Kannada News: ಹೀನಾಯವಾಗಿ ಸೋತ ತಕ್ಷಣ ಮಸೀದಿಗಳಿಗೆ ಶಾಕ್ ಕೊಟ್ಟ KGF ಬಾಬು. ಬೇಕಾಬಿಟ್ಟಿ ಹಣ ಹಂಚಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ?
Kannada News: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದ ಶ್ರೀಮಂತ ಅಭ್ಯರ್ಥಿ ಕೆಜಿಎಫ್ ಬಾಬು ಅವರು, ಎಲೆಕ್ಷನ್ ಸಮಯದಲ್ಲಿ ಸುಮಾರು 64 ಮಸೀದಿಗಳಿಗೆ ₹17.30 ಕೋಟಿ ರೂಪಾಯಿ ಬೆಲೆ ಬಾಳುವ ಚೆಕ್ ಅನ್ನು ಹಂಚಿದ್ದರು. ಆದರೆ ಎಲೆಕ್ಷನ್ ನಲ್ಲಿ ಸೋತ ನಂತರ ತಾವು ಕೊಟ್ಟ ಚೆಕ್ ಅನ್ನು ವಾಪಸ್ ಕೊಡಬೇಕು ಎಂದು ನ್ಯೂಸ್ ಪೇಪರ್ ಗಳಲ್ಲಿ ಹಾಕಿಸಿದ್ದಾರೆ ಉರ್ದು ಪೇಪರ್ ಗಳಲ್ಲಿ ಇವರು ಕೊಟ್ಟಿರುವ ಜಾಹಿರಾತು ಬಂದಿದೆ. “ನಾನು ಕೊಟ್ಟಿರುವ ಚೆಕ್ ಸ್ವೀಕಾರ ಮಾಡುವ ಹಣವಲ್ಲ.. ಅದನ್ನು ಯಾವ ಮಸೀದಿಯವರು ಬಳಸುವ ಹಾಗಿಲ್ಲ.
ನಾನು ಕೊಟ್ಟ ಚೆಕ್ ಗಳನ್ನು ಆದಷ್ಟು ಬೇಗ ವಾಪಸ್ ಮಾಡಿ..” ಎಂದು ಜಾಹಿರಾತು ನೀಡಿ, ಮಸೀದಿಗೆ ಮನವಿ ಮಾಡಿಕೊಂಡಿದ್ದಾರೆ. ಕೆಜಿಎಫ್ ಬಾಬು ಅವರು ದಾರೂಲ್ ಉಲುಮ್ ಎನ್ನುವ ಮುಸ್ಲಿಂ ಸಂಸ್ಥೆ ನೀಡಿರುವ ಫತ್ವಾದ ಉಲ್ಲೇಖನ ಮಾಡಿ, ರಾಜಕೀಯ ನಾಯಕರಿಂದ ಹಣ ಪಡೆಯುವುದು ನ್ಯಾಯವಲ್ಲ ಎಂದು ಕೂಡ ಹೇಳಿದ್ದಾರೆ. ಇತ್ತ ಮಸೀದಿಗಳ ಆಡಳಿತ ಮಂಡಳಿಯ ಮುಖ್ಯಸ್ಥರು, ಈ ಜಾಹಿರಾತು ನೋಡಿ ಅಸಮಾಧಾನಗೊಂಡಿದ್ದಾರೆ. ಈ ಜಾಹಿರಾತಿನ ಬಗ್ಗೆ ಮಾವಳ್ಳಿ ಮಸೀದಿ ಕಾರ್ಯದರ್ಶಿ ಖಾದಿರ್ ಅಹ್ಮದ್ ಷರೀಫ್ ಅವರು ಪ್ರತಿಕ್ರಿಯೆ ನೀಡಿದ್ದು.. ಇದನ್ನು ಓದಿ..Dk Shivakumar: ಡಿಕೆ ನೇ ಎಂಟು ವರ್ಷ ಸಿಎಂ ಆಗ್ತಾರೆ ಎಂದ ಖ್ಯಾತ ಜ್ಯೋತಿಷಿ, ಆದರೆ ರಾಜ್ಯ ರಾಜಕಾರಣದಲ್ಲಿ ಏನಾಗಿದೆ ಗೊತ್ತೇ?? ಇವೆಲ್ಲ ಬೇಕಿತ್ತಾ??
“ಫತ್ವಾ ಬಗ್ಗೆ ಮಾತನಾಡಿ, ಚಿಕ್ಕಪೇಟೆಯ ಮಸೀದಿಗಳನ್ನು ಗುರಿ ಮಾಡಿಕೊಂಡಿದ್ದಾರೆ. ಯಾವ ಮಸೀದಿ ಕೂಡ ಅವರಿಂದ ಹಣ ಬಯಸಿರಲಿಲ್ಲ, ಎಲ್ಲಾ ಮಸೀದಿಗಳ ಮುಖ್ಯಸ್ಥರನ್ನು ಕರೆಸಿ, ಎಸ್.ಆರ್ ನಗರದ ಹಕ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ ನೀಡಿದರು. ಸೋತು ಹೋದ ನಂತರ ವಾಪಸ್ ಕೇಳುತ್ತಿದ್ದಾರೆ..” ಎಂದು ಕೋಪಗೊಂಡಿದ್ದಾರೆ. ಇನ್ನು ಮಸೀದಿ ಸಮಿತಿಗಳ ಅಧ್ಯಕ್ಷ ಆಗಿರುವ ಖುದ್ದುಸ್ ಅವರು, “25ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಗಳನ್ನು ಕೆಜಿಎಫ್ ಬಾಬು ಮಸೀದಿಗಳಿಗೆ ನೀಡಿದ್ದಾರೆ.
ಸೋತ ನಂತರ ವಾಪಸ್ ಕೇಳುತ್ತಿದ್ದಾರೆ. ಇದರ ಬಗ್ಗೆ ಶನಿವಾರ ಸಭೆ ನಡೆಯಲಿದೆ, ಅಲ್ಲಿ ಎಲ್ಲವೂ ತೀರ್ಮಾನ ಆಗುತ್ತದೆ..” ಎಂದಿದ್ದಾರೆ. ಇನ್ನು ಕೆಜಿಎಫ್ ಬಾಬು ಚೆಕ್ ಕೊಟ್ಟಿರುವ ಬಗ್ಗೆ ಬಿಜೆಪಿ ಶಾಸಕ ಉದಯ ಗರುಡಾಚಾರ್ ಅವರು ಪ್ರತಿಕ್ರಿಯಿಸಿ, ಮಸೀದಿಗಳು ಚೆಕ್ ಅನ್ನು ವಾಪಸ್ ಕೊಡಬಾರದು, ಬ್ಯಾಂಕ್ ನಲ್ಲಿ ಹಾಕಬೇಕು, ಒಂದು ವೇಳೆ ಚೆಕ್ ಬೌನ್ಸ್ ಆದರೆ ಕೆಜಿಎಫ್ ಬಾಬು ವಿರುದ್ಧ ವಂಚನೆ ಕೇಸ್ ಹಾಕಬೇಕು. ನಾನು ಮಸೀದಿಗಳ ಪರವಾಗಿ ನಿಲ್ಲುತ್ತೇನೆ..ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Karnataka: BJP ಪಕ್ಷಕ್ಕೆ ಮತ್ತೊಂದು ಶಾಕ್ ಕೊಟ್ಟ ಹಿಂದೂ ಮಹಾಸಭಾ- ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಬಿಜೆಪಿ ಕಥೆ ಮುಗಿಯಿತೇ??
Comments are closed.