Kannada News: ತಂದೆ ತಾಯಿ ಬಳಿ ಮಗು ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆ ಸುಂದರ್ ರಾಜ್ ಹೇಳಿದ್ದೇನು ಗೊತ್ತೇ??

Kannada News: ನಟಿ ಮೇಘನಾ ರಾಜ್ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ತಮ್ಮ ಗೆಳತಿಯರೊಂದಿಗೆ ಅವರು ಕೆಲವು ಸಮಯ ಥೈಲ್ಯಾಂಡ್ ಪ್ರವಾಸದಲ್ಲಿ ಖುಷಿಯಿಂದ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಇದರ ಬಗ್ಗೆ ಟ್ರೋಲಿಗರು ಬಹಳ ಕೆಟ್ಟದಾಗಿ ಟೀಕೆ ಮಾಡಿದ್ದಾರೆ. ತಮ್ಮ ಮನಬಂದಂತೆ ಅವರು ಟ್ರೋಲ್ ಮಾಡಿದ್ದಾರೆ. ಈ ವಿಷಯವಾಗಿ ಸುಂದರ್ ರಾಜ್ (Sundar Raj) ರವರು ಮಾಧ್ಯಮದ ಮುಂದೆ ಮಾತನಾಡಿ ತಮ್ಮ ಸಿಟ್ಟು ಮತ್ತು ನೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಟ್ರೋಲ್ ಮಾಡುವವರ ಚಳಿ ಬಿಡಿಸಿದ್ದಾರೆ. ಹಾಗಿದ್ದರೆ ಮೇಘನಾ ರಾಜ್ (Meghana Raj) ರವರು ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದಕ್ಕೆ, ಅವರು ಹಂಚಿಕೊಂಡಿದ್ದ ಫೋಟೋಗಳು ಹೇಗಿದ್ದವು? ಇದನ್ನೆಲ್ಲ ಟ್ರೋಲ್ ಮಾಡುವ ಅಗತ್ಯವೇನಿತ್ತು ಎಂಬುದರ ಚರ್ಚೆಯಾಗುತ್ತಿದೆ.

ನಟಿ ಮೇಘನಾ ರಾಜ್ ರವರು ತಮ್ಮ ಪತಿಯನ್ನು ಕಳೆದುಕೊಂಡು ಸಾಕಷ್ಟು ಕಾಲ ದುಃಖದಲ್ಲಿಯೇ ಮುಳುಗಿ ಹೋಗಿದ್ದರು. ಮದುವೆಯಾಗಿ ಕಡಿಮೆ ಅವಧಿಯಲ್ಲಿಯೇ ಮೇಘನಾ ಅವರನ್ನು ಪತಿ ಚಿರಂಜೀವಿ ಸರ್ಜಾ ಆಗಲಿದ್ದರು. ಇಂತಹ ಪರಿಸ್ಥಿತಿಯಲ್ಲಿ ಗಂಡನನ್ನು ಕಳೆದುಕೊಂಡು ಅವರ ಕಷ್ಟ ಹೇಳತಿರದು. ಇತ್ತೀಚಿಗಷ್ಟೇ ಅವರು ಸ್ವಲ್ಪ ಸ್ವಲ್ಪವೇ ನೋವಿನಿಂದ ಹೊರಗೆ ಬರುತ್ತಿದ್ದಾರೆ. ಮಗನ ಆರೈಕೆಯಲ್ಲಿ ಪೋಷಣೆಯಲ್ಲಿ ಅವರು ಕಾಲ ಕಳೆಯುತ್ತಿದ್ದಾರೆ. ಮಗನಲ್ಲಿಯೇ ಪತಿಯನ್ನು ಕಾಣುತ್ತಾ ಸ್ವಲ್ಪ ನೋವನ್ನು ಮರೆಯುತ್ತಿದ್ದಾರೆ. ಇದೇ ವೇಳೆ ಅವರು ತಮ್ಮ ಸ್ನೇಹಿತರ ಜೊತೆಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿ ಕಳೆದ ಸಮಯವನ್ನು, ಖುಷಿಯನ್ನು ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ. ತಮ್ಮ instagram ಖಾತೆಯಲ್ಲಿ ಅವರು ಸ್ನೇಹಿತೆಯರ ಜೊತೆಗೆ ಥೈಲ್ಯಾಂಡ್ ಪ್ರವಾಸದಲ್ಲಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇದನ್ನು ಟ್ರೋಲಿಗರು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಓದಿ.. Kannada News: ಕನ್ನಡಲ್ಲಿಯೂ ನಟನೆ ಮಾಡಿರುವ ನಟಿ ಪೂರ್ಣ, ಮೊದಲನೇ ರಾತ್ರಿ ಗಂಡನಿಂದ ಪಡೆದ ಗಿಫ್ಟ್ ಏನಂತೆ ಗೊತ್ತೇ?? ಕೊನೆಗೂ ಬಹಿರಂಗ.

