Kannada News: ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೆ ನಿಂತಲ್ಲೇ 10 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ? ಜಸ್ಟ್ ಹೀಗೆ ಮಾಡಿ ಸಾಕು.

Kannada News: ಸರ್ಕಾರವು ನಿರಂತರವಾಗಿ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುತ್ತಿರುತ್ತದೆ. ಅದರಲ್ಲೂ ಕೂಡ ಹೊಸದಾಗಿ ವ್ಯಾಪಾರ, ಉದ್ಯಮವನ್ನು ಶುರು ಮಾಡುವವರಿಗಾಗಿ ಅನೇಕ ಯೋಜನೆಗಳನ್ನು ತಂದಿದೆ. ಹೊಸದಾಗಿ ಹೊಸ ಉದ್ಯಮವನ್ನು ಆರಂಭಿಸುವ ಗುರಿ ಹೊಂದಿರುವ ಉದ್ಯಮಿಗಳಿಗೆ ಸಾಲ ಯೋಜನೆಯನ್ನು ಕೂಡ ಸರ್ಕಾರ ರೂಪಿಸಿದೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮುದ್ರಾ ಸಾಲ ಯೋಜನೆಯನ್ನು ಅಂಥವರಿಗಾಗಿ ರೂಪಿಸಿದ್ದು ಈ ಯೋಜನೆಯಿಂದಾಗಿ 10 ಲಕ್ಷ ರೂಪಾಯಿಯವರೆಗೂ ಕೂಡ ಸಾಲ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ? ಏನೆಲ್ಲ ಅರ್ಹತೆಗಳು ಮತ್ತು ದಾಖಲೆಗಳನ್ನು ಒದಗಿಸಬೇಕು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಮುಖಾಂತರ ಹೊಸ ಉದ್ಯಮ ಶುರು ಮಾಡುವವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿವರೆಗೂ ಕೂಡ ಸಾಲ ನೀಡಲಾಗುತ್ತದೆ. ವಾಣಿಜ್ಯ ಬ್ಯಾಂಕ್‌ಗಳು, ಆರ್‌ಆರ್‌ಬಿಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಎಂಎಫ್‌ಐಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಸಾಲ ಪಡೆದುಕೊಳ್ಳುವ ಅನುಕೂಲ ಕಲ್ಪಿಸಲಾಗಿದೆ. ಈ ಸಾಲವನ್ನು ಮೂರರಿಂದ ಐದು ವರ್ಷಗಳ ಅವಧಿಗೆ ಮರುಪಾವತಿ ಮಾಡಬೇಕು. ಮೊದಲಿಗೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ ಈ ಸಾಲ ಯೋಜನೆಯ ಅಧಿಕೃತ ಫಾರ್ಮ್ ಪಡೆದು ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಜೊತೆಗೆ ಸಂಬಂಧ ಪಟ್ಟ ದಾಖಲಾತಿಗಳನ್ನು ಕೂಡ ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಈ ಮೂಲಕ ನೀವು ಈ ಸಾಲ ಯೋಜನೆಗೆ ಅರ್ಹತೆ ಪಡೆದಿದ್ದರೆ ಶೀಘ್ರವೇ ನಿಮ್ಮ ಉದ್ಯಮಕ್ಕೆ ಸಾಲ ಲಭಿಸುತ್ತದೆ. ಜೊತೆಗೆ ಈ ಯೋಜನೆಯ ಅಧಿಕೃತ ಜಾಲತಾಣ udyamimitra.in ಗೆ ಭೇಟಿ ನೀಡುವ ಮೂಲಕ ಅಲ್ಲಿ ಎಲ್ಲಾ ಮಾಹಿತಿ ಮತ್ತು ವಿವರವನ್ನು ಪಡೆದು ನೇರವಾಗಿ ಅಲ್ಲಿಯೇ ಅರ್ಜಿ ಸಲ್ಲಿಸುವ ಅವಕಾಶವನ್ನು ಸಹ ನೀಡಲಾಗಿದೆ. ಇದನ್ನು ಓದಿ..Kannada News: ರೋಹಿಣಿ ರವರ ಫೋಟೋ ಬಿಡುಗಡೆ ಮಾಡಿದ್ದ ಐಪಿಎಸ್ ರೂಪರವರಿಗೆ ಎರಡನೇ ಶಾಕ್? ವರ್ಗಾವಣೆ ನಂತರ ಏನಾಗುತ್ತಿದೆ ಗೊತ್ತೇ?

