Kannada News: ರೋಹಿಣಿ ರವರ ಫೋಟೋ ಬಿಡುಗಡೆ ಮಾಡಿದ್ದ ಐಪಿಎಸ್ ರೂಪರವರಿಗೆ ಎರಡನೇ ಶಾಕ್? ವರ್ಗಾವಣೆ ನಂತರ ಏನಾಗುತ್ತಿದೆ ಗೊತ್ತೇ?

Kannada News: ಐಪಿಎಸ್ ಅಧಿಕಾರಿ ಡಿ ರೂಪ (D Roopa) ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರ ನಡುವಿನ ಆರೋಪ ಪ್ರತ್ಯಾರೋಪಗಳ ಬಿಸಿ ಏರುತಲೆ ಹೋಗುತ್ತಿದೆ. ರೂಪ ಅವರು ರೋಹಿಣಿಯವರ ಕೆಲವು ಖಾಸಗಿ ಫೋಟೋಗಳನ್ನು ಲೀಕ್ ಮಾಡಿದ್ದರು. ಇದು ಎಲ್ಲೆಡೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ರೂಪ ಅವರ ಈ ನಡೆಯಿಂದಾಗಿ ರೋಹಿಣಿ ಕೋಪಗೊಂಡಿದ್ದರು. ಮಾಧ್ಯಮದಲ್ಲಿ ಈ ಪ್ರಕರಣ ದೊಡ್ಡ ಸುದ್ದಿ ಆಯಿತು. ರೋಹಿಣಿ ಅವರ ಕುರಿತಾದ ಕೆಲವು ಖಾಸಗಿ ಫೋಟೋಗಳನ್ನು ರೂಪ ಅವರು ತಮ್ಮ ಸೋಶಿಯಲ್ ಮೀಡಿಯಾ ಮುಖಾಂತರ ಹಂಚಿಕೊಂಡಿದ್ದರು. ಈ ಪ್ರಕರಣ ದಿನದಿಂದ ದಿನಕ್ಕೆ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತಿರುವಾಗ ಇದೀಗ ರೂಪ ಅವರಿಗೆ ಕಾನೂನಿನ ತೊಡಕು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರೋಹಿಣಿಯವರ ಖಾಸಗಿ ಫೋಟೋಗಳನ್ನು ಹಂಚಿಕೊಂಡು ರೂಪ ಅವರು ಅವರ ಮೇಲೆ ಹಲವಾರು ಆರೋಪಗಳನ್ನು ಹೊರಿಸಿದ್ದರು. ಇನ್ನೂ ರೂಪ ಅವರ ಆರೋಪಗಳಿಗೆ ಪ್ರತಿಯಾಗಿ ರೋಹಿಣಿಯವರು ಕೂಡ ಹಲವಾರು ಪ್ರತ್ಯಾರೂಪಗಳನ್ನು ಮಾಡಿದ್ದರು. ಮಾಧ್ಯಮದಲ್ಲಿ ಇಬ್ಬರು ಅಧಿಕಾರಿಗಳ ದೋಷಾರೋಪಣೆ ದೊಡ್ಡ ಸಂಚಲನ ಸೃಷ್ಟಿಸಿತ್ತು. ಪರಸ್ಪರ ಇಬ್ಬರೂ ಕೂಡ ಉತ್ತಮ ಸ್ಥಾನದಲ್ಲಿದ್ದರೂ ಸಹ ಈ ರೀತಿಯಾಗಿ ಬೀದಿ ರಂಪಾಟ ಮಾಡುತ್ತಿರುವುದು ಸರ್ಕಾರಕ್ಕೆ ಮುಜುಗರದ ಸಂಗತಿಯಾಗಿ ಪರಿಣಮಿಸಿತ್ತು. ಸಾರ್ವಜನಿಕವಾಗಿಯೂ ಕೂಡ ಇದು ಉತ್ತಮ ಬೆಳವಣಿಗೆಯಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿತ್ತು. ಇದನ್ನು ಓದಿ..Kannada News: ಈ ಫೋಟೋದಲ್ಲಿ ಇರುವ ಹುಡುಗಿ ಯಾರು ಗೊತ್ತೇ? ಒಂದೇ ಹಾಡಿನಿಂದ ದೇಶವನ್ನೇ ಬೆಚ್ಚಿ ಬೀಳಿಸಿದ ಟಾಪ್ ನಟಿ ಯಾರು ಗೊತ್ತೇ??

