Kannada News: ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ರವರನ್ನು ಮೀರಿಸುವಂತಹ ಕನ್ನಡತಿ ತೆಲುಗಿನಲ್ಲಿ ಮಿಂಚಿಂಗ್. ಯಾರು ಗೊತ್ತೇ ಆ ದೇವಲೋಕದ ಅಪ್ಸರೆ??
Kannada News: ತೆಲುಗು ಚಿತ್ರರಂಗದಲ್ಲಿ ಸದ್ಯ ಮಿಂಚುತ್ತಿರುವ ನಟಿಯರಲ್ಲಿ ಕನ್ನಡದ ನಟಿಯರೇ ಹೆಚ್ಚಾಗಿದ್ದಾರೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ತೆಲುಗು ಇಂಡಸ್ಟ್ರಿಯಲ್ಲಿ ನಾಯಕಿಯರಿಗೆ ಹೆಚ್ಚಿನ ಸ್ಕೋಪ್ ಸಿಗುತ್ತದೆ ಎಂದು ಹೇಳಬಹುದು. ಹಾಗೆ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡ ಅದೆಷ್ಟು ನಟಿಯರು ಬೇರೆಬೇರೆ ಚಿತ್ರರಂಗದಲ್ಲಿಯೂ ಕೂಡ ಪ್ರಸಿದ್ಧ ಪಡೆದುಕೊಂಡಿದ್ದಾರೆ. ಅಲ್ಲದೆ ಬೇರೆ ಚಿತ್ರರಂಗದಿಂದ ಅತ್ಯುತ್ತಮ ನಟಿಯರನ್ನು ಟಾಲಿವುಡ್ ಗೆ (Tollywood) ಕರೆದುಕೊಳ್ಳುವಲ್ಲಿ ತೆಲುಗು ಚಿತ್ರರಂಗ ಒಂದು ಕೈ ಮುಂದು ಎಂದೆ ಹೇಳಬಹುದಾಗಿದೆ. ಟಾಲಿವುಡ್ ನ ಸದ್ಯದ ಜನಪ್ರಿಯ ನಟಿಯರನ್ನು ತೆಗೆದುಕೊಂಡರೆ ಅವರಲ್ಲಿ ಬಹುತೇಕ ನಟಿಯರು ಕರ್ನಾಟಕದ ಮೂಲದವರೇ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇದೀಗ ಕರ್ನಾಟಕ ಮೂಲದ ರಶ್ಮಿಕ ಮಂದಣ್ಣ (Rashmika Mandanna) ಮತ್ತು ಪೂಜಾ ಹೆಗ್ಡೆ (Pooja Hegde) ಅಂತಹ ಜನಪ್ರಿಯ ನಟಿಯರನ್ನೇ ಹಿಂದಿಕ್ಕಿ ಮತ್ತೊಬ್ಬ ಕನ್ನಡದ ನಟಿ ಒಬ್ಬರು ಟಾಲಿವುಡ್ ಚಿತ್ರರಂಗವನ್ನು ರೂಲ್ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಟಿ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ ಅಂತಹ ಪ್ರಸಿದ್ಧ ನಟಿಯರನ್ನೇ ಹಿಂದಿಕ್ಕಿ ಇದೀಗ ಕನ್ನಡದ ಈ ಹೊಸ ನಟಿ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ.
ಸದ್ಯದಲ್ಲಿ ತೆಲುಗು ಚಿತ್ರರಂಗದಲ್ಲಿ ರಶ್ಮಿಕ ಮಂದಣ್ಣ, ಅನುಷ್ಕಾ ಶೆಟ್ಟಿ, ಕೃತಿ ಶೆಟ್ಟಿ ಹಾಗೂ ಪೂಜಾ ಹೆಗಡೆ ಸೇರಿದಂತೆ ಹಲವಾರು ನಟಿಯರು ಮುಂಚೂಣಿಯಲ್ಲಿದ್ದಾರೆ. ಅಲ್ಲದೆ ಈ ನಾಲ್ಕು ಜನರು ಕರ್ನಾಟಕ ಮೂಲದವರು ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇದಲ್ಲದೆ ಸದ್ಯ ತೆಲುಗು ಚಿತ್ರರಂಗದಲ್ಲಿ ನಂಬರ್ ಒನ್ ನಟಿ ಯಾರು ಎನ್ನುವುದರ ಚರ್ಚೆ ಹಲವಾರು ದಿನಗಳಿಂದ ಕೇಳಿ ಬರುತ್ತಿದೆ. ಒಂದು ಕಡೆ ವರ್ಗ ರಶ್ಮಿಕ ಮಂದಣ್ಣ ನಂಬರ್ ವನ್ ಎಂದು ಹೇಳಿದರೆ, ಪೂಜಾ ಹೆಗಡೆ ನಂಬರ್ ಒನ್ ಎಂದು ಮತ್ತಷ್ಟು ಜನರು ಹೇಳುತ್ತಿದ್ದರು. ಇದೀಗ ಈ ಚರ್ಚೆ ತಲೆಕೆಳಗಾಗಿದ್ದು ನಟಿ ಶ್ರೀ ಲೀಲಾ ಅವರೇ ಇದೀಗ ನಂಬರ್ ಒನ್ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ ಅವರನ್ನೇ ಹಿಂದಕ್ಕೆ ಹಾಕಿ ಶ್ರೀಲೀಲಾ (Sreeleela) ಮುಂದೆ ಸಾಗುತ್ತಿದ್ದಾರಂತೆ. ಕಳೆದ ಶುಕ್ರವಾರ ರವಿತೇಜ ನಟನೆಯಾ ಧಮಾಕ ಚಿತ್ರ ತೆರೆ ಕಂಡಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಶ್ರೀ ಲೀಲಾ ನಟಿಸಿದ್ದಾರೆ. ಈ ಚಿತ್ರ ನೋಡಿದ ವೀಕ್ಷಕರು ಅವರ ನಟನೆಯನ್ನು ಮೆಚ್ಚಿಕೊಂಡು ಎಲ್ಲ ನಟಿಯರಿಗಿಂತ ಶ್ರೀಲೀಲಾ ನಂಬರ್ ಒನ್ ಎನ್ನುವ ಅಭಿಪ್ರಾಯ ಪಡುತ್ತಿದ್ದಾರೆ. ಇದನ್ನು ಓದಿ..Biggboss Kannada: ಈ ಬಾರಿ ರೂಪೇಶ್ ಶೆಟ್ಟಿ ಗೆಲ್ಲೋದೇ ಇಲ್ವಾ?? ಅದೊಂದು ಕಾರಣದಿಂದ ಸೋತು ಸುಣ್ಣವಾಗ್ತಾರಾ ರೂಪೇಶ್? ಏನಾಗಿದೆ ಗೊತ್ತೇ??
ಇದು ಕೇವಲ ಒಂದಿಬ್ಬರ ಅಭಿಪ್ರಾಯ ಮಾತ್ರವಲ್ಲದೆ ಬಹುತೇಕ ತೆಲುಗು ಚಿತ್ರಮಂದಿ ಇದೇ ಮಾತುಗಳನ್ನು ಹೇಳುತ್ತಿದ್ದಾರೆ. ಇಷ್ಟಕ್ಕೂ ಶ್ರೀಲೀಲಾ ಧಮಾಕ ಚಿತ್ರದಲ್ಲಿ ನಟನೆ ಮತ್ತು ಡ್ಯಾನ್ಸ್ ಎರಡೂ ಕಾರಣಗಳಿಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಉಳಿದ ನಟಿಯರು ನಾಚುವಂತೆ ಅವರು ನಟಿಸಿರೋದು ಮಾತ್ರವಲ್ಲ ಡ್ಯಾನ್ಸ್ ಕೂಡ ಮಾಡಿದ್ದಾರೆ. ರವಿತೇಜ ಅದ್ಬುತ ಡ್ಯಾನ್ಸರ್ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಅವರನ್ನೇ ನಾಚಿಸುವಷ್ಟು ಮಟ್ಟಿಗೆ ಒಬ್ಬ ನಟಿ ಈ ರೀತಿಯಾಗಿ ಸ್ಟೆಪ್ಸ್ ಹಾಕಬಹುದ ಎನ್ನುವಂತೆ ಶ್ರೀ ಲೀಲಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅವರ ನಟನೆ ಜೊತೆಗೆ ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾಗಿ ತೆಲುಗು ಚಿತ್ರ ವೀಕ್ಷಕರು ಶ್ರೀಲೀಲ ನಂಬರ್ ಒನ್ ಎನ್ನುವ ಅಭಿಪ್ರಾಯ ಪಡುತ್ತಿರುವುದರಲ್ಲಿ ಅಚ್ಚರಿ ಏನಿಲ್ಲ. ಅಲ್ಲದೆ ನಟಿ ಶ್ರೀ ಲೀಲಾ ಇನ್ನು ಕೆಲವೇ ದಿನಗಳಲ್ಲಿ ಇಡೀ ತೆಲುಗು ಚಿತ್ರರಂಗವನ್ನೇ ರೂಲ್ ಮಾಡುತ್ತಾರೆ ಎಂದು ಕೆಲವು ಸಿನಿ ಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಇದನ್ನು ಓದಿ.. Biggboss Kannada: ಅಂದು ದಿನಕ್ಕೆ 1 ಲಕ್ಷ ಕೇಳಿದ ಗುರೂಜಿ, ಈಗ ಹೊರಬಂದ ಮೇಲೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ??
Comments are closed.