸಿಕೊಂಡ ಸ್ಟೇಟಸ್ ಹರಿದಾಡುತ್ತಿದ್ದವು. ಅಂದಹಾಗೆ ನಟ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ಎದೆಯ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಅಚ್ಛೆ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಈ ಕುರಿತ ಪೋಸ್ಟ್ ಒಂದನ್ನು ಅವರು ಹಂಚಿಕೊಂಡು ನನ್ನ ಅಭಿಮಾನಿಗಳಿಗಾಗಿ ನನ್ನದೊಂದು ಪ್ರೀತಿಯ ಅರ್ಪಣೆ. ಇಂತಿ ನಿಮ್ಮ ದಾಸ ಎಂದು ಅವರು ಬರೆದುಕೊಂಡಿದ್ದರು. ಇದಕ್ಕೆ ಅಭಿಮಾನಿಗಳ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಅಂದ ಹಾಗೆ ಈ ಅಚ್ಚೆ ಹಾಕಿಸಿಕೊಳ್ಳಲು ದರ್ಶನ್ ಅವರು ಭಾರಿ ಮೊತ್ತವನ್ನೇ ಖರ್ಚು ಮಾಡಿದ್ದಾರೆ. ಟ್ಯಾಟು ಹಾಕಿಸಿಕೊಂಡ ನಂತರ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಹಳ ಎಚ್ಚರಿಕೆ ವಹಿಸಿ ಟ್ಯಾಟು ಹಾಕಿಸಲಾಗಿದೆ. ಈ ಟ್ಯಾಟು ಹಾಕಿಸಲು ಬರೋಬರಿ ಮೂರು ಲಕ್ಷ ರೂಪಾಯಿ ಖರ್ಚಾಗಿದೆಯಂತೆ. ಇದನ್ನು ಓದಿ..Kannada News: ದರ್ಶನ್ ಹುಟ್ಟುಹಬ್ಬ ಬಂದವರಿಗೆ ಊಟ ನೀಡಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?? ಆ ದುಡ್ಡು ನಿಜಕ್ಕೂ ಕೊಟ್ಟವರು ಯಾರು ಗೊತ್ತೇ?
Comments are closed.