Kannada News: ದೀಪಿಕಾ ಬಳಸೋ ಮೇಕಪ್ ಐಟಂ ಬೆಲೆ ಕೇಳಿದರೆ ನಿಂತಲ್ಲೇ ಉಸಿರು ಬಿಗಿ ಹಿಡಿಯುತ್ತೀರಿ. ಇಂತದ್ದು ಅದೆಷ್ಟು ಬಳಸುತ್ತಾರೆ ಗೊತ್ತೇ?
Kannada News: ಪಠಾಣ್ ಗೆಲುವಿನ ಗುಂಗಿನಲ್ಲಿರುವ ನಟಿ ದೀಪಿಕಾ ಪಡುಕೋಣೆ ಇದೀಗ ಹೊಸದೊಂದು ಬ್ಯೂಟಿ ಪ್ರಾಡಕ್ಟ್ ಪ್ರಮೋಟ್ ಮಾಡಿದ್ದಾರೆ. ತಮ್ಮ instagram ಖಾತೆಯ ಮೂಲಕ ಅವರು ಹೊಸದೊಂದು ಬ್ಯೂಟಿ ಪ್ರಾಡಕ್ಟ್ ನ ಪ್ರಮೋಷನ್ ಮಾಡಿದ್ದು, ಸದ್ಯ ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸೌಂದರ್ಯ ವರ್ಧಕಗಳ ಫೋಟೋಸ್, ವೀಡಿಯೋಸ್ ಹಂಚಿಕೊಂಡಿರುವ ಅವರು ಸ್ಕಿನ್ ಕೇರ್ ಕುರಿತಾಗಿ ಮಾತನಾಡಿದ್ದಾರೆ. ಆದರೆ ಈ ಒಂದೊಂದು ಬ್ಯೂಟಿ ಪ್ರಾಡೆಕ್ಟ್ ಗಳ ಬೆಲೆ ಕೇಳಿದರೆ ನಿಜಕ್ಕೂ ತಲೆ ತಿರುಗುವಂತಿದೆ. ಅಲ್ಲದೆ ಪ್ರತಿದಿನವೂ ಇಷ್ಟೊಂದು ದುಬಾರಿ ಬೆಲೆ ಬಾಳುವ ಬ್ಯೂಟಿ ಪ್ರಾಡಕ್ಟ್ಸ್ ಗಳನ್ನು ದೀಪಿಕಾ ಬಳಸುತ್ತಾರೆಯೇ ಎಂದು ಅಚ್ಚರಿ ಮೂಡದೆ ಇರದು.
ನಟಿ ದೀಪಿಕಾ ಪಡುಕೋಣೆ ಇತ್ತೀಚಿಗಷ್ಟೇ ಹೊಸದೊಂದು ಸ್ಕಿನ್ ಕೇರ್ ಬ್ರ್ಯಾಂಡ್ 82 ಡಿಗ್ರಿ ಇ ಲಾಂಚ್ ಮಾಡಿದ್ದಾರೆ. ತಮ್ಮ instagram ಖಾತೆಯಲ್ಲಿ ಈ ಪ್ರಾಡಕ್ಟ್ಸ್ ಕುರಿತ ಫೋಟೋಸ್, ವೀಡಿಯೋಸ್ ಹಂಚಿಕೊಳ್ಳುವ ಮೂಲಕ ಅವರು ಪ್ರಮೋಟ್ ಮಾಡಿದ್ದಾರೆ. ಲೋಟಸ್ ಮತ್ತು ಬಯೋಫ್ಲೇವನಾಯ್ಡ್ಗಳೊಂದಿಗೆ ಕಂಡೀಷನಿಂಗ್ ಕ್ಲೆನ್ಸರ್ ಮಾಡಲು ಲೋಟಸ್ ಸ್ಪ್ಲಾಷ್ ಬಳಸಲಾಗುತ್ತದೆ. ಇದು ನೂರು ಎಂಎಲ್ ಪ್ರಮಾಣದಲ್ಲಿದ್ದು ಇದರ ಬೆಲೆ ಬರೋಬ್ಬರಿ 1,200 ರೂಪಾಯಿ. ಲೋಟಸ್ ಸ್ಪ್ಲಾಶ್ ಫೋಮಿಂಗ್ ಕ್ಲೆನ್ಸರ್ ಆಗಿದ್ದು ಇದು ಚರ್ಮದ ಮೇಲಿನ ಧೂಳು, ಕೊಳಕು, ಕಲ್ಮಶ ಮತ್ತು ಮೇಕಪ್ ನಂತಹ ಅಂಶಗಳನ್ನು ತೆಗೆದುಹಾಕಲು ಸಹಕರಿಸುತ್ತದೆ. ಇದನ್ನು ಓದಿ..Kannada News: ಇದೆಯಪ್ಪಾ ಇದು ಹೊಸ ನ್ಯೂಸ್: ಶ್ರೀರಸ್ತು ಶುಭಮಸ್ತು ಮಾಧವ ನಿಜಕ್ಕೂ ಯಾರು ಗೊತ್ತೇ?? ಯಪ್ಪಾ ಇವರು ನಿಜಕ್ಕೂ ಯಾರು ಗೊತ್ತೇ??
