Kannada News: ಹಿಂದಿ ವೆಬ್ ಸೀರೀಸ್ ಇಂದ ಕನ್ನಡಕ್ಕೆ ಬಂದ ದೇವಲೋಕದ ಅಪ್ಸರೆ. ಇನ್ನುಮುಂದೆ ಈಕೆಯೇ ಟಾಪ್. ಹೊಸ ಚಿತ್ರಕ್ಕೆ ಮತ್ತೆ ಬಂದ ಚಿಟ್ಟೆ ಯಾವುದು ಗೊತ್ತೇ??
Kannada News: ಬಿಗ್ ಬಾಸ್ ಸೀಸನ್ 5 (BBK5) ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯಗೊಂಡಿದ್ದ ಶ್ರುತಿ ಪ್ರಕಾಶ್ (Shruthi Prakash) ಇದೀಗ ಮತ್ತೆ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್ ನ ಕಿರು ಚಿತ್ರಗಳಲ್ಲಿ ಸದ್ದು ಮಾಡಿದ್ದ ನಟಿ ಶ್ರುತಿ ಪ್ರಕಾಶ್ ಅಲ್ಲಿನ ಧಾರವಾಹಿಯಲ್ಲಿಯೂ ನಟಿಸುವ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮುದ್ದು ಮುದ್ದಾದ ನಟನೆ ಸೌಂದರ್ಯದಿಂದಲೇ ಶ್ರುತಿ ಪ್ರಕಾಶ್ ಎಂದರೆ ಯುವಕರ ಅಚ್ಚುಮೆಚ್ಚು. ನಂತರ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಕನ್ನಡ ಜನರಿಗೂ ಪರಿಚಯಗೊಂಡಿದ್ದ ಶ್ರುತಿ ಪ್ರಕಾಶ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಆನಂತರ ಅವರು ಕನ್ನಡದ ಯಾವುದೇ ಕಾರ್ಯಕ್ರಮ ಅಥವಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಮತ್ತೆ ಅವರು ಕನ್ನಡ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ.
ಬಿಗ್ ಬಾಸ್ ಸೀಸನ್ 5 ನಲ್ಲಿ ಗುರುತಿಸಿಕೊಂಡಿದ್ದ ನಟಿ ಶ್ರುತಿ ಪ್ರಕಾಶ್ ಆಗ ಜೆ ಕೆ (JK) ಜೊತೆಗೆ ಹೆಚ್ಚು ಆತ್ಮೀಯರಾಗಿದ್ದರು. ಅಲ್ಲದೆ ಚಂದನ್ ಶೆಟ್ಟಿ (Chandan Shetty) ಗೆ ಕೂಡ ಶ್ರುತಿ ಪ್ರಕಾಶ್ ಸಾಕಷ್ಟು ಇಷ್ಟವಾಗಿದ್ದರು. ಆದರೆ ಇದೊಂದು ರೀತಿಯ ತ್ರಿಕೋನ ಪ್ರೇಮ ಕಥೆಯಂತೆ ಆ ಸೀಸನ್ ನಲ್ಲಿ ಕಂಡುಬಂದಿತ್ತು. ಅಂದಹಾಗೆ ಶ್ರುತಿ ಪ್ರಕಾಶ್ ಕರ್ನಾಟಕ ಮೂಲದವರೇ. ಬೆಳಗಾವಿಯಲ್ಲಿ ಹುಟ್ಟಿದ ಅವರು ಜೈನ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಪದವಿ ಮುಗಿದ ಬಳಿಕ ಮುಂಬೈನಲ್ಲಿರುವ ಎಜು ಮೀಡಿಯಾ ಅಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಮೂಲದವರೇ ಆದರೂ ಶ್ರುತಿ ಪ್ರಕಾಶ್ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದ್ದು ಹಿಂದಿ ಸೀರಿಯಲ್ ಮೂಲಕ. ಸಾಥ್ ನಿಬಾನಾ ಸಾಥಿಯಾ ದಾರಾವಾಹಿ ಅವರಿಗೆ ಅಪಾರ ಪ್ರಸಿದ್ಧಿ ಜನಪ್ರೀತಿ ತಂದು ಕೊಟ್ಟಿತ್ತು. ಇದನ್ನು ಓದಿ..Kannada News: ನನ್ನ ಜೀವನದಲ್ಲಿ ಏನೇ ಆದರೂ ಸರಿ, ಯಾರು ಇಲ್ಲದೆ ಇದ್ದರೂ ಸರಿ, ಅದೊಂದು ಇದ್ದರೇ ಸಾಕು ಎಂದು ಇರುವುದನ್ನು ಇದ್ದ ಹಾಗೆ ಹೇಳಿದ ಸಾಯಿ ಪಲ್ಲವಿ.
ಜೊತೆಗೆ ಶ್ರುತಿ ಪ್ರಕಾಶ್ ಚೆನ್ನಾಗಿ ಹಾಡಬಲ್ಲ ಗಾಯಕಿಯಾಗಿದ್ದಾರೆ. ಹಿಂದಿಯ ಕ್ಲೋಸ್ ಅಪ್ ವೆಬ್ ಸಿಂಗರ್ ಕಾರ್ಯಕ್ರಮದಲ್ಲಿ ಅವರು ಸೆಮಿ ಫೈನಲ್ ವರೆಗೂ ಪ್ರವೇಶಿಸಿದ್ದರು. ಇದೀಗ ನಟಿ ಶೃತಿ ಪ್ರಕಾಶ್ ಕನ್ನಡದ ಚಿತ್ರ ಒಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಡಲ ತೀರದ ಭಾರ್ಗವ (Kadala Teerada Bhargava) ಚಿತ್ರಕ್ಕೆ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಸಾಗುತ್ತಿದೆ, ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ನಟಿ ಶ್ರುತಿ ಪ್ರಕಾಶ್ ಚಿತ್ರದಲ್ಲಿ ಪಾಲ್ಗೊಂಡಿದ್ದಾರೆ. ಹಿಂದಿಯಲ್ಲಿ ಮಿಂಚಿದ್ದ ನಟಿ ಶೃತಿ ಪ್ರಕಾಶ್ ಈಗ ತಮ್ಮ ತವರು ಕರ್ನಾಟಕದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಂದ ಹಾಗೆ ಅವರ ಈ ಚಿತ್ರ ಜನರಿಗೆ ಇಷ್ಟವಾಗುತ್ತದೆಯೇ, ಶೃತಿ ಪ್ರಕಾಶ್ ಹೇಗೆ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಎಲ್ಲವನ್ನು ಹೊರಗೆ ಪ್ರದರ್ಶನಕ್ಕೆ ಇಟ್ಟ ರಾಕುಲ್; ವಿಡಿಯೋ ನೋಡಿ ಬೆವರಿದ ಫ್ಯಾನ್ಸ್: ಬೆಣ್ಣೆ ನಟಿಗೆ ಗೊತ್ತಾದರೂ ಸುಮ್ಮನಾಗಿದ್ದು ಯಾಕೆ ಗೊತ್ತೇ??
Comments are closed.