kannada news fir might file against roopa | Kannada News: ರೋಹಿಣಿ ರವರ ಫೋಟೋ ಬಿಡುಗಡೆ ಮಾಡಿದ್ದ ಐಪಿಎಸ್ ರೂಪರವರಿಗೆ ಎರಡನೇ ಶಾಕ್? ವರ್ಗಾವಣೆ ನಂತರ ಏನಾಗುತ್ತಿದೆ ಗೊತ್ತೇ?
Kannada News: ರೋಹಿಣಿ ರವರ ಫೋಟೋ ಬಿಡುಗಡೆ ಮಾಡಿದ್ದ ಐಪಿಎಸ್ ರೂಪರವರಿಗೆ ಎರಡನೇ ಶಾಕ್? ವರ್ಗಾವಣೆ ನಂತರ ಏನಾಗುತ್ತಿದೆ ಗೊತ್ತೇ? 2

ಇನ್ನು ರೂಪ ಮತ್ತು ರೋಹಿಣಿಯವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ. ಈ ಇಬ್ಬರು ಅಧಿಕಾರಿಗಳು ಅಧಿಕಾರ ಅಥವಾ ತಮ್ಮ ವೈಯಕ್ತಿಕವಾಗಿ ಯಾವುದೇ ಒಂದು ಆರೋಪಗಳಿದ್ದರೂ ಅದನ್ನು ಕಾನೂನಿನ ಚೌಕಟ್ಟಿನಲ್ಲಿ, ತಮ್ಮ ಅಧಿಕಾರ ಹಂತದಲ್ಲಿ ಬಗೆಹರಿಸಿಕೊಳ್ಳಬೇಕು. ಸಂಬಂಧ ಪಟ್ಟ ಇಲಾಖೆ ಮತ್ತು ವಿಭಾಗದಲ್ಲಿ ದೂರು ನೀಡಬೇಕು. ಇನ್ನು ಮುಂದೆ ಈ ವಿಚಾರವಾಗಿ ಮಾಧ್ಯಮದವರ ಮುಂದೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪೋಸ್ಟ್ ಹಂಚಿಕೊಳ್ಳಬಾರದು ಎಂದು ಆದೇಶಿಸಿದೆ. ಇತ್ತ ಕಡೆ ರೋಹಿಣಿಯವರ ಪತಿ ಸುಧೀರ್ ರೆಡ್ಡಿ ತಮ್ಮ ಮತ್ತು ರೋಹಿಣಿ ಮೇಲೆ ಮಾಡಲಾಗಿರುವ ಆರೋಪಗಳ ಕುರಿತಾಗಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ರೂಪ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಫೋನ್ ಹ್ಯಾಕ್, ಫೋನ್ ಟ್ಯಾಪ್ ಸೇರಿದಂತೆ ವಿವಿಧ ದೂರುಗಳನ್ನು ದಾಖಲಿಸಿದ್ದು, ರೂಪ ಅವರ ಮೇಲೆ ಎಫ್ ಐ ಆರ್ ದಾಖಲಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಕಾಂತಾರ 2 ಸಿನಿಮಾದಲ್ಲಿ ರಿಷಬ್ ಜೊತೆ ದೇಶ ಕಂಡ ಮಹಾನ್ ನಟ ನಟನೆ?? ಇದೇನಿದು ಹೊಸ ಸುದ್ದಿ, ಈ ಬಾರಿ 1000 ಕೋಟಿ ಫಿಕ್ಸ್ ಆಯ್ತಾ??

Comments are closed.