kannada news mudra loan details in kannada | Kannada News: ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೆ ನಿಂತಲ್ಲೇ 10 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ? ಜಸ್ಟ್ ಹೀಗೆ ಮಾಡಿ ಸಾಕು.
Kannada News: ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೆ ನಿಂತಲ್ಲೇ 10 ಲಕ್ಷ ಸಾಲ ಪಡೆಯುವುದು ಹೇಗೆ ಗೊತ್ತೇ? ಜಸ್ಟ್ ಹೀಗೆ ಮಾಡಿ ಸಾಕು. 2

ಈ ಸಾಲ ಪಡೆಯಲು ನೀವು ಸಂಪೂರ್ಣ ವ್ಯಾಪಾರ ಯೋಜನೆಯ ಅರ್ಹತೆ ಹೊಂದಿರಬೇಕು. ಅಗತ್ಯ ದಾಖಲಾತಿಗಳ ಜೊತೆಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವಿಳಾಸ ದಾಖಲೆ, ಆರು ತಿಂಗಳ ಬ್ಯಾಂಕ್ ನ ವಹಿವಾಟಿನ ವಿವರ ಇತ್ಯಾದಿ ಯೋಗ್ಯ ದಾಖಲೆಗಳನ್ನು ಸಲ್ಲಿಸಿ ಸಾಲ ಯೋಜನೆಯನ್ನು ಮಾನ್ಯಗೊಳಿಸಿಕೊಳ್ಳಬಹುದು. ಈ ಸಲ ಯೋಜನೆಗೆ ಯಾವುದೇ ನಿರ್ದಿಷ್ಟ ಬಡ್ಡಿದರ ಇರುವುದಿಲ್ಲ. ಕನಿಷ್ಠ 12% ಬಡ್ಡಿದರದಿಂದ ಈ ಸಾಲ ಯೋಜನೆ ಆರಂಭವಾಗುತ್ತದೆ. ಈ ಯೋಜನೆಯಿಂದ ಪಡೆದ ಸಾಲವನ್ನು ನೀವು ನಿಮ್ಮ ವ್ಯಾಪಾರಕ್ಕಾಗಿ ಮಾತ್ರ ಬಳಸಬೇಕು. ವ್ಯಾಪಾರ ಉದ್ದೇಶದ ಹೊರತಾಗಿ ಬೇರೆ ಯಾವುದೇ ಚಟುವಟಿಕೆಗೆ ಈ ಹಣದ ವಿನಿಯೋಗ ಮಾಡುವಂತಿಲ್ಲ. ಈ ರೀತಿಯಾಗಿ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯಿಂದಾಗಿ ಹೊಸದಾಗಿ ಉದ್ಯಮದ ಯೋಚನೆಯಲ್ಲಿರುವವರು ಅತ್ಯುತ್ತಮ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ 10 ಲಕ್ಷ ರೂಪಾಯಿವರೆಗೆ ಸಾಲದ ಪ್ರಯೋಜನ ಪಡೆದುಕೊಳ್ಳುವುದರ ಜೊತೆಗೆ ಈ ಯೋಜನೆ ಅಡಿಯಲ್ಲಿ ಸಹಾಯಧನದ ಉಪಯೋಗವೂ ಇರಲಿದೆ. ಇದನ್ನು ಓದಿ..Kannada News: ಈ ಫೋಟೋದಲ್ಲಿ ಇರುವ ಹುಡುಗಿ ಯಾರು ಗೊತ್ತೇ? ಒಂದೇ ಹಾಡಿನಿಂದ ದೇಶವನ್ನೇ ಬೆಚ್ಚಿ ಬೀಳಿಸಿದ ಟಾಪ್ ನಟಿ ಯಾರು ಗೊತ್ತೇ??

Comments are closed.