Kannada News: ಮುಂದಿನ ಅಪ್ಪು ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕೆ ಆಯ್ಕೆಯಾದ ಅಪ್ಸರೆ ಯಾರು ಗೊತ್ತೇ? ನೋಡಲು ಎರಡು ಕಣ್ಣು ಸಾಲದು.
Kannada News: ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಇವೆಂಟ್ ನಲ್ಲಿ ಪುನೀತ್ ಅವರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದ ಯುವರಾಜ್‍ಕುಮಾರ್ ಬಗ್ಗೆ ಅಂದೆ ಮುಂದೊಂದು ದಿನ ಇವರು ಭರವಸೆಯ ನಟರಾಗಬಲ್ಲರು ಎನ್ನುವ ವಿಶ್ವಾಸ ಜನರಲ್ಲಿ ಮೂಡುವಂತೆ ಮಾಡಿತ್ತು. ಅದರಂತೆ ಇದೀಗ ಅವರು ಚಿತ್ರರಂಗಕ್ಕೆ ಎಂಟ್ರಿ ಆಗಲು ಸಿದ್ದರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅವರು ಈಗಾಗಲೇ ರಣಧೀರ ಕಂಠೀರವ ಚಿತ್ರದಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಇದೀಗ ಅವರು ಸಂತೋಷ ಆನಂದರಾಮ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ನಾಯಕಿಯಾಗಿ ಯಾರು ಬರಲಿದ್ದಾರೆ ಎನ್ನುವ ಕುತೂಹಲ ವ್ಯಕ್ತವಾಗಿತ್ತು. ಇದೀಗ ಕನ್ನಡದ ಪ್ರತಿಭಾನ್ವಿತ ನಟಿ ಈ ಚಿತ್ರಕ್ಕೆ ಆಯ್ಕೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಮೊದಲ ಲೆಕ್ಕಾಚಾರದ ಪ್ರಕಾರ ಯುವರಾಜ್ ಕುಮಾರ್ ರಣಧೀರ ಕಂಠೀರವ ಎನ್ನುವ ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದರೆ ಸಾಕಷ್ಟು ಬೆಳವಣಿಗೆಗಳ ನಂತರ ಆ ಚಿತ್ರ ಅಲ್ಲಿಯೇ ನಿಂತು ಹೋಯ್ತು. ಇದೀಗ ಯುವರಾಜ್ ಕುಮಾರ್ ಅವರ ಚೊಚ್ಚಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೇ ಪುನೀತ್ ಅವರ ಜೊತೆಗೆ ಎರಡು ಚಿತ್ರಗಳನ್ನು ನಿರ್ದೇಶಿಸಿ ಅದರಲ್ಲಿ ಒಂದು ಚಿತ್ರ ರಾಜಕುಮಾರ ಬ್ಲಾಕ್ಬಸ್ಟರ್ ಹಿಟ್ ಮಾಡಿದ್ದಾರೆ. ಅಲ್ಲದೆ ಯುವರಾಜ್ ಕುಮಾರ್ ಅವರ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ. ದೊಡ್ಮನೆಯ ಮೆಚ್ಚಿನ ನಿರ್ದೇಶಕ ಮತ್ತು ನಿರ್ಮಾಣ ಸಂಸ್ಥೆಯಿಂದಲೇ ಯುವರಾಜ್ ಕುಮಾರ್ ಲಾಂಚ್ ಆಗುತ್ತಿದ್ದಾರೆ. ಇದರ ಜೊತೆಗೆ ಈ ಚಿತ್ರದ ನಾಯಕಿ ಯಾರು ಎನ್ನುವುದು ಕೂಡ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದನ್ನು ಓದಿ..Kannada News: ಆರೋಪಗಳನ್ನು ಎದುರಿಸುತ್ತಿರುವ ರೋಹಿಣಿ ರವರಿಗೆ ಮತ್ತೊಂದು ಬಿಗ್ ಶಾಕ್: ಈ ಬಾರಿ ಏನಾಗಿದೆ ಗೊತ್ತೇ??
