Shrirasthu Shubhamasthu: ದತ್ತಣ್ಣ ನಿಗೆ ಬಂದೆ ಬಿಡ್ತು ಪ್ರೇಮ ಪತ್ರ: ಈ ವಯಸಿನಲ್ಲಿ ಬರೆದಿರುವುದು ಯಾರು ಗೊತ್ತೇ?? ಹುಡುಕಲು ಹೊರಡುತ್ತಾರೆ ದತ್ತಣ್ಣ??

Shrirasthu Shubhamasthu: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ ದಿನೇ ದಿನೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಸುಧಾರಾಣಿ ಸೇರಿದಂತೆ ಅಪಾರ ತಾರ ಬಳಗವಿರುವ ಈ ದಾರವಾಹಿಯ ವಿಶಿಷ್ಟ ಕತೆಗೆ ಜನರು ಮಾರು ಹೋಗಿದ್ದಾರೆ. ಇನ್ನು ಈ ಧಾರವಾಹಿಯಲ್ಲಿ ತುಳಸಿ ಮಾವನ ಪಾತ್ರದಲ್ಲಿ ವೆಂಕಟರಾವ್ (Venkat Rao) ಅಭಿನಯಿಸಿದ್ದಾರೆ. ಅವರು ಈ ಧಾರವಾಹಿಯಲ್ಲಿ ದತ್ತಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಸದಾ ಮನೆಯವರ ಮೇಲೆ ಕೋಪ ಇಲ್ಲವೇ ಬೇಸರ ಮಾಡಿಕೊಳ್ಳುವುದು, ತಮ್ಮ ಮಾತನ್ನು ಕೇಳಬೇಕು ಎಂದು ಅಗ್ರಹಿಸುವುದು, ಆದರೆ ಮರೆಯಲಿ ಎಲ್ಲರನ್ನೂ ಪ್ರೀತಿಸುವ ಒಂದು ಸಾತ್ವಿಕ ಪಾತ್ರ ಇದಾಗಿದೆ. ಇತ್ತೀಚಿಗೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಈ ವಯಸ್ಸಿನಲ್ಲಿ ದತ್ತಣ್ಣನಿಗೆ ಲವ್ ಲೆಟರ್ ಬಂದಿದೆ.

ಮನೆಯ ಒಳಗಿದ್ದ ದತ್ತಣ್ಣನಿಗೆ ಯಾರೋ ಹೊರಗಿನಿಂದ ಕಾಲಿಂಗ್ ಬೆಲ್ ಒತ್ತುತ್ತಿರುವುದು ಕೇಳಿಸುತ್ತದೆ. ಯಾರು ಎಂದುಕೊಂಡು ದತ್ತಣ್ಣ ಮನೆ ಬಾಗಿಲು ತೆಗೆದಾಗ ಪೋಸ್ಟ್ ಮ್ಯಾನ್ ಹೊರಗಿರುತ್ತಾನೆ. ಪೋಸ್ಟ್ ಯಾರಿಗೆ ಎಂದು ಕೇಳಿದಾಗ ನಿಮಗೆ ಎಂದು ಹೇಳಿ ಪೋಸ್ಟ್ ನೀಡುತ್ತಾನೆ. ಅದನ್ನು ಸ್ವೀಕರಿಸಿದ ದತ್ತಣ್ಣ ನನಗೆ ಯಾರು ಪತ್ರ ಬರೆಯುತ್ತಾರೆ ಎಂದು ಆಶ್ಚರ್ಯಪಟ್ಟುಕೊಳ್ಳುತ್ತಾರೆ. ಆನಂತರ ಅದನ್ನು ತೆಗೆದು ಸಹ ನೋಡದೆ ತಮ್ಮ ಪಾಡಿಗೆ ದಿನಪತ್ರಿಕೆ ಓದಲು ಕುಳಿತುಕೊಳ್ಳುತ್ತಾರೆ. ಅಲ್ಲಿ ಜ್ಯೋತಿಷ್ಯ ಭವಿಷ್ಯ ನೋಡಿದ ಬಳಿಕ ತಮ್ಮ ಕೋಣೆಗೆ ತೆರಳುತ್ತಾರೆ. ಆಗ ತಮಗೆ ಬಂದಿದ್ದ ಪತ್ರ ನೋಡಿ ಅವರು ಆಶ್ಚರ್ಯ ಒಳಗಾಗುತ್ತಾರೆ. ಪತ್ರದ ಮೇಲೆ ಡಿಯರ್ ದತ್ತು ಎಂದು ಬರೆದಿರುತ್ತದೆ. ಈ ರೀತಿ ನನ್ನನ್ನು ಈಗ ಕರೆಯುವರು ಯಾರು ಇಲ್ಲವಲ್ಲ, ಈ ಪತ್ರ ಯಾರು ಬರೆದಿದ್ದಾರೆ ಎಂದು ಅವರಿಗೆ ಆಶ್ಚರ್ಯವಾಗುತ್ತದೆ. ಇದನ್ನು ಓದಿ..Kannada News: ಸುಮ್ನೆ ಹಂಗೆ ಹೊರಗಡೆ ಬಂದ ರಶ್ಮಿಕಾ ಧರಿಸಿದ ಬಟ್ಟೆ ಬೆಲೆ ಕೇಳಿದರೆ, ಬದುಕಿದರೆ ಹಿಂಗೆ ಬದುಕಬೇಕು ಅಂತೀರಾ. ಅದೆಷ್ಟು ಲಕ್ಷ ಗೊತ್ತೇ??

