Kannada News: ಪ್ರೇಕ್ಷಕರು ಕಾಯುತ್ತಿದ್ದ ಆ ಕ್ಷಣ ಬಂದೆ ಬಿಡ್ತು, ಕೆಂಡಸಂಪಿಗೆಯಲ್ಲಿ ಬಾರಿ ಟ್ವಿಸ್ಟ್. ಏನಾಗಿದೆ ಗೊತ್ತೇ??
Kannada News: ಕಲರ್ಸ್ ಕನ್ನಡದಲ್ಲಿ (Colors Kannada) ಕೆಂಡಸಂಪಿಗೆ (Kendasampige) ಧಾರವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:30ಕ್ಕೆ ಪ್ರಸಾರವಾಗುತ್ತಿದೆ. ಇತ್ತೀಚಿಗೆ ಕೆಲವು ತಿಂಗಳ ಹಿಂದೆ ಶುರುವಾದ ಈ ದಾರಾವಾಹಿ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ದಿನದಿಂದ ದಿನಕ್ಕೆ ಈ ಧಾರವಾಹಿಯನ್ನು ನೋಡುವವರ ಸಂಖ್ಯೆ ಹೆಚ್ಚುತಲೆ ಇದೆ. ಸದ್ಯ ಈ ದಾರಾವಾಹಿ 6:30 ಪ್ರಸಾರವಾಗುವ ಎಲ್ಲ ವಾಹಿನಿಗಳ ಧಾರವಾಹಿಗಳ ಪೈಕಿ ಮೊದಲ ಸ್ಥಾನದಲ್ಲಿದ್ದು, ಕಲರ್ಸ್ ಕನ್ನಡದ ಟಾಪ್ ಸೀರಿಯಲ್ ಆಗಿದೆ. ಪ್ರತಿ ವಾರವೂ ಕೂಡ ಈ ಧಾರವಾಹಿ ಹೆಚ್ಚಿನ ಟಿ ಆರ್ ಪಿ ಪಡೆದುಕೊಳ್ಳುತ್ತಿದ್ದು ನಂಬರ್ ಒನ್ ಆಗುವ ಕಡೆಗೆ ಮುನ್ನುಗುತ್ತಿದೆ ಎಂದು ಹೇಳಬಹುದು.
ಕಾರ್ಪೊರೇಟರ್ ಆಗುವ ಉದ್ದೇಶ ಹೊಂದಿರುವ ತೀರ್ಥಂಕರ್ ಮತ್ತು ಒಂದು ಸಾಮಾನ್ಯ ಮಧ್ಯಮ ವರ್ಗದ ಹುಡುಗಿ ಸುಮನ ಇವರಿಬ್ಬರ ನಡುವಿನ ಕಥೆಯೇ ಕೆಂಡಸಂಪಿಗೆಯಾಗಿದೆ. ಒಂದು ಕಡೆ ಏನೂ ತಿಳಿಯದ, ಕುಟಿಲ ಅರ್ಥವಾಗದ, ಎಲ್ಲರನ್ನೂ ಗೌರವಿಸಿ ಪ್ರೀತಿಯಿಂದ ಕಾಣುವ ಸುಮನ. ಮತ್ತೊಂದು ಕಡೆ ಎಲ್ಲವನ್ನು ರಾಜಕೀಯ ದೃಷ್ಟಿಯಿಂದ ನೋಡುವ ಮತ್ತು ಕಾರ್ಪೊರೇಟ್ ಆಗಲು ಜನರನ್ನು ಹೇಗೆ ಬಳಸಿಕೊಳ್ಳಬೇಕು ಎಂದೇ ಯೋಚಿಸುವ ರಾಜಕೀಯ ಮನಸ್ಥಿತಿಯ ತೀರ್ಥಂಕರ. ಇಬ್ಬರ ನಡುವಿನ ಕಥೆಯನ್ನು ಸುಂದರವಾಗಿ ಕೆಂಡಸಂಪಿಗೆ ಧಾರವಾಹಿಯಲ್ಲಿ ಹೆಣೆಯಲಾಗಿದೆ. ಇದನ್ನು ಓದಿ..Kannada News: ಮದುವೆಯಾಗಿ 100 ದಿನ ಪೂರೈಸಿದ ಬಳಿಕ ರವೀಂದ್ರನ್ ತನ್ನ ಮುದ್ದಾದ ಹೆಂಡತಿ ಬಗ್ಗೆ ಹೇಳಿದ್ದೇನು ಗೊತ್ತೇ? ತಿಳಿದರೆ ಮೈಯೆಲ್ಲಾ ಜುಮ್ ಅನ್ನುತ್ತದೆ.
ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿರುವ ಕೆಂಡಸಂಪಿಗೆ ಇದೀಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಸುಮನ ವಾರ್ಡ್ ನ ಎಲ್ಲ ಜನರ ವೋಟ್ ಗಳನ್ನು ಸೆಳೆಯುವ ಕಾರಣಕ್ಕಾಗಿ ಕಾರ್ಪೊರೇಟ್ ಸ್ಥಾನದ ಆಕಾಂಕ್ಷಿಯಾಗಿದ್ದ ತೀರ್ಥಂಕರ್ ಸುಮನಾಳನ್ನು ಮದುವೆಯಾಗುತ್ತಾನೆ. ಆದರೆ ಇದಾವುದೂ ತಿಳಿಯದ ಸುಮನ ತೀರ್ಥಂಕರ್ ತುಂಬಾ ಒಳ್ಳೆಯವನು ಎಂದೇ ಭಾವಿಸಿದ್ದಾಳೆ. ಮತ್ತು ಆಕೆ ಅವನ ಮೇಲೆ ಅಪಾರವಾದ ಗೌರವ ಪ್ರೀತಿಯನ್ನು ಇಟ್ಟುಕೊಂಡಿದ್ದಾಳೆ. ಈ ರೀತಿಯಾಗಿ ಸಾಮಾನ್ಯ ಹುಡುಗಿಯನ್ನು ತೀರ್ಥಂಕರ್ ಮದುವೆಯಾಗಿದ್ದು ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ. ಆದರೆ ತೀರ್ಥಂಕರ್ ತಾಯಿ ಅಂದರೆ ಸುಮ್ಮನಾ ಅತ್ತೆ ಒಪ್ಪಿಕೊಂಡಿದ್ದಾರೆ. ಇಡೀ ಮನೆಯಲ್ಲಿ ಸುಮನಾಳನ್ನು ಬೆಂಬಲಿಸುವುದು ಕೇವಲ ಆಕೆಯ ಅತ್ತೆ ಮಾತ್ರ.
ಇದೀಗ ಸುಮನ ತೀರ್ಥಂಕರ್ ಸಂಬಂಧ ಮತ್ತೊಂದು ಹಂತಕ್ಕೆ ಹೋಗಿದೆ ಎಂದೇ ಹೇಳಬಹುದು. ಇದೀಗ ಈ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ತೀರ್ಥಂಕರ್ ಗೆ ಸುಮನಾ ಮೇಲೆ ಪ್ರೀತಿ ಸ್ವಲ್ಪ ಸ್ವಲ್ಪವೇ ಹೆಚ್ಚುತ್ತಿದೆ ಎಂದು ಹೇಳಬಹುದು. ಇವರಿಬ್ಬರ ನಡುವಿನ ಸಂಬಂಧ ಮತ್ತೊಂದು ಹಂತಕ್ಕೆ ಹೋಗಿದೆ. ಇದರ ಬೆನ್ನಲ್ಲೇ ತೀರ್ಥಂಕರ ಸುಮನಾಳಿಗೆ ಇಷ್ಟವಾಗುವ ರೀತಿ ನಡೆದುಕೊಳ್ಳುತ್ತಿದ್ದಾನೆ. ನಿನ್ನೆಯ ಸಂಚಿಕೆಯಲ್ಲಿ ತೀರ್ಥಂಕರ್ ಎಲ್ಲಿಗೋ ಹೊರಡುವಂತೆ ಬಟ್ಟೆ ಪ್ಯಾಕ್ ಮಾಡಿಕೊಳ್ಳುತ್ತಿರುತ್ತಾನೆ. ಇದನ್ನು ನೋಡಿದ ಸುಮನ ನೀವು ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದಿರಲ್ಲ, ಈಗ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುತ್ತಾಳೆ. ಇದನ್ನು ಓದಿ..Kannada News: ಮದುವೆಯಾಗಿ ಹತ್ತು ವರ್ಷ ಆದಮೇಲೆ ತಾಯಿಯಾದರೂ, ಚಿರು ಕುಟುಂಬದಲ್ಲಿ ಇಲ್ಲ ಸಂತೋಷ. ರಾಮ್ ಚರಣ್ ತಾಯಿ ಮಾಡಿದ್ದೇನು ಗೊತ್ತೇ?
