Kannada News: ದಿಯಾ ಹೆಗ್ಡೆ ರವರನ್ನು ಹುಡುಕಿಕೊಂಡು ಬಂದ ಅದೃಷ್ಟ: ರಾಜ್ಯವನ್ನೇ ಗೆದ್ದಿದ್ದ ಪುಟಾಣಿಗೆ ಸಿಹಿ ಸುದ್ದಿ. ಏನು ಗೊತ್ತೆ?

Kannada News: ದಿಯಾ ಹೆಗ್ಡೆ (Diya Hegde) ಎಂದು ಹೆಸರು ಹೇಳಿದ ತಕ್ಷಣ ಈ ಹುಡುಗಿ ಸರಿಗಮಪ (Saregamapa) ಕಾರ್ಯಕ್ರಮದಲ್ಲಿ ಹಾಡುತ್ತಾಳಲ್ಲವೇ ಎಂದು ಜನ ಹೇಳುವಷ್ಟರ ಮಟ್ಟಿಗೆ ದಿಯಾ ಎಲ್ಲರಿಗೂ ಚಿರಪರಿಚಿತಳಾಗಿಬಿಟ್ಟಿದ್ದಾಳೆ. ಜೀ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ದಿಯಾ ಹೆಗಡೆ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾಳೆ. ಈ ಶೋ ಶುರುವಾಗಿ ಇನ್ನು ಕೆಲವೇ ವಾರಗಳು ಕಳೆದಿದೆ ಅಷ್ಟೇ. ಇಷ್ಟು ಕಡಿಮೆ ಅವಧಿಯಲ್ಲಿ ಈ ದಿಯಾ ಹೆಗಡೆ ತನ್ನ ಪ್ರತಿಭೆಯ ಕಾರಣದಿಂದ ರಾಜ್ಯಾದ್ಯಂತ ಮನೆ ಮಾತಾಗಿದ್ದಾಳೆ ಎಂದರೆ ತಪ್ಪಾಗಲಾರದು. ಆಕೆ ವಿಭಿನ್ನವಾಗಿ ಆಡುವ ರೀತಿ, ಮುದ್ದು ಮುದ್ದಾದ ಮಾತುಗಳು ಎಲ್ಲರನ್ನೂ ಮೋಡಿ ಮಾಡುತ್ತದೆ ಎಂದು ಹೇಳಬಹುದು. ಇದೇ ರೀತಿ ಹಾಡುವ ಪ್ರತಿಭೆಯಿಂದಲೇ ದಿಯಾ ಈಗ ಮತ್ತೊಂದು ದೊಡ್ಡ ಆಫರ್ ಪಡೆದುಕೊಂಡಿದ್ದಾಳೆ. ಹಾಗಿದ್ದರೆ ದಿಯಾ ಪಡೆದ ಭರ್ಜರಿ ಆಫರ್ ಏನು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಕಳೆದ ಕೆಲವು ವಾರಗಳ ಹಿಂದೆ ಶುರುವಾದ ಸರಿಗಮಪ ಕಾರ್ಯಕ್ರಮ ಪುಟಾಣಿ ಮಕ್ಕಳ ಹಾಡುವ ಪ್ರತಿಭೆಯನ್ನು ರಾಜ್ಯಕ್ಕೆ ಪರಿಚಯಿಸುವ ಸಿಂಗಿಂಗ್ ರಿಯಾಲಿಟಿ ಶೋ ಆಗಿದೆ. ಈ ಕಾರ್ಯಕ್ರಮದಲ್ಲಿ ಆಡಿಶನ್ ನಲ್ಲಿ ಪಾಲ್ಗೊಂಡಿದ್ದ ದಿಯಾ ಹೆಗಡೆ ಇಂಪಾಗಿ ಹಾಡುವ ಮೂಲಕ ಆಯ್ಕೆ ಆಗಿದ್ದಳು. ಈ ವೇಳೆ ವಿಶಿಷ್ಟ ರೀತಿಯಲ್ಲಿ ಒಂದು ಕಥೆ ಹೇಳುವ ಮೂಲಕ ಆಕೆಯ ಪ್ರತಿಭೆ ಎಲ್ಲರಿಗೂ ಪರಿಚಯವಾಗಿತ್ತು. ಆನಂತರ ಪ್ರತಿ ವಾರ ದಿಯಾ ಹಾಡುವುದನ್ನು ಜನ ಕಾದು ಕುಳಿತಿರುವ ಮಟ್ಟಿಗೆ ದಿಯಾ ಫೇಮಸ್ ಆಗಿದ್ದಾಳೆ. ಕೇವಲ ಹಾಡುವುದು ಮಾತ್ರವಲ್ಲ ತಾನೇ ಸ್ವಂತ ಹಾಡನ್ನು, ಹೊಸ ಹೊಸ ಸಾಹಿತ್ಯವನ್ನು ಬರೆದು ಅದಕ್ಕೆ ಲಿರಿಕ್ಸ್ ಕಂಪೋಸ್ ಮಾಡಿ ಹಾಡುತ್ತಾಳೆ. ಇದಂತೂ ಎಲ್ಲರಿಗೂ ತುಂಬಾ ಫೇವರಿಟ್ ಅಂತಾನೆ ಹೇಳಬಹುದು. ಕೆಲವು ವಾರಗಳ ಹಿಂದೆ ದಿಯಾ ಅಜ್ಜಿಯ ಧ್ವನಿಯಲ್ಲಿ ತಾನೇ ಬರೆದಿದ್ದ ಹಾಡನ್ನು ಹಾಡುವ ಮೂಲಕ ವಿಡಿಯೋ ವೈರಲ್ ಆಗಿತ್ತು. ಇದನ್ನು ಓದಿ..Kannada News: ಅವಾರ್ಡ್ ಸಮಾರಂಭದಲ್ಲಿ ರಶ್ಮಿಕಾ ಅಂದ ನೋಡಿ ಎಲ್ಲರೂ ಗಡ ಗಡ: ಚುಮು ಚುಮು ಚಳಿಯಲ್ಲಿ ತಾಪಮಾನ ಏರಿಕೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್.

