Kannada News: ಮತ್ತೆ ತಮಿಳಿನಿಂದ ಬಂದ ಶೋಕಿ ರಾಜ: ಶಕ್ತಿಧಾಮದಲ್ಲಿ ದತ್ತು ತೆಗೆದುಕೊಳ್ಳುವ ಬಗ್ಗೆ ಇದೀಗ ಹೇಳಿದ್ದೇನು ಗೊತ್ತೇ??
Kannada News: ತಮಿಳು ನಟ ವಿಶಾಲ್ (Vishal) ಅವರು ಕನ್ನಡ ಚಿತ್ರರಂಗದ ಜೊತೆಗೆ ನಂಟು ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿ ನಡೆಯುವ ಚಿತ್ರರಂಗಕ್ಕೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳಲ್ಲಿ ಅವರು ಆಗಾಗ ಪಾಲ್ಗೊಳ್ಳುತ್ತಿರುತ್ತಾರೆ. ಅಲ್ಲದೇ ಅವರು ಈ ಹಿಂದೆ ಶಕ್ತಿಧಾಮವನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದರು. ನಟ ಪುನೀತ್ ರಾಜಕುಮಾರ್ (Puneeth Rajkumar) ಅವರು ನಿಧನರಾದಾಗ ಅವರ ಅಗಲಿಕೆಗೆ ಕಂಬನಿ ಮಿಡಿದು ಸಾಕಷ್ಟು ದುಃಖ ಪಟ್ಟಿದ್ದರು. ಇದೇ ವೇಳೆ ಪುನೀತ್ ಅವರನ್ನು ಸ್ಮರಿಸುವ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದ ನಟ ವಿಶಾಲ್ ಇಷ್ಟು ದಿನ ಪುನೀತ್ ಅವರು ಶಕ್ತಿಧಾಮವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು. ಇನ್ನು ಮುಂದೆ ಶಕ್ತಿದಾಮದ (Shakthidhama) ಮಕ್ಕಳನ್ನು ನಾನು ದತ್ತು ತೆಗೆದುಕೊಂಡು ಚೆನ್ನಾಗಿ ನಡೆಸುತ್ತೇನೆ ಎಂದು ಒಪ್ಪಿಕೊಂಡಿದ್ದರು. ಆದರೆ ಇದೀಗ ಇನ್ನೂ ಸಹ ಶಕ್ತಿ ದಾಮವನ್ನು ಏಕೆ ದತ್ತು ತೆಗೆದುಕೊಳ್ಳಲಾಗಿಲ್ಲ ಎಂದು ಮೈಸೂರಿನಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳು ನಟ ವಿಶಾಲ್ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದಲ್ಲಿಯೇ ನಡೆದಿದ್ದ ಆ ಕಾರ್ಯಕ್ರಮದಲ್ಲಿ ನಟ ವಿಶಾಲ್ ಪುನೀತ್ ಅವರನ್ನು ಸ್ಮರಿಸಿ ಮಾತನಾಡಿದರು. ಅವರ ಅಗಲಿಕೆಗೆ ಸಾಕಷ್ಟು ಭಾವುಕರಾಗಿ ಸ್ಪಂದಿಸಿದ ನಟ ವಿಶಾಲ್ ವೇದಿಕೆಯ ಮೇಲೆ ಪುನೀತ್ ಅವರು ಮುನ್ನಡೆಸುತ್ತಿದ್ದ ಶಕ್ತಿ ಧಾಮವನ್ನು ತಾವು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಈ ರೀತಿಯಾಗಿ ವಿಶಾಲ್ ಘೋಷಿಸಿದ ನಂತರ ಇವರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಕನ್ನಡ ಮತ್ತು ಕರ್ನಾಟಕದ ಮೇಲೆ ವಿಶಾಲ್ ಅವರಿಗೆ ಇರುವ ಅಭಿಮಾನವನ್ನು ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಆದರೆ ಇಂತಹದೊಂದು ಘೋಷಣೆ ಮಾಡಿ ಹಲವಾರು ತಿಂಗಳುಗಳೆ ಕಳಿದಿವೆ. ಇನ್ನೂ ಸಹ ವಿಶಾಲ ಅವರು ಶಕ್ತಿ ದಾಮದ ಮಕ್ಕಳನ್ನು ದತ್ತು ತೆಗೆದುಕೊಂಡಿಲ್ಲ. ಇದನ್ನು ಓದಿ..Kannada News: ಅವಾರ್ಡ್ ಸಮಾರಂಭದಲ್ಲಿ ರಶ್ಮಿಕಾ ಅಂದ ನೋಡಿ ಎಲ್ಲರೂ ಗಡ ಗಡ: ಚುಮು ಚುಮು ಚಳಿಯಲ್ಲಿ ತಾಪಮಾನ ಏರಿಕೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್.
ಈ ಕುರಿತಾಗಿ ಮಾಧ್ಯಮದವರು ಅವರನ್ನು ಪ್ರಶ್ನಿಸಿದಾಗ ಇನ್ನು ಸಹ ಶಕ್ತಿಧಾಮದ ಮಕ್ಕಳನ್ನು ತಾವು ಏಕೆ ದತ್ತು ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಸಮಜಯಿಷಿ ನೀಡಿದ್ದಾರೆ. ಈ ಉತ್ತರವನ್ನು ಕೇಳಿದ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಟ ವಿಶಾಲ್ ಇತ್ತೀಚಿಗೆ ಮೈಸೂರಿಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಮಾಧ್ಯಮದವರು ಅವರೊಂದಿಗೆ ಮಾತನಾಡುತ್ತಾ ಶಕ್ತಿದಾಮ ದತ್ತು ತೆಗೆದುಕೊಳ್ಳುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿಶಾಲ್ “ಶಕ್ತಿಧಾಮವನ್ನು ಶಿವರಾಜ್ ಕುಮಾರ್ (Shiva Rajkumar) ಮತ್ತು ಅವರ ಇಡೀ ಕುಟುಂಬ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದೆ. ಅಲ್ಲಿ ಯಾವುದೇ ಕುಂದುಕೊರತೆಗಳು ಇಲ್ಲ. ಹೀಗಾಗಿ ನಾನು ಶಕ್ತಿಧಾಮವನ್ನು ದತ್ತು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ” ಎಂದಿದ್ದಾರೆ.
ವಿಶಾಲ್ “ಪುನೀತ್ ಕುಟುಂಬದವರು ಇದಕ್ಕೆ ಒಪ್ಪಿಗೆ ಸೂಚಿಸಿದರೆ, ಖಂಡಿತ ಶಕ್ತಿದಾಮದ ಮಕ್ಕಳ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಆದರೆ ಆ ಜವಾಬ್ದಾರಿಯನ್ನು ಪುನೀತ್ ಅವರ ಕುಟುಂಬವೇ ನಡೆಸಿಕೊಂಡು ಹೋಗುವುದಾಗಿ ತಿಳಿಸಿರುವುದರಿಂದಾಗಿ ನಾನು ದತ್ತು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಆ ಅವಕಾಶ ನನಗೆ ಸಿಕ್ಕರೆ ನಾನು ಖಂಡಿತ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಹೇಳಿದ್ದಾರೆ. ಆದರೆ ವಿಶಾಲ್ ಅವರ ಉತ್ತರಕ್ಕೆ ಕಿಡಿಕಾರಿರುವ ನೆಟ್ಟಿಗರು ಶಕ್ತಿಧಾಮವನ್ನೇ ದತ್ತು ತೆಗೆದುಕೊಳ್ಳಬೇಕು ಎನ್ನುವ ಹಠವೇಕೆ? ಈಗಾಗಲೇ ಶಕ್ತಿದಾಮದ ಜವಾಬ್ದಾರಿಯನ್ನು ಪುನೀತ್ ಕುಟುಂಬ ನಡೆಸಿಕೊಂಡು, ನೋಡಿಕೊಂಡು ಹೋಗುತ್ತಿದೆ. ಇದೇ ಶಕ್ತಿಧಾಮ ಬೇಕೆನ್ನುವ ಮೊಂಡು ಹಠವನ್ನು ಬಿಟ್ಟು ಬೇರೆ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಜನರು ಕಿಡಿಕಾರಿದ್ದಾರೆ. ಇದನ್ನು ಓದಿ.. Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??
Comments are closed.