ಆಗ ನಾನು ಬೇರೆ ಕಡೆ ಎಲ್ಲಿಗೋ ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ. ಆಗ ಆದರೆ ಅತ್ತೆ ಬೇಡ ಎಂದಿದ್ದರಲ್ಲ ಎಂದು ಹೇಳುತ್ತಾಳೆ. ಆಗ ತೀರ್ಥಂಕರ್ ಕೇವಲ ನಾನು ಮಾತ್ರ ಹೋಗುತ್ತಿಲ್ಲ. ನೀನು ಸಹ ನನ್ನ ಜೊತೆಗೆ ಬರುತ್ತಿದ್ದೀಯ ಎನ್ನುತ್ತಾನೆ. ಆಶ್ಚರ್ಯ ಪಟ್ಟುಕೊಂಡ ಸುಮನ ಇಲ್ಲ ನಾನು ಅತ್ತೆಯನ್ನು ಬಿಟ್ಟು ಎಲ್ಲಿಗೂ ಬರುವುದಿಲ್ಲ ಎಂದು ಹೇಳುತ್ತಾಳೆ. ಆಗ ನಾವಿಬ್ಬರೂ ಹೋಗುತ್ತಿರುವುದು ನಿಮ್ಮ ತಂದೆಯ ಮನೆಗೆ ಎಂದು ಹೇಳುತ್ತಾನೆ.ಬ್ಈ ಮಾತನ್ನು ಕೇಳಿದ ತಕ್ಷಣ ಸುಮನ ಆಶ್ಚರ್ಯ ಪಡುತ್ತಾಳೆ. ಹೌದು ನಿಜವಾಗಿಯೂ ನಾವು ನಿಮ್ಮ ತಂದೆಯ ಮನೆಗೆ ಹೋಗುತ್ತಿದ್ದೇವೆ. ಅವರಿಗೆ ಅಳಿಯನನ್ನು ಕರೆಸಿ, ಆತಿತ್ಯ ನೀಡಿ ಒಳ್ಳೆಯ ಊಟ ಹಾಕಬೇಕು ಎಂದು ಆಸೆ ಇತ್ತಲ್ಲವೇ? ಅವರ ಆಸೆಯನ್ನು ಈಡೇರಿಸುವುದಕ್ಕಾಗಿ ನಾವಿಬ್ಬರೂ ಈಗ ನಿಮ್ಮ ತಂದೆಯ ಮನೆಗೆ ಹೋಗುತ್ತಿದ್ದೇವೆ ಎಂದು ಹೇಳುತ್ತಾನೆ.
ಇದನ್ನು ಕೇಳಿ ಸುಮನ ತುಂಬಾ ಖುಷಿ ಪಡುತ್ತಾಳೆ. ತನಗಾಗಿ ತನ್ನ ತಂದೆ ಕುಟುಂಬದವರಿಗಾಗಿ ತೀರ್ಥಂಕರ್ ಇಷ್ಟೆಲ್ಲ ಮಾಡುತ್ತಿರುವುದರಿಂದಾಗಿ ಅವಳಿಗೆ ಸಂತೋಷವಾಗುತ್ತದೆ. ಜೊತೆಗೆ ತೀರ್ಥಂಕರ್ ಮೇಲೆ ಇನ್ನಷ್ಟು ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತದೆ. ಅಂದಹಾಗೆ ಕೆಂಡಸಂಪಿಗೆಯಲ್ಲಿ ಈ ಜೋಡಿಯ ಸಂಬಂಧ ಇನ್ನಷ್ಟು ಉತ್ತಮಗೊಳ್ಳುತ್ತಿದೆ ಎಂದು ಹೇಳಬಹುದು. ನಿಧಾನವಾಗಿ ತೀರ್ಥಂಕರಿಗೆ ಸುಮನಾ ಮೇಲೆ ಪ್ರೀತಿ ಆಗುತ್ತಿದೆ, ಅಲ್ಲದೆ ಇದೀಗ ಆತ ಸುಮನ ತಂದೆಯ ಮನೆಗೆ ಹೋಗುವ ನಿರ್ಧಾರ ಮಾಡಿದ್ದಾನೆ. ಆದರೆ ನಿಜವಾಗಿಯೂ ಸುಮನಾಳ ಪ್ರೀತಿಗಾಗಿ ಇಷ್ಟೆಲ್ಲ ಮಾಡುತ್ತಿದ್ದಾನ ಅಥವಾ ಇದರ ಹಿಂದೆಯೂ ಏನಾದರೂ ರಾಜಕೀಯ ಇದೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ನಿಜಕ್ಕೂ ಇದು ಪ್ರೀತಿಗಾಗಿ ಅಥವಾ ರಾಜಕೀಯ ಕುಟಿಲತೆಯ ಎನ್ನುವುದನ್ನು ಕೆಂಡಸಂಪಿಗೆ ಧಾರವಾಹಿಯನ್ನು ನೋಡಿಯೇ ತಿಳಿಯಬೇಕಿದೆ. ಇದನ್ನು ಓದಿ..Kannada News: ನಟನೆ ಅದ್ಭುತ, ಸೌಂದರ್ಯವಂತೂ ದೇವಲೋಕದ ಅಪ್ಸರೆಯಂತೆ, ಯಶಸ್ವಿ ನಟಿಯಾದರು ಭಾವನಾ ಮದುವೆಯಾಗಿಲ್ಲ ಯಾಕೆ ಗೊತ್ತೇ??
Comments are closed.