ಇದು ಸೂಕ್ಷ್ಮ ಸಂವೇದನೆಯುಳ್ಳ ಚರ್ಮದವರಿಂದ ಹಿಡಿದು ಎಲ್ಲಾ ಬಗೆಯ ಚರ್ಮ ಉಳ್ಳವರು ಬಳಸಬಹುದಾಗಿದೆ ಎಂದು ತಿಳಿಸಲಾಗಿದೆ. ಇನ್ನು ಗೋಟು ಕೋಲಾ ಇದು ದೀಪಿಕಾ ಅವರ ಬ್ಯೂಟಿ ಕಲೆಕ್ಷನ್ನ ಹೊಸ ಸಂಗ್ರಹವಂತೆ. ಇದರ 100 ಎಂಎಲ್ ಪ್ರೊಡಕ್ಟ್ ನ ಬೆಲೆ ಬರೋಬ್ಬರಿ 2,400. ಇದು ನಿಮಗೆ ಕ್ಲಿಯರ್ ಸ್ಕಿನ್ ನೀಡುತ್ತದೆ ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ ಎಂದು ನಟಿ ಜಾಹೀರಾತಿನಲ್ಲಿ ಹೇಳಿದ್ದರು. ಪಠಣ್ ಚಿತ್ರದ ತಮ್ಮ ಜೋಡಿ ಶಾರುಖ್ ಖಾನ್ ಜೊತೆಗೆ ಈ ಪ್ರಾಡಕ್ಟ್ಗಳ ಕೆಲವು ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಮೂಲಕ ಈ ಸ್ಕಿನ್ ಕೇರ್ ಬ್ಯೂಟಿ ಪ್ರಾಡಕ್ಟ್ಸ್ ಗಳನ್ನು ಅವರು ಪ್ರಮೋಟ್ ಮಾಡಿಕೊಟ್ಟಿದ್ದರು.
ಇಷ್ಟು ಮಾತ್ರವಲ್ಲದೆ ಅವರು ಇನ್ನಷ್ಟು ಸ್ಕಿನ್ ಬ್ಯೂಟಿ ಪ್ರಾಡಕ್ಟ್ಸ್ ಗಳ ಕುರಿತು ಪ್ರಮೋಟ್ ಮಾಡುತ್ತಲೇ ಇದ್ದಾರೆ. ಇವುಗಳ ಒಂದೊಂದು ಬೆಲೆ ಕೇಳಿದರೆ ನಿಜಕ್ಕೂ ಎಂಥವರಿಗು ಇಷ್ಟು ದುಬಾರಿಯೆ ಎಂದು ತಲೆ ತಿರುಗುವುದು ಖಂಡಿತ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಂತೂ ನಿಮ್ಮ ಪ್ರಾಡಕ್ಟ್ ಗಳು ಬಡವರು ಬಳಸುವಂತಹದ್ದಲ್ಲ, ಸಾಮಾನ್ಯ ಜನರಿಗೆ ಇದು ಎಟಕುವಂತದ್ದಲ್ಲ. ನೀವು ಒಂದು ಸಲಕ್ಕೆ ಬಳಸುವ ಈ ಮೇಕಪ್ ಐಟಂಗಳ ಹಣದಲ್ಲಿ ಸಾಕಷ್ಟು ಜನರು ಒಂದು ಇಡೀ ತಿಂಗಳ ಜೀವನ ನಡೆಸುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..Kannada News: ತೆಲುಗು ಚಿತ್ರರಂಗದ ಮತ್ತೊಂದು ಪ್ರಕರಣ ಬಯಲಿಗೆ; ಕ್ಯಾರೊವಾನ್ ನಲ್ಲಿಯೇ ನಟಿಯ ಜೊತೆ ಎಲ್ಲವನ್ನು ಮಾಡಿ ಮುಗಿಸುತ್ತಿರುವ ಹೀರೋ. ಏನಾಗಿದೆ ಗೊತ್ತೇ?
Comments are closed.