Kannada News: ಆರೋಪಗಳನ್ನು ಎದುರಿಸುತ್ತಿರುವ ರೋಹಿಣಿ ರವರಿಗೆ ಮತ್ತೊಂದು ಬಿಗ್ ಶಾಕ್: ಈ ಬಾರಿ ಏನಾಗಿದೆ ಗೊತ್ತೇ??

Kannada News: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರು ಸಾರಾ ಮಹೇಶ್ ಅವರ ಜೊತೆಗೆ ಸಂದಾನಕ್ಕೆ ಇಳಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದ ತಕ್ಷಣವೇ ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಕಷ್ಟು ಸದ್ದು ಮಾಡಿದವು. ಇದರ ಬೆನ್ನಲ್ಲೇ ರೋಹಿಣಿಯವರು ಸಂಧಾನಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೂಪ ಅವರು ರೋಹಿಣಿಯ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇದು ಇಬ್ಬರು ದಕ್ಷ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಗಿತ್ತು. ಈ ಕುರಿತಂತೆ ನೆನ್ನೆ ರೂಪ ಅವರ ವಿರುದ್ಧ ರೋಹಿಣಿಯವರು ದೂರ ದಾಖಲಿಸಿದ್ದರು. ಇದರ ಬೆನ್ನೆಲ್ಲೇ ಇದೀಗ ರೋಹಿಣಿಯವರ ವಿರುದ್ಧವು ಸಹ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರೋಹಿಣಿ ಸಿಂಧೂರಿಯವರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ಕುರಿತಾಗಿ ಪತ್ರ ಬರೆದು ಅವರು ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಇನ್ನು ಮಾಧ್ಯಮದವರ ಜೊತೆಗೆ ಮಾತನಾಡಿರುವ ದಿನೇಶ್ ಕಲ್ಲಹಳ್ಳಿ ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಕಾರಿ ವಂದಿತಾ ಶರ್ಮಾ ಅವರಿಗೆ ನಾನು ದೂರು ನೀಡಿದ್ದೇನೆ. ಈ ಗಂಭೀರ ವಿಷಯದ ಕುರಿತಾಗಿ ಪತ್ರ ಬರೆದು ಇಮೇಲ್ ಮೂಲಕ ನಾನು ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ. ಡಿ ರೂಪ ಅವರು ಮಾಡಿರುವುದು ಅತ್ಯಂತ ಗಂಭೀರ ಆರೋಪವಾಗಿದ್ದು, ಅವರು ಹಂಚಿಕೊಂಡಿರುವ ಖಾಸಗಿ ಫೋಟೋಗಳು ಹಾಗೂ ಇನ್ನಿತರ ದೂರಗಳು ಅತ್ಯಂತ ಗಂಭೀರ ಸ್ವರೂಪದಲ್ಲಿದೆ. ಈ ಕುರಿತಾಗಿ ಉನ್ನತ ಮಟ್ಟದ ತನಿಖೆ ಆಗಬೇಕಿದ್ದು ರೋಹಿಣಿ ಅವರ ವಿಚಾರಣೆ ಕಾನೂನು ರೀತಿಯಾಗಿ ಆಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

kannada news rohini d roopa case updates 2 | Kannada News: ಆರೋಪಗಳನ್ನು ಎದುರಿಸುತ್ತಿರುವ ರೋಹಿಣಿ ರವರಿಗೆ ಮತ್ತೊಂದು ಬಿಗ್ ಶಾಕ್: ಈ ಬಾರಿ ಏನಾಗಿದೆ ಗೊತ್ತೇ??
Kannada News: ಆರೋಪಗಳನ್ನು ಎದುರಿಸುತ್ತಿರುವ ರೋಹಿಣಿ ರವರಿಗೆ ಮತ್ತೊಂದು ಬಿಗ್ ಶಾಕ್: ಈ ಬಾರಿ ಏನಾಗಿದೆ ಗೊತ್ತೇ?? 2

ಇಬ್ಬರೂ ಉನ್ನತ ಅಧಿಕಾರದಲ್ಲಿರುವ ಅಧಿಕಾರಿಗಳು ಈ ರೀತಿಯಾಗಿ ಪರಸ್ಪರ ಕಿತ್ತಾಡುವುದು ಸಮಾಜಕ್ಕೆ ಯಾವ ರೀತಿಯ ಸಂದೇಶ ರವಾನಿಸುತ್ತದೆ, ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಈ ರೀತಿಯಾಗಿ ಎಲ್ಲರ ಮುಂದೆ ದೋಷಾರೋಪ ಮಾಡುವುದು ಸೂಕ್ತವಲ್ಲ. ಈ ಕುರಿತಾಗಿ ಕಾನೂನು ರೀತಿಯಾಗಿ ತನಿಖೆಯಾಗಬೇಕಿದೆ. ಅಧಿಕಾರಿಗಳು ಹೀಗೆ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಸಮಾಜಕ್ಕೆ ಅಧಿಕಾರಿಗಳ ಮೇಲಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮುಖ್ಯ ಕಾರ್ಯದರ್ಶಿ ವಂದಿತ ಅವರಿಗೆ ದೂರು ಸಲ್ಲಿಸಿದ್ದು ಅವರು ಕೂಡಲೇ ಈ ಕುರಿತಾಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ.

Comments are closed.