kannada news venkata rao srirastu dharavahi update | Shrirasthu Shubhamasthu: ದತ್ತಣ್ಣ ನಿಗೆ ಬಂದೆ ಬಿಡ್ತು ಪ್ರೇಮ ಪತ್ರ: ಈ ವಯಸಿನಲ್ಲಿ ಬರೆದಿರುವುದು ಯಾರು ಗೊತ್ತೇ?? ಹುಡುಕಲು ಹೊರಡುತ್ತಾರೆ ದತ್ತಣ್ಣ??
Shrirasthu Shubhamasthu: ದತ್ತಣ್ಣ ನಿಗೆ ಬಂದೆ ಬಿಡ್ತು ಪ್ರೇಮ ಪತ್ರ: ಈ ವಯಸಿನಲ್ಲಿ ಬರೆದಿರುವುದು ಯಾರು ಗೊತ್ತೇ?? ಹುಡುಕಲು ಹೊರಡುತ್ತಾರೆ ದತ್ತಣ್ಣ?? 2

ನನ್ನನ್ನು ಈ ರೀತಿಯಾಗಿ ನನ್ನ ಅಪ್ಪ ಅಮ್ಮ ಮಾತ್ರ ಕರೆಯುತ್ತಿದ್ದರು ಎಂದು ಅವರು ಅಂದುಕೊಳ್ಳುತ್ತಾರೆ. ನಂತರ ಪತ್ರ ತೆರೆದು ಓದಿದಾಗ ಅದರಲ್ಲಿ ಪಾರ್ಕ್ ನಲ್ಲಿ ತನ್ನನ್ನು ಬಂದು ಭೇಟಿಯಾಗಬೇಕೆಂದು, ನಾವಿಬ್ಬರೂ ಭೇಟಿಯಾಗೋಣ ಎಂದು ಪತ್ರದಲ್ಲಿ ಬರೆದಿರಲಾಗುತ್ತದೆ. ಇದನ್ನು ನೋಡಿ ದತ್ತಣ್ಣನಿಗೆ ಇನ್ನಷ್ಟು ಆಶ್ಚರ್ಯ ಎನಿಸುತ್ತದೆ. ಇಷ್ಟಕ್ಕೂ ತನಗೆ ಈ ವಯಸ್ಸಿನಲ್ಲಿ ಹೀಗೆ ಪತ್ರ ಬರೆಯುವವರು ಯಾರು ಎಂದು ಕುತೂಹಲ ಮೂಡುತ್ತದೆ. ಇದೇ ಯೋಚನೆಯಲ್ಲಿ ಸುಮ್ಮನೆ ತಮ್ಮ ಪಾಡಿಗೆ ತಾವು ಕುಳಿತಿದ್ದಾಗ ದತ್ತಣ್ಣನ ಸ್ನೇಹಿತ ಶೇಷ ಅವರು ಮನೆಗೆ ಬರುತ್ತಾರೆ. ಆದರೆ ಶುರುವಿನಲ್ಲಿ ದತ್ತಣ್ಣ ಏನಾಯ್ತು ಎಂದು ಹೇಳುವುದಿಲ್ಲ. ಆನಂತರ ಈ ರೀತಿಯಾಗಿ ಪಾರ್ಕ್ ನಲ್ಲಿ ಭೇಟಿ ಮಾಡೋಣ ಎಂದು ಪತ್ರ ಬಂದಿದೆ ಎನ್ನುವುದನ್ನು ಹೇಳುತ್ತಾರೆ.

ಆಗ ಶೇಷ ಅವರು ಹಾಗಿದ್ದರೆ ನಡೆ ಹೋಗೋಣ, ಪಾರ್ಕ್ ನಲ್ಲಿ ಅವರು ಯಾರು ಎಂದು ಗೊತ್ತಾಗುತ್ತದೆ ಎನ್ನುತ್ತಾರೆ. ಆದರೆ ಇದನ್ನು ಒಪ್ಪದ ದತ್ತ ನನ್ನನ್ನು ಕಂಡರೆ ಈ ಏರಿಯಾದಲ್ಲಿ ಸಾಕಷ್ಟು ಜನರಿಗೆ ಆಗುವುದಿಲ್ಲ, ಹುಡುಗಾಟಕ್ಕೆ ಎಂದು ಯಾರಾದರೂ ಈ ರೀತಿ ಮಾಡಿರುತ್ತಾರೆ. ಸುಮ್ಮನೆ ಪಾರ್ಕ್ ಗೆ ಹೋಗಿ ನಗೆ ಪಾಟಲಿಗೆ ಈಡಾಗುವುದು ಬೇಡ ಎಂದು ದತ್ತಣ್ಣ ಹೇಳುತ್ತಾರೆ. ಆದರೆ ಈ ರೀತಿಯಾಗಿ ಪತ್ರ ಯಾರು ಬರೆದಿದ್ದಾರೆ ಎನ್ನುವುದು ಖಚಿತವಾಗಿ ದತ್ತಣ್ಣನಿಗೆ ತಿಳಿಯುವುದಿಲ್ಲ. ಹೀಗಾಗಿ ಅವರು ಪಾರ್ಕ್ಗೆ ಹೋಗುತ್ತಾರ ಅಥವಾ ಹೋಗುವುದಿಲ್ಲವೇ ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಇದೀಗ ಅಷ್ಟೇ ಮದುವೆಯಾಗಿರುವ ಕಿಯರ ಹಾಗೂ ಸಿದ್ದಾರ್ಥ್ ರವರ ಆಸ್ತಿ ಕೇಳಿದರೆ, ಶಾಕ್ ಆಗಿ ತಲೆ ತಿರುಗುತ್ತದೆ. ಅದೆಷ್ಟು ಇದೆ ಗೊತ್ತೇ??

Comments are closed.