Kannada News: ಸಿನೆಮಾಗಳಲ್ಲಿ ಅವಕಾಶ ಬಂದರು ಬೇಡ ಎನ್ನವೇ ಹೊಸ ಕೆಲಸ ಆರಂಭಿಸಿದ ಶ್ರುತಿ ಹರಿಹರನ್. ಏನು ಮಾಡಲು ಹೊರಟಿದ್ದಾರೆ ಗೊತ್ತೇ?? ಕಣ್ಣೀರಿನಲ್ಲಿ ಫ್ಯಾನ್ಸ್.
Kannada News: ಲೂಸಿಯಾ (Lucia) ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟಿ ಶೃತಿ ಹರಿಹರನ್ (Shruthi Hariharan) ಇದೀಗ ಕನ್ನಡದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮ್ಮ ತಾಯ್ತನದ ನಂತರ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಶ್ರುತಿ ಹರಿಹರನ್ ಅವರ ಕೈಯಲ್ಲಿ ಸದ್ಯ ಮೂರು ಚಿತ್ರಗಳಿವೆ. ಆದರೆ ನಟಿ ಶ್ರುತಿ ಹರಿಹರನ್ ಮತ್ತೊಂದು ಹೊಸ ಘೋಷಣೆ ಮಾಡಿದ್ದಾರೆ. ಇಷ್ಟು ದಿನ ನಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಇದೀಗ ನಿರ್ದೇಶನಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದ ಕಡೆಗೆ ಮುಖ ಮಾಡಿರುವ ಶ್ರುತಿ ಹರಿಹರನ್ ಅವರ ನಿರ್ಧಾರಕ್ಕೆ ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಯ್ಯೋ ನಿರ್ದೇಶನ ಬೇಡ, ನಟನೆಯಲ್ಲೇ ಮುಂದುವರೆಯಿರಿ ಎನ್ನುತ್ತಿದ್ದಾರೆ.
ತಾಯ್ತನದ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯ ಆಗಿರುವ ನಟಿ ಶೃತಿ ಹರಿಹರನ್ ಅವರ ಕೈಯಲ್ಲಿ ಸದ್ಯ ಮೂರು ಚಿತ್ರಗಳಿವೆ. ಸ್ಟ್ರಾಬೆರಿ, ಈಗ, ಸಾರಾಂಶ ಎಂಬ ಮೂರು ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ನಟನೆಯಿಂದ ಪ್ರಸಿದ್ಧಿ ಪಡೆದಿರುವ ನಟಿ ಶೃತಿ ಹರಿಹರನ್ ನಿರ್ದೇಶನದ ಕಡೆಗೆ ಮುಖ ಮಾಡಿದ್ದಾರೆ. ಅಂದಹಾಗೆ ಯಾವ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶಿಸುತ್ತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಗೆ ಕಾರಣವಾಗಿದೆ. ಇದುವರೆಗೆ ಬಹಳ ವಿಶಿಷ್ಟ ರೀತಿಯ ಪಾತ್ರಗಳು ಮತ್ತು ಸೂಕ್ಷ್ಮ ಕಥೆ ಹೊಂದಿರುವ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಹೀಗಾಗಿ ಅದೇ ರೀತಿಯ ಸಿನಿಮಾಗಳನ್ನು ಅವರು ಡೈರೆಕ್ಟ್ ಮಾಡುತ್ತಾರೆ ಎಂದು ಸಹ ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಯಶಸ್ವಿ ನಟ: ಸಿಕ್ಕಿದ್ದೇ ಚಾನ್ಸ್ ಎಂದು ಮೂರು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದರ ಹಿಂದಿನ ಕಾರಣವೇನು ಗೊತ್ತೇ?? ತಿಳಿದರೆ ನೀವು ಅದೇ ಕೆಲಸ ಮಾಡ್ತೀರಾ.
ನಟಿ ಶೃತಿ ಹರಿಹರನ್ ಅವರಿಗೆ ನಟನ ಕ್ಷೇತ್ರವೇನು ಏಕಾಏಕಿ ಕೈಬೀಸಿ ಕರೆದಿದ್ದಲ್ಲ. ಬದಲಿಗೆ ಅವರು ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಅವರು ಈ ಮೊದಲು ಸಾಕಷ್ಟು ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಹೆಜ್ಜೆ ಹಾಕಿದ್ದಾರೆ. ಆನಂತರ ಅವರಿಗೆ ಲೂಸಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು, ಆ ಚಿತ್ರದ ಗೆಲುವಿನ ನಂತರ ಅವರು ಇದುವರೆಗೆ ಸಾಕಷ್ಟು ಚಿತ್ರಗಳ ಭಾಗವಾಗಿದ್ದಾರೆ. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ ಸೇರಿದಂತೆ ಇದುವರೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಇದೀಗ ತಾವು ಇನ್ನು ಮುಂದೆ ಸಿನಿಮಾ ನಿರ್ದೇಶಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಇದನ್ನು ಕೇಳಿದ ಅವರ ನಟನೆಯನ್ನು ಇದುವರೆಗೆ ಇಷ್ಟಪಟ್ಟಿದ್ದ ಕೆಲವು ಅಭಿಮಾನಿಗಳು ಡೈರೆಕ್ಷನ್ ಎಲ್ಲ ಬೇಡ, ನಟನೆಯಲ್ಲೇ ಮುಂದುವರೆಯಿರಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ಖ್ಯಾತ ನಟಿಯರು ಪದೇ ಪದೇ ದುಬೈ ಗೆ ಹೋಗುವುದು ಯಾಕೆ? ಇದರ ಹಿಂದೆ ಇರುವ ಕರಾಳ ಲೋಕ ಎಂದದ್ದು ಗೊತ್ತೇ??
Comments are closed.