kannada news meghana sundar raj | Kannada News: ತಂದೆ ತಾಯಿ ಬಳಿ ಮಗು ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆ ಸುಂದರ್ ರಾಜ್ ಹೇಳಿದ್ದೇನು ಗೊತ್ತೇ??
Kannada News: ತಂದೆ ತಾಯಿ ಬಳಿ ಮಗು ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆ ಸುಂದರ್ ರಾಜ್ ಹೇಳಿದ್ದೇನು ಗೊತ್ತೇ?? 2

ಮಗನನ್ನು ತಂದೆ ತಾಯಿಯ ಬಳಿ ಬಿಟ್ಟು ಇವಳು ಮೋಜು-ಮಸ್ತಿ ಮಾಡುತ್ತಿದ್ದಾಳೆ ಎಂಬ ರೀತಿಯ ಟ್ರೋಲ್ ಗಳನ್ನು ಮಾಡಲಾಗುತ್ತಿದ್ದು, ಈ ರೀತಿಯ ಟ್ರೋಲ್ ಗಳು ಹರಿದಾಡುತ್ತಿವೆ. ಇದು ಮೇಘನಾ ಅವರ ತಂದೆ ಸುಂದರ್ ರಾಜ ಅವರಿಗೆ ನೋವನ್ನು ನೀಡಿದೆ. ಮಾಧ್ಯಮದವರ ಮುಂದೆ “ಇದಕ್ಕೆಲ್ಲ ಪ್ರತಿಕ್ರಿಯಿಸಬಾರದು ಎಂದೇ ಅಂದುಕೊಳ್ಳುತ್ತೇನೆ. ಆದರೆ ಇದು ಇಷ್ಟಕ್ಕೆ ನಿಂತರೆ ಸರಿ. ಹೀಗೆ ಒಂದು ಹೆಣ್ಣಿನ ಬಗ್ಗೆ ಏನೇನು ಮಾತನಾಡುವುದು ತಪ್ಪು. ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಿಮಗೆ ಮನುಷ್ಯತ್ವವೇ ಇಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ. ಏನೇ ಆಗಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನ ಬಗ್ಗೆ ತಲೆಗೆ ಬಂದಾಗೆ ಏನೇನೋ ಟ್ರೋಲ್ ಮಾಡುವುದು ಸರಿಯಲ್ಲ. ಯಾರಿಗೂ ನೋವು ನೀಡದಂತೆ, ತಪ್ಪನ್ನು ಖಂಡಿಸುವುದು ಸರಿ. ಆದರೆ ತಮ್ಮ ಲೈಕ್ ಗೋಸ್ಕರ ಏನೇನೋ ಹೇಳುವುದು, ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Kannada Biggboss: ಈಗಲೇ 32 ವರ್ಷ ವಯಸ್ಸಾಗಿರುವ ರೂಪೇಶ್ ಶೆಟ್ಟಿ, ಇನ್ನು 24 ವರ್ಷದ ಸನ್ಯಾ ರವರನ್ನು ಅದೆಷ್ಟು ವರ್ಷ ಆದಮೇಲೆ ಮದುವೆಯಾಗುತ್ತಾರಂತೆ ಗೊತ್ತೇ?

Comments are closed.