Kannada News: ಇರಲಾರದೆ ಇರುವ ಬಿಟ್ಕೊಂಡ ರಮ್ಯಾ; ಡಿ ಬಾಸ್ ಫ್ಯಾನ್ಸ್ ಫುಲ್ ರೊಚ್ಚಿಗೆದ್ದದ್ದು ಯಾಕೆ ಗೊತ್ತೇ? ಶಾಕ್ ಆದ ಡಿ ಬಾಸ್.
Kannada News: ನಟ ದರ್ಶನ್ (Darshan) ಅವರಿಗೆ ಕಳೆದ ಭಾನುವಾರ ಹೊಸಪೇಟೆಯಲ್ಲಿ (Hospet) ಚಪ್ಪಲಿ ಎಸಿದ ಪ್ರಕರಣ ಕ್ಷಣ ಕ್ಷಣಕ್ಕೂ ಮಹತ್ವದ ಬದಲಾವಣೆಗಳನ್ನು ಕಾಣುತ್ತಿದೆ ಎಂದು ಹೇಳಬಹುದು. ಈ ವಿಷಯದ ಕುರಿತಾಗಿ ಮೌನವಹಿಸಿದ್ದ ನಟ ದರ್ಶನ್ ನೆನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಒಂದನ್ನು ಹರಿಬಿಟ್ಟಿದ್ದರು. ಇದರಲ್ಲಿ ಧನ್ಯವಾದಗಳು ತಿಳಿಸುತ್ತಿದ್ದರು. ಅಲ್ಲದೆ ಮುಂದುವರೆದು ಮತ್ತೊಂದು ಪೋಸ್ಟ್ ನಲ್ಲಿ ಈ ಪ್ರಕರಣದ ಕುರಿತಾಗಿ ಮಾತನಾಡಿ, ನನಗಿಂತಲೂ ನನ್ನ ಅಭಿಮಾನಿಗಳಿಗೆ ಹೆಚ್ಚು ನೋವಾಗಿದೆ ಎಂದು ನನಗೆ ತಿಳಿದಿದೆ. ಆದರೂ ಕೂಡ ಇಂಥ ಪ್ರಕರಣಗಳು ನನ್ನನ್ನು ನನ್ನ ಧೈರ್ಯವನ್ನು ಕುಗ್ಗಿಸುವುದಿಲ್ಲ, ಬದಲಾಗಿ ನನಗೆ ಇನ್ನಷ್ಟು ಧೈರ್ಯ ನೀಡುತ್ತವೆ ಎಂದು ಬರೆದುಕೊಂಡಿದ್ದರು. ಇದೆಲ್ಲದರ ನಂತರ ಮೊನ್ನೆ ನಟಿ ರಮ್ಯಾ (Ramya) ಮಾಡಿರುವ ಪೋಸ್ಟ್ ಒಂದು ಇಂದಿಗೂ ಕೂಡ ಸುದ್ದಿಯಾಗುತ್ತಿದೆ. ಅಲ್ಲದೆ ಕೆಲವು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ರಮ್ಯಾ ಅವರ ಕೆಲವು ಮಾತುಗಳು ಗುರಿಯಾಗಿದೆ.
ನಟ ದರ್ಶನ್ ಅವರ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದಿದ್ದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಭಿಮಾನಿಗಳು ಮಾತ್ರವಲ್ಲದೆ ಸ್ಟಾರ್ ನಟ ನಟಿಯರು, ಚಿತ್ರರಂಗದ ಕಲಾವಿದರು ಇದರ ಬಗ್ಗೆ ಆಕ್ರೋಶ ಹೊರಹಾಕಿದ್ದರು. ಈ ವಿಷಯವಾಗಿ ನಟಿ ರಮ್ಯಾ ಕೂಡ ಸುಧೀರ್ಘವಾದ ಪತ್ರ ಒಂದನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಬರೆದುಕೊಂಡಿದ್ದರು. ಈ ಪತ್ರ ಇಂದಿಗೂ ಕೂಡ ವೈರಲ್ ಆಗುತ್ತಲೇ ಇದೆ ಎಂದು ಹೇಳಬಹುದು. ಆದರೆ ಪತ್ರದಲ್ಲಿರುವ ಕೆಲವು ವಿಷಯಗಳ ಬಗ್ಗೆ ಸ್ವತಃ ನಟ ದರ್ಶನ್ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ನಟಿ ರಮ್ಯಾ ಅವರು ಪತ್ರದಲ್ಲಿ ಕಲಾವಿದರು ತಾವೇ ನಂಬರ್ ಒನ್ ಎನ್ನುವ ಅಹಂ ಬಿಟ್ಟು ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಿದೆ ಎಂದು ಬರೆದುಕೊಂಡಿದ್ದರು. ಈ ವಿಷಯವಾಗಿ ದರ್ಶನ್ ಅಭಿಮಾನಿಗಳು ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದುವರೆದು ಪತ್ರದಲ್ಲಿ ಅವರು ಎಲ್ಲಾ ಕಲಾವಿದರು ಕೂಡ ಬಹಳ ಕಷ್ಟಪಟ್ಟು ಅನೇಕ ಸವಾಲುಗಳನ್ನು ಎದುರಿಸಿ ಮೇಲೆ ಬಂದಿರುತ್ತಾರೆ. ಹಾಗೆಯೇ ನಂತರ ಅವರು ದೊಡ್ಡ ಮಟ್ಟದ ಹೆಸರು ಗಳಿಸಿರುತ್ತಾರೆ. ಇದರ ಜೊತೆಗೆ ಆ ಸ್ಟಾರ್ ಕಲಾವಿದರು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಇದನ್ನು ಓದಿ..Kannada news: ದಿಡೀರ್ ಎಂದು ರಿಷಬ್ ಶೆಟ್ಟಿ ಗೆ ಶಾಕ್ ಕೊಟ್ಟ ರಕ್ಷಿತ್ ಶೆಟ್ಟಿ: ದೋಸ್ತಿಗಳ ನಡುವೆ ಏನಾಗಿದೆ ಗೊತ್ತೇ?? ಯೋಗಿ ಎಂಟ್ರಿ ಇಂದ ಅಲ್ಲೋಲ ಕಲ್ಲೋಲ.
ತಾವೇ ಯಾವಾಗಲೂ ನಂಬರ್ ಒನ್ ಆಗಿರಬೇಕು ಎಂದುಕೊಳ್ಳಬಾರದು. ಬದಲಿಗೆ ಜನ ಯಾರಿಗೆ ಕೂಡ ಜನಪ್ರಿಯತೆಯ ತಂದುಕೊಟ್ಟರು ಅದನ್ನು ಸ್ವೀಕರಿಸಬೇಕು. ಯಾರೇ ನಂಬರ್ ಒನ್ ಎನಿಸಿಕೊಂಡರು ಕೂಡ ಅವರನ್ನು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಯಾವಾಗಲೂ ತಾವೇ ನಂಬರ್ ಒನ್ ಆಗಿರಬೇಕು ಎಂಬ ಅಹಂ ಇರಬಾರದು ಎಂದು ಅವರು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಎಷ್ಟೋ ಸ್ಟಾರ್ ನಟರ ಅಭಿಮಾನಿಗಳು ಮತ್ತೊಬ್ಬ ಸ್ಟಾರ್ ನಟನ ಅಭಿಮಾನಿಗಳನ್ನು ತೀರಾ ಕೆಟ್ಟದಾಗಿ ಕಮೆಂಟ್ ಮೂಲಕ ಬಯ್ಯುತ್ತಾರೆ. ತಾಯಿ, ಹೆಂಡತಿಯ ಸಂಬಂಧಗಳು ಪವಿತ್ರವಾದವು. ಆ ಸಂಬಂಧಗಳ ಬಗ್ಗೆ ತೀರಾ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಇದೆಲ್ಲಾ ಯಾವಾಗ ಬದಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದರು. ಇದೇ ವೇಳೆ ಅಂತಹ ಕೆಟ್ಟ ಪೋಸ್ಟ್ಗಳನ್ನು ಟ್ವಿಟರ್ ನಲ್ಲಿ ರಿಪೋರ್ಟ್ ಮಾಡಿದ್ದರು. ಈ ಟ್ವೀಟ್ ಗಳಲ್ಲಿ ಬಹುತೇಕ ದರ್ಶನ್ ಅಭಿಮಾನಿಗಳು ಮಾಡಿದ್ದವೇ ಆಗಿದ್ದವು. ಇದರಿಂದಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನು ಓದಿ.. Kannada News: ನಡೆಯಲ್ಲ ತನಿಖೆ: ಚಪ್ಪಲಿ ಎಸೆತ ಪ್ರಕರಣಕ್ಕೆ ಬ್ರೇಕ್: ಅಸಲಿಗೆ ತನಿಖೆ ನಿಲ್ಲಿಸಲು ಆದೇಶ ಹೊರಡಿಸಿದ್ದು ಯಾರು ಗೊತ್ತೆ?
Comments are closed.