ಇದೀಗ ಹೆಚ್ಚು ಕಡಿಮೆ ಈ ಚಿತ್ರದ ನಾಯಕಿ ಯಾರು ಎನ್ನುವುದು ಅಂತಿಮ ಆದಂತಿದೆ. ಈ ಹಿಂದೆ ಈ ಚಿತ್ರದ ನಾಯಕಿಯ ಜಾಗಕ್ಕೆ ಬೇರೆ ಬೇರೆ ಹೆಸರುಗಳು ಕೇಳಿಬಂದಿದ್ದವು. ಪರಭಾಷೆಯ ನಾಯಕಿಯನ್ನು ಈ ಚಿತ್ರಕ್ಕೆ ಕರೆದು ತರಲಾಗುತ್ತದೆ ಎನ್ನುವ ಸುದ್ದಿಯು ಹರಿದಾಡಿತ್ತು. ಇದೀಗ ಈ ಚಿತ್ರಕ್ಕೆ ಕನ್ನಡದ ನಾಯಕಿಯನ್ನು ಅಂತಿಮಗೊಳಿಸುವ ಯೋಜನೆ ಚಿತ್ರ ತಂಡಕ್ಕಿದೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ ಚಿತ್ರತಂಡವು ಕನ್ನಡತಿ ನಟಿ ರುಕ್ಮಿಣಿ ವಸಂತ್ ಅವರನ್ನೇ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡುವ ಆಲೋಚನೆಯಲ್ಲಿದೆ ಎಂದು ತಿಳಿದುಬಂದಿದೆ. ಬೀರ್ಬಲ್ ಚಿತ್ರದ ಮೂಲಕ ರುಕ್ಮಿಣಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ರುಕ್ಮಿಣಿ ವಸಂತ್ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಬಾನ ದಾರಿಯಲ್ಲಿ ಮತ್ತು ರಕ್ಷಿತ್ ಶೆಟ್ಟಿ ಅವರ ಜೊತೆಗೆ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಶ್ರೀಮುರಳಿ ನಟನೆಯ ಭಘಿರ ಚಿತ್ರದಲ್ಲಿಯೂ ಕೂಡ ರುಕ್ಮಿಣಿ ನಟಿಸುತ್ತಿದ್ದಾರೆ. ಇದೀಗ ಅದೇ ನಿರ್ಮಾಣ ಸಂಸ್ಥೆಯ ಯುವರಾಜ್ ಕುಮಾರ್ ಅವರ ನಟನೆಯ ಚಿತ್ರದಲ್ಲಿಯೂ ಕೂಡ ನಾಯಕಿಯಾಗಿ ಅವರು ಆಯ್ಕೆಯಾಗುವ ಅದೃಷ್ಟವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಅವಕಾಶವನ್ನು ಅವರು ಖಂಡಿತ ಒಪ್ಪಿಕೊಳ್ಳುತ್ತಾರೆ ಎಂದೇ ಹೇಳಲಾಗುತ್ತಿದೆ. ಈ ಮೂಲಕ ಬಹುತೇಕ ಯುವರಾಜ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಫೈನಲ್ ಆದಂತಿದೆ. ಇದನ್ನು ಓದಿ..Kannada News: ಬೆಣ್ಣೆಯಂತಹ ನಟಿ ಹನಿರೋಸ್ ನೋಡಿ ಫುಲ್ ಫಿದಾ ಆದ ನಿರ್ಮಾಪಕ: ದೊಡ್ಡ ಮೊತ್ತ ಕೊಡಲು ಷರತ್ತು ಏನು ಗೊತ್ತೇ?. ಈ ವಯಸ್ಸಿನಲ್ಲೂ ಆ ಕೆಲಸ ಮಾಡಿ ಬಿಡ್ತಾರಾ ಹನಿರೋಸ್?
Comments are closed.