kannada news diya hegde 1 | Kannada News: ದಿಯಾ ಹೆಗ್ಡೆ ರವರನ್ನು ಹುಡುಕಿಕೊಂಡು ಬಂದ ಅದೃಷ್ಟ: ರಾಜ್ಯವನ್ನೇ ಗೆದ್ದಿದ್ದ ಪುಟಾಣಿಗೆ ಸಿಹಿ ಸುದ್ದಿ. ಏನು ಗೊತ್ತೆ?
Kannada News: ದಿಯಾ ಹೆಗ್ಡೆ ರವರನ್ನು ಹುಡುಕಿಕೊಂಡು ಬಂದ ಅದೃಷ್ಟ: ರಾಜ್ಯವನ್ನೇ ಗೆದ್ದಿದ್ದ ಪುಟಾಣಿಗೆ ಸಿಹಿ ಸುದ್ದಿ. ಏನು ಗೊತ್ತೆ? 2

ಇದೀಗ ಕಳೆದ ವಾರ ಸರಿಗಮಪ ಕಾರ್ಯಕ್ರಮದಲ್ಲಿ ದೊಡ್ಮನೆ ವೈಭವ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮದ ಉದ್ದೇಶವೇ ಡಾಕ್ಟರ್ ರಾಜ್ (Dr. Rajkumar) ಕುಟುಂಬವನ್ನು ಸಂಭ್ರಮಿಸುವುದಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ (Shivarajkumar) ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಪಾಲ್ಗೊಂಡಿದ್ದರು. ಈ ವೇಳೆ ದಿಯಾ ಹೆಗಡೆ ಡಾ. ರಾಜ್ ಕುಮಾರ್ ಕುರಿತಾಗಿ ತಾನೇ ಸ್ವತಹ ಬರೆದಿದ್ದ ಹಾಡನ್ನು ಕಂಪೋಸ್ ಮಾಡಿ ವೇದಿಕೆಯಲ್ಲಿ ಹಾಡಿದಳು. ಇದೊಂದು ಹಾಡು ಕರುನಾಡಿನ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗಿತ್ತು. ಈ ಹಾಡನ್ನು ನೇರವಾಗಿ ಕೇಳಿದ ಶಿವಣ್ಣ, ಎಲ್ಲ ತೀರ್ಪುಗಾರರು ತಲೆದೋಗಿದ್ದರು. ಅಲ್ಲದೆ ಶಿವರಾಜ್ ಕುಮಾರ್ ಈ ಹಾಡು ಕೇಳಿ ಅಚ್ಚರಿ ವ್ಯಕ್ತಪಡಿಸಿದ್ದರು. ದಿಯಾ ಹೆಗಡೆ ಪ್ರತಿಭೆಯನ್ನು ಕಂಠಪೂರ್ತಿ ಪ್ರಶಂಸಿದ್ದ ಶಿವಣ್ಣ “ಎಂತಹ ಪ್ರತಿಭೆ! ನಮ್ಮ ಚಿತ್ರರಂಗಕ್ಕೆ ಮತ್ತೊಬ್ಬ ಉದಯಶಂಕರ್, ಹಂಸಲೇಖ ಸಿಕ್ಕಿಬಿಟ್ಟರು ಎಂದು ಹೊಗಳಿದ್ದರು. ಅಲ್ಲದೆ ತನ್ನ ಬಳಿಗೆ ಕರೆದು ಮುದ್ದು ಮಾಡಿ ಪ್ರೀತಿಯಿಂದ ಮುತ್ತು ಕೊಟ್ಟಿದ್ದರು. ಇದರ ಜೊತೆಗೆ ತನ್ನ ಪರ್ಸನಲ್ ನಂಬರ್ ಕೊಟ್ಟು ನಿನಗೆ ಏನು ಬೇಕಾದರೂ ನನಗೆ ಕರೆ ಮಾಡು ಎಂದು ಶಿವಣ್ಣ ಹೇಳಿದ್ದರು. ಈ ಒಂದು ದೃಶ್ಯ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೆ ತಮ್ಮ ಮುಂದಿನ ಸಿನಿಮಾಗೆ ದಿಯಾ ಹೆಗಡೆಗೆ ಅವಕಾಶ ನೀಡುವುದಾಗಿಯೂ ಸಹ ಶಿವಣ್ಣ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ದಿಯಾ ಶಿವಣ್ಣ ಅವರಿಂದ ಭರ್ಜರಿ ಆಫರ್ ಪಡೆದಿದ್ದಾಳೆ. ಇದನ್ನು ಓದಿ.. Kannada Astrology: ಮನೆಯಲ್ಲಿ ಅಪ್ಪಿ ತಪ್ಪಿಯೂ ಕೂಡ ಕನ್ನಡಿಯನ್ನು ಈ ದಿಕ್ಕಿನಲ್ಲಿ ಇಡಬೇಡಿ, ಹಣ ನಿಲ್ಲುವುದಿಲ್ಲ, ಕಷ್ಟ ಅನುಭವಿಸ್ತೀರಾ. ಯಾವ ದಿಕ್ಕು ಗೊತ್ತೇ?

Comments are closed.