Kannada News: ಮೊದಲ ದಿನವೇ ವಾರೀಸುಗೆ ಎರಡೆರಡು ಬಿಗ್ ಶಾಕ್: ರಶ್ಮಿಕಾ ಮೊದಲ ತಮಿಳು ಚಿತ್ರದ ಕತೆ ಏನಾಗಿದೆ ಗೊತ್ತೇ?? ತಿಳಿದರೆ ಎರಡು ಸ್ಟೆಪ್ ಹಾಕಿ ಖುಷಿ ಪಡ್ತಿರಾ.
Kannada News: ಮೊನ್ನೆ ಜನವರಿ 11 ವಿಜಯ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ವಾರಿಸು ತಮಿಳು ಚಿತ್ರ ಬಿಡುಗಡೆಗೊಂಡಿದೆ. ಕರ್ನಾಟಕದಲ್ಲಿಯೂ ಅನೇಕ ಪ್ರದರ್ಶನ ಕಂಡ ಚಿತ್ರಕ್ಕೆ ಒಂದೇ ದಿನಕ್ಕೆ ದೊಡ್ಡ ಆಘಾತ ಎದುರಾಗಿದೆ. ಇನ್ನು ಈ ಚಿತ್ರದಲ್ಲಿ ನಟಿಸಿರುವ ನಟಿ ರಶ್ಮಿಕ ಮಂದಣ್ಣ ಅವರಿಗೆ ಒಂದಲ್ಲ ಎರಡೆರಡು ಶಾಕ್ಗಳು ಎದುರಾಗಿವೆ. ನಟಿ ರಶ್ಮಿಕ ಮಂದಣ್ಣ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಬಿಡುಗಡೆಗೊಂಡ ಎರಡನೇ ದಿನಕ್ಕೆ ಆ ಎಲ್ಲಾ ನಿರೀಕ್ಷೆಗಳು ಮಣ್ಣಾಗಿವೆ. ಕರ್ನಾಟಕದಲ್ಲಿಯೂ ಅನೇಕ ಷೋಗಳನ್ನು ಕಂಡಿದ್ದ ವಾರಿಸು ಚಿತ್ರ ಬಿಡುಗಡೆಗೊಂಡ ಎರಡನೇ ದಿನಕ್ಕೆ ಮಕಾಡೇ ಮಲಗಿದೆ. ಚಿತ್ರತಂಡ ಚಿತ್ರಕ್ಕೆ ಎದುರಾಗುತ್ತಿರುವ ಆತಂಕಗಳಿಗೆಲ್ಲ ನಟಿ ರಶ್ಮಿಕ ಮಂದಣ್ಣ ಅವರೇ ಕಾರಣ ಎಂದು ಆರೋಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ರಶ್ಮಿಕ ಮಂದಣ್ಣ ಅವರ ಎದುರಾಗಿರುವ ಎರಡು ದೊಡ್ಡ ಶಾಕಿಂಗ್ ಸಂಗತಿಗಳು ಯಾವ್ಯಾವು ಗೊತ್ತಾ?
ಮೊನ್ನೆ ಜನವರಿ 11 ವಾರಿಸು (Varisu) ಚಿತ್ರ ಬಿಡುಗಡೆಗೊಂಡಿದೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕ ಮಂದಣ್