Kannada News: ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿರುವ ಮಾಧವ್ ರವರ ಕುಟುಂಬ ಹೇಗಿದೆ ಗೊತ್ತೇ? ಪತ್ನಿ ಹಾಗೂ ಮಗ ಹೇಗಿದ್ದಾರೆ ಗೊತ್ತೇ??
Kannada News: ಕನ್ನಡದ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರವಾಹಿ ಈಗಷ್ಟೇ ಶುರುವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೆಚ್ಚಿನ ಮಾಸ್ ಫೀಲ್ ಇಲ್ಲದೆ, ಕುಟುಂಬದವರು ಕೂತು ನೋಡಬಹುದಾದ ಒಳ್ಳೆಯ ಫ್ಯಾಮಿಲಿ ಸ್ಟೋರಿ ಆಗಿದೆ ಶ್ರೀರಸ್ತು ಶುಭಮಸ್ತು. ಈ ಧಾರವಾಹಿಯಲ್ಲಿ ಜನರಿಗೆ ಅತ್ತೆ ಸೊಸೆ ನಡುವಿನ ಬಾಂಧವ್ಯ, ಮಾವ ಮತ್ತು ಸೊಸೆಯ ಬಾಂಧವ್ಯ, ಹಾಗೆಯೇ ತಾಯಿ ಮಗನ ಬಾಂಧವ್ಯ ಇಷ್ಟವಾಗಿದೆ. ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಚಂದನವನದ ಖ್ಯಾತ ನಟಿ ಸುಧಾರಾಣಿ (Sudharani) ಅವರು ಕಿರುತೆರೆ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಸುಧಾರಾಣಿ ಅವರ ತುಳಸಿ ಪಾತ್ರದ ಜೊತೆಗೆ ಇರುವ ಮತ್ತೊಂದು ಮುಖ್ಯವಾದ ಪಾತ್ರ ಮಾಧವ್ ಪಾತ್ರ. ಮಾಧವ್ ಒಬ್ಬರು ಅದ್ಭುತವಾದ ಶೆಫ್, ಟಿವಿಯಲ್ಲಿ ಅಡುಗೆ ಕಾರ್ಯಕ್ರಮ ನಡೆಸಿಕೊಡುತ್ತಾರೆ, ಹಾಗೆಯೇ ಒಂದು ಕೆಫೆ ಸಹ ಹೊಂದಿರುತ್ತಾರೆ. ತುಳಸಿ ಇವರ ಫ್ಯಾನ್, ಟಿವಿಯಲ್ಲಿ ಕಾರ್ಯಕ್ರಮದ ಜೊತೆಗೆ ಜೀವನದ ಪಾಠ ಹೇಳಿಕೊಡುವ ಮಾಧವ್ ಮಾತುಗಳು ತುಳಸಿಗೆ ತುಂಬಾ ಇಷ್ಟ. ಹೀಗೆ ಈ ಎರಡು ಪಾತ್ರಗಳು ಜನರಿಗೆ ತುಂಬಾ ಇಷ್ಟವಾಗಿದೆ. ಅದರಲ್ಲೂ ಮಾಧವ್ ಪಾತ್ರ ಎಷ್ಟು ತಾಳ್ಮೆಯಿಂದ, ಸಾಫ್ಟ್ ಆಗಿ ಇರುವುದನ್ನು ಜನರು ಬಹಳ ಇಷ್ಟಪಟ್ಟಿದ್ದಾರೆ. ಮಾಧವ್ ಪಾತ್ರದಲ್ಲಿ ನಟಿಸಿರುವವರು ನಟ ಅಜಿತ್ ಹಂದೆ (Ajith Hande).. ಇದನ್ನು ಓದಿ..Lakshana: ಬಿಗ್ ನ್ಯೂಸ್: RJ ಸಖಿ ನಕ್ಷತ್ರ ಎಂದು ಗೊತ್ತಾಗಿಲ್ಲ: ಹಾಗಿದ್ದರೆ ಕೊನೆಯ ಎಪಿಸೋಡ್ ನಲ್ಲಿ ತೋರಿಸಿದ್ದು ಏನು? ಅಸಲಿ ಕಥೆ ಏನು ಗೊತ್ತೇ?
ಇವರು ಕನ್ನಡ ಕಿರುತೆರೆ ಮತ್ತು ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಕಲಾವಿದ. ಮುಕ್ತ ಸೇರಿದ ಹಾಗೆ ಅನೇಕ ಕನ್ನಡ ಧಾರವಾಹಿಗಳಲ್ಲಿ ಹಾಗೂ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅಜಿತ್ ಅವರು ಕೆಲ ಸಮಯ ನಟನೆಯಿಂದ ಹೊರಗಿದ್ದು, ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದಾರೆ. ಇವರ ಕುಟುಂಬದ ಬಗ್ಗೆ ಹೇಳುವುದಾದರೆ, ಅಜಿತ್ ಹಂದೆ ಅವರ ಪತ್ನಿ ಸಿಂಧು ಹಂದೆ (Sindhu), ಇವರು ಗಾಯಕಿ ಮತ್ತು ಕಲಾವಿದೆ, ಅದ್ಭುತವಾಗಿ ಪೇಂಟಿಂಗ್ ಮಾಡುತ್ತಾರೆ. ಸಿಂಧು ಮತ್ತು ಅಜಿತ್ ದಂಪತಿಗೆ ಅಥರ್ವ ಹೆಸರಿನ ಮುದ್ದಾದ ಮಗ ಕೂಡ ಇದ್ದಾನೆ, ಇವರ ಮಗನಿಗೆ ಈಗ 4 ವರ್ಷವಾಗಿದ್ದು, ಶಾಲೆಗೆ ಹೋಗುತ್ತಿದ್ದಾನೆ. ಇದನ್ನು ಓದಿ..Kannada News: ಜುಜುಬಿ ಹಣ ಖರ್ಚು ಮಾಡಿ ಮದುವೆ ಮುಗಿಸಿಕೊಂಡ ಹರಿಪ್ರಿಯಾ ಹಾಗೂ ವಸಿಷ್ಠ: ಮದುವೆಗೆ ಖರ್ಚು ಮಾಡಿದ್ದು ಎಷ್ಟು ಗೊತ್ತೇ??
Comments are closed.