Kannada News: ಧ್ರುವ ಸರ್ಜಾ ಗಾಗಿ ರೇಷ್ಮಾ ಅಲ್ಲ, ಮತ್ತೊಬ್ಬಳು ಅಪ್ಸರೆ ಫಿಕ್ಸ್ ಆದ್ರ?? ಆಯ್ಕೆಯಾಗುತ್ತಿವೆ ಅಪ್ಪಟ ಬಂಗಾರ ಯಾರು ಗೊತ್ತೇ??

Kannada News: ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೆಡಿ(KD) ಚಿತ್ರ ದಿನದಿಂದ ದಿನಕ್ಕೆ ನಿರೀಕ್ಷೆ ಹುಟ್ಟು ಹಾಕುತ್ತಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನ ಸಂಜಯ್ ದತ್ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧ್ರುವ ಸರ್ಜಾ ಮತ್ತು ಸಂಜಯ್ ದತ್ ಕೇಡಿ ಚಿತ್ರದಲ್ಲಿ ಎದುರು ಬದುರಾಗಿ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಸಂಜಯ್ ದತ್ ಬೆಂಗಳೂರಿಗೆ ಬಂದು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಎರಡನೇ ಹಂತದ ಚಿತ್ರೀಕರಣಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಆದರೆ ಇನ್ನೂ ಸಹ ಈ ಚಿತ್ರಕ್ಕೆ ನಾಯಕಿಯಾಗಿ ಯಾರು ಅಂತಿಮಗೊಂಡಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿಲ್ಲ.

1970ರ ದಶಕದ ಕಥೆಯನ್ನು ತೆರೆಯ ಮೇಲೆ ತರಲು ಈಗಾಗಲೇ ನಿರ್ದೇಶಕ ಪ್ರೇಮ್ ಕಾರ್ಯಯೋನ್ಮುಖರಾಗಿದ್ದಾರೆ. 70ರ ದಶಕದಲ್ಲಿ ಬೆಂಗಳೂರು ಹೇಗಿತ್ತು ಎನ್ನುವುದನ್ನು ಪ್ರೇಕ್ಷಕರ ಮುಂದಿಡಲು ಪ್ರೇಮ್ ಸಿದ್ದರಾಗಿದ್ದಾರೆ. ಈಗಾಗಲೇ ಕೆಜಿಎಫ್ ನಟ ಸಂಜಯ್ ದತ್ ಅವರ ಭಾಗದ ಚಿತ್ರೀಕರಣ ಮುಗಿದಿದ್ದು ಎರಡನೇ ಹಂತದ ಚಿತ್ರೀಕರಣಕ್ಕಾಗಿ ತಯಾರಿಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಎರಡನೇ ಭಾಗದ ಚಿತ್ರೀಕರಣಕ್ಕೆ ಬರೋಬ್ಬರಿ 12 ಎಕರೆ ಜಾಗದಲ್ಲಿ ತಯಾರಿ ಮಾಡಿಕೊಳ್ಳಲಾಗಿದೆಯಂತೆ. ಇದಕ್ಕಾಗಿ ಈಗಾಗಲೇ ಸೆಟ್ ಕೂಡ ರೆಡಿಯಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಎರಡನೇ ಹಂತದ ಚಿತ್ರೀಕರಣವು ಆರಂಭಗೊಳ್ಳಲಿದೆ. ಹೀಗಿದ್ದರೂ ಕೂಡ ಇನ್ನೂ ಸಹ ಈ ಚಿತ್ರದ ನಾಯಕಿ ಯಾರು ಎನ್ನುವುದು ಇದುವರೆಗೂ ಕೂಡ ಚಿತ್ರತಂಡದಿಂದ ರಿವಿಲ್ ಆಗಿಲ್ಲ. ಇದನ್ನು ಓದಿ..Kannada News: ತಗ್ಗೆದೆ ಲೇ ಎನ್ನುತ್ತಿದ್ದ ಪೂಜಾ ಕೊನೆಗೂ ನಿರ್ಮಾಪಕರ ಡಿಮ್ಯಾಂಡ್ ಗೆ ಅವಕಾಶ ಪಡೆಯಲು ಒಪ್ಪಿಗೆ. ಫ್ಯಾನ್ಸ್ ಕಣ್ಣೀರು. ಏನಾಗಿದೆ ಗೊತ್ತೇ??

kannada news dhruva sarja new movie updates kannada | Kannada News: ಧ್ರುವ ಸರ್ಜಾ ಗಾಗಿ ರೇಷ್ಮಾ ಅಲ್ಲ, ಮತ್ತೊಬ್ಬಳು ಅಪ್ಸರೆ ಫಿಕ್ಸ್ ಆದ್ರ?? ಆಯ್ಕೆಯಾಗುತ್ತಿವೆ ಅಪ್ಪಟ ಬಂಗಾರ ಯಾರು ಗೊತ್ತೇ??
Kannada News: ಧ್ರುವ ಸರ್ಜಾ ಗಾಗಿ ರೇಷ್ಮಾ ಅಲ್ಲ, ಮತ್ತೊಬ್ಬಳು ಅಪ್ಸರೆ ಫಿಕ್ಸ್ ಆದ್ರ?? ಆಯ್ಕೆಯಾಗುತ್ತಿವೆ ಅಪ್ಪಟ ಬಂಗಾರ ಯಾರು ಗೊತ್ತೇ?? 2

ಹೀಗಾಗಿ ಈ ಚಿತ್ರದ ನಾಯಕಿ ಯಾರು ಎನ್ನುವ ಕುತೂಹಲ ಸಾಕಷ್ಟು ತೀವ್ರವಾಗಿದೆ. ಅಲ್ಲದೆ ಕೆಲವರು ಈ ಚಿತ್ರಕ್ಕೆ ಇವರು ನಾಯಕಿಯಾಗಬಹುದು ಎಂದು ಗೆಸ್ ಮಾಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಹೆಸರು ಮತ್ತು ಕಾರಣಗಳನ್ನು ನೀಡುತ್ತಿದ್ದಾರೆ. ಇಷ್ಟು ಚರ್ಚೆ ನಡೆಯುತ್ತಿದ್ದರೂ ಕೂಡ ಚಿತ್ರತಂಡದಿಂದ ಒಂದು ಸಣ್ಣ ಸುಳಿವು ಸಹ ನಾಯಕಿಯ ಕುರಿತಾಗಿ ಹೊರಬಿದ್ದಿಲ್ಲ. ಅಂದಹಾಗೆ ಕೊಡಗಿನ ಬ್ಯೂಟಿ ರೀಷ್ಮಾ ನಾಣಯ್ಯ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಸದ್ಯ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಶ್ರೀ ಲೀಲಾ ಕೂಡ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ಅಂತಿಮವಾಗಿ ಧ್ರುವ ಸರ್ಜಾ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಏನು ಸೈಡ್ ಎಫೆಕ್ಟ್ ಆಗದಂತೆ ಟ್ಯಾಟೂ ಹಾಕಿಸಿಕೊಳ್ಳಲು ದರ್ಶನ್ ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Comments are closed.