Kannada News: ರಾಜ್ಯದ ಮನ ಗೆದ್ದಿರುವ ದಿಯಾ ಹೆಗ್ಡೆ ರವರಿಗೆ ಹಂಸಲೇಖ ರವರ ಪತ್ನಿ ಕೊಟ್ಟ ಉಡುಗೊರೆ ಏನು ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ.
Kannada News: ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿರುವ ದಿಯಾ ಹೆಗಡೆ ತನ್ನ ಹಾಡುಗಾರಿಕೆ ಮತ್ತು ಸ್ವಂತ ಹಾಡನ್ನು ಬರೆದು ಹಾಡುವ ಪ್ರತಿಭೆಯಿಂದ ಮನೆ ಮಾತಾಗಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿಗೆ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಅದ್ಭುತವಾಗಿ ಹಾಡು ಬರೆದು ತಾನೇ ಕಂಪೋಸ್ ಮಾಡಿ ಹಾಡುವ ವಿಶಿಷ್ಟ ಕೌಶಲ ತನ್ನದಾಗಿಸಿಕೊಂಡಿದ್ದಾಳೆ. ಇದೇ ಕಾರಣಕ್ಕೆ ಪ್ರತಿ ವಾರವೂ ಕೂಡ ದಿಯಾ ಈ ಬಾರಿ ಯಾವ ಹಾಡು ಹಾಡುತ್ತಾಳೆ, ಯಾರ ಬಗ್ಗೆ ಹಾಡು ಹಾಡುತ್ತಾಳೆ ಎಂದು ಜನ ಕಾದು ಕುಳಿತುಕೊಳ್ಳುವಷ್ಟರ ಮಟ್ಟಿಗೆ ದಿಯಾ ಜನಪ್ರಿಯತೆ ಪಡೆದುಕೊಂಡಿದ್ದಾಳೆ. ಇದೀಗ ದಿಯಾಳಿಗೆ ಹಂಸಲೇಖ ಅವರ ಪತ್ನಿ ಭರ್ಜರಿ ಗಿಫ್ಟ್ ಒಂದನ್ನು ನೀಡಿದ್ದಾರೆ.
ದಿಯಾ ಪ್ರತಿ ವಾರವೂ ಕೂಡ ಹಾಡು ಹಾಡುವುದು ಮಾತ್ರವಲ್ಲದೆ ವಿಶೇಷ ಸಂದರ್ಭಗಳಲ್ಲಿ ತಾನೆ ಸ್ವಂತ ಹಾಡನ್ನು ಬರೆದು ವೇದಿಕೆಯಲ್ಲಿ ಅದನ್ನು ಪ್ರಸ್ತುತಪಡಿಸುವ ರೀತಿ ನಿಜಕ್ಕೂ ಮೆಚ್ಚುವಂತದ್ದೇ. ಇದುವರೆಗೂ ದಿಯ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಹಾಡು ಬರೆದು ಹಾಡಿದ್ದಾಳೆ. ಇದು ಜಡ್ಜಸ್ ಸೇರಿದಂತೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ದಿಯಾ ಹೆಗಡೆ ಇಂಟರ್ನೆಟ್ ಫೇವರೆಟ್ ಎಂದು ಹೇಳಬಹುದು. ಎಲ್ಲ ಕಡೆ ಅವಳ ಕುರಿತ ಮಾತುಗಳೇ, ಪೋಸ್ಟ್ಗಳು ಕಂಡು ಬರುತ್ತವೆ. ಹರಳು ಹುರಿದಂತೆ ಮಾತನಾಡುವ, ಮುದ್ದಾಗಿ ಹಾಡುವ ಎಲ್ಲರ ಪ್ರೀತಿಗೂ ಪಾತ್ರಳಾಗಿರುವ ದಿಯಾ ಹೆಗಡೆ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಇದನ್ನು ಓದಿ..Kannada News: ಧ್ರುವ ಸರ್ಜಾ ಗಾಗಿ ರೇಷ್ಮಾ ಅಲ್ಲ, ಮತ್ತೊಬ್ಬಳು ಅಪ್ಸರೆ ಫಿಕ್ಸ್ ಆದ್ರ?? ಆಯ್ಕೆಯಾಗುತ್ತಿವೆ ಅಪ್ಪಟ ಬಂಗಾರ ಯಾರು ಗೊತ್ತೇ??
ಇತ್ತೀಚಿಗಷ್ಟೇ ಹಂಸಲೇಖ ಅವರಿಗಾಗಿಯೇ ವಿಶೇಷವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸರಿಗಮಪ ಶೋನಲ್ಲಿ ಹಂಸಲೇಖ ಅವರಿಗೆ ಡೆಡಿಕೇಟೆಡ್ ಸಂಚಿಕೆಯನ್ನು ರೂಪಿಸಲಾಗಿತ್ತು. ಈ ವೇಳೆಯೂ ಕೂಡ ದಿಯಾ ಅದ್ಬುತವಾಗಿ ಹಂಸಲೇಖ ಅವರ ಕುರಿತಾಗಿ ಹಾಡು ಹಾಡಿದಳು. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ಇದೀಗ ಹಂಸಲೇಖ ಅವರ ಪತ್ನಿ ದಿಯಾ ಗೆ ಭರ್ಜರಿ ಗಿಫ್ಟ್ ಒಂದನ್ನು ನೀಡಿದ್ದಾರೆ. ದಿಯಾಳ ಹಾಡುಗಾರಿಕೆ, ಆಕೆಯ ಪ್ರತಿಭೆಯನ್ನು ಕಂಡು ಮೆಚ್ಚಿಕೊಂಡಿರುವ ಹಂಸಲೇಖ ಅವರ ಪತ್ನಿ ದಿಯಾಳಿಗೆ ಉಡುಗೊರೆ ಒಂದನ್ನು ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಂಸಲೇಖ ಅವರ ಪತ್ನಿಯ ಪಕ್ಕದಲ್ಲಿ ಕುಳಿತಿರುವ ದಿಯಾ ಆ ಗಿಫ್ಟ್ ಓಪನ್ ಮಾಡಿದ್ದಾಳೆ. ಅಂದ ಹಾಗೆ ಹಂಸಲೇಖ ಅವರ ಪತ್ನಿ ದಿಯಾಳಿಗೆ ಚಿನ್ನದ ಉಂಗುರವನ್ನು ಪ್ರೀತಿಯಿಂದ ಗಿಫ್ಟ್ ಮಾಡಿದ್ದಾರೆ. ಇದನ್ನು ಓದಿ..Kannada News: ಅಪ್ಪು ಜೊತೆ ನಟಿಸಿದ್ದ ಈ ನಟಿಗೆ ಹುಟ್ಟುಹಬ್ಬ; ಈಕೆ ವಯಸ್ಸು ಕೇಳಿದರೆ, ನೀವು ನಂಬೋದೇ ಇಲ್ಲ. ಈಗಲೂ ಈಕೆಯನ್ನು ನೋಡಿದರೆ..
Comments are closed.