Kannada News: ಸುಮ್ನೆ ಹಂಗೆ ಹೊರಗಡೆ ಬಂದ ರಶ್ಮಿಕಾ ಧರಿಸಿದ ಬಟ್ಟೆ ಬೆಲೆ ಕೇಳಿದರೆ, ಬದುಕಿದರೆ ಹಿಂಗೆ ಬದುಕಬೇಕು ಅಂತೀರಾ. ಅದೆಷ್ಟು ಲಕ್ಷ ಗೊತ್ತೇ??
Kannada News: ಸಾಮಾನ್ಯವಾಗಿ ನಟರಿಗೆ ಚಿತ್ರಗಳಿಗಾಗಿ ಹೆಚ್ಚಿನ ಸಂಭಾವನೆಯನ್ನು ನೀಡಲಾಗುತ್ತದೆ. ಆದರೆ ನಟಿಯರಿಗೆ ಚಿತ್ರದ ನಾಯಕ ನಟರಿಗಿಂತ ಸ್ವಲ್ಪ ಕಡಿಮೆ ಸಂಭಾವನೆ ಸಿಗುತ್ತದೆ ಎಂದು ಹೇಳಬಹುದು. ಆದರೆ ಅಲಂಕಾರ, ಮೇಕಪ್, ಬಟ್ಟೆ ವಿಷಯಕ್ಕೆ ಬಂದರೆ ನಟರಿಗಿಂತ ಹೆಚ್ಚಾಗಿ ನಟಿಯರೇ ಖರ್ಚು ಮಾಡುತ್ತಾರೆ. ಸದಾ ಬಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈ ಬಾರಿ ತಾವು ಧರಿಸಿದ್ದ ಒಂದು ಸಾಮಾನ್ಯ ಉಡುಗೆಯ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅಂದ ಹಾಗೆ ಅವರು ಧರಿಸಿದ್ದ ಬಟ್ಟೆ ಸಾಮಾನ್ಯ ಎನಿಸಿದರು ಕೂಡ ಇದರ ಬೆಲೆ ಸಾಮಾನ್ಯವೇನಲ್ಲ. ಲಕ್ಷ ಲಕ್ಷ ರೂಪಾಯಿ ಬೆಲೆಬಾಳುವ ಬಟ್ಟೆಯನ್ನು ಬರೀ ಕೇವಲ ಹೊರಗಡೆ ಏರ್ಪೋರ್ಟಿಗೆ ಬರಲು ಧರಿಸಿದ್ದರು ಎಂದು ವರದಿಯಾಗಿದೆ.
ಸದಾ ಸಾಮಾನ್ಯ ಲುಕ್ ನಲ್ಲೆ ಕಾಣಿಸಿಕೊಳ್ಳುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಹೊರಗಡೆ ಎಲ್ಲೇ ಹೋದರು ಕೂಡ ಡಿಫ್ರೆಂಟ್ ಲುಕ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ದುಬಾರಿ ಉಡುಪುಗಳನ್ನು ಧರಿಸುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ನಂತರ ಅಲ್ಲಿನ ರೀತಿ ನೀತಿಗೆ ಅವರು ಹೊಂದಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಂತೂ ನಟಿಮಣಿಯರು ಮಾಲ್ ಗೆ ಒಂದು ಲುಕ್, ಏರ್ಪೋರ್ಟ್ಗೆ ಒಂದು ಲುಕ್, ಮತ್ತೊಂದು ಕಡೆಗೆ ಇನ್ನೊಂದು ಲುಕ್ ಎಂದು ಮತ್ತೆ ಮತ್ತೆ ಹೊಸ ಹೊಸ ಬಗೆಯ ಲುಕ್ ಬದಲಿಸುತ್ತಿರುತ್ತಾರೆ. ಅದೇ ರೀತಿಯಾಗಿ ನಟಿ ರಶ್ಮಿಕ ಮಂದಣ್ಣ ಸಹ ಈಗ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯ ಉಡುಪು ಎಂಬಂತೆ ಲುಕ್ ಬದಲಿಸುತ್ತಿದ್ದಾರೆ. ಇದನ್ನು ಓದಿ..Kannada News: ಏನೇ ಆದರೂ ಸರಿ, ಒಂದು ಬಾರಿ ಕೂಡ ಎಣ್ಣೆ ಹಾಕದೆ ಇರುವ ಟಾಪ್ ನಟರು ಯಾರ್ಯಾರು ಗೊತ್ತೆ?? ಇವೆರೆಲ್ಲರೂ ಎಣ್ಣೆ ಹಾಕಲ್ಲ
ಇತ್ತೀಚಿಗೆ ಅವರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ತೀರ ಸಾಮಾನ್ಯವಾಗಿಯೇ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ಬಹಳ ಸುಂದರವಾಗಿ ಕಂಡುಬಂದಿದ್ದಾರೆ. ಟೀಶರ್ಟ್ ರೂಪದ ಮೇಲುಡುಗೆಯನ್ನು ಧರಿಸಿರುವ ಅವರು ಸ್ವಲ್ಪ ಹರಿದ ವಿನ್ಯಾಸದ ನೀಲಿ ಜೀನ್ಸ್ ಹಾಕಿಕೊಂಡಿದ್ದಾರೆ. ಇನ್ನು ಕಾಲಿಗೆ ವಿಶೇಷ ರೀತಿಯ ಒಂದು ಸಾಮಾನ್ಯ ಶೂ ಧರಿಸಿರುವ ಅವರು ಬಗಲಿಗೆ ಕಪ್ಪು ಬ್ಯಾಗ್ ನೇತು ಹಾಕಿಕೊಂಡಿದ್ದಾರೆ. ಆದರೆ ತೀರಾ ಸಾಮಾನ್ಯ ಎನಿಸಿರುವ ಈ ಉಡುಪಿನ ಬೆಲೆ ಕೇಳಿದರೆ ಎಂತವರಿಗೂ ಅಬ್ಬ ಇಷ್ಟೊಂದ ಎಂದು ಅಚ್ಚರಿ ಆಗದೆ ಇರದು. ಏಕೆಂದರೆ ತೀರ ಸಿಂಪಲ್ಲು ಎನಿಸುವ ಈ ಲುಕ್ ಉಡುಪಿನ ಬೆಲೆ ಬರೋಬ್ಬರಿ ಎರಡು ಲಕ್ಷ ರೂಪಾಯಿಯಂತೆ. ಹೌದು, ಕೇವಲ ಏರ್ಪೋರ್ಟ್ ಗೆ ಹೋಗಿ ಬರಲು ಅವರು ಇಷ್ಟು ದುಬಾರಿ ಬೆಲೆಯ ಬಟ್ಟೆಯನ್ನು ಧರಿಸಿದ್ದರು ಎಂದು ವರದಿಯಾಗಿದೆ. ಇದನ್ನು ಓದಿ..Kannada News: ಇದೀಗ ಅಷ್ಟೇ ಮದುವೆಯಾಗಿರುವ ಕಿಯರ ಹಾಗೂ ಸಿದ್ದಾರ್ಥ್ ರವರ ಆಸ್ತಿ ಕೇಳಿದರೆ, ಶಾಕ್ ಆಗಿ ತಲೆ ತಿರುಗುತ್ತದೆ. ಅದೆಷ್ಟು ಇದೆ ಗೊತ್ತೇ??
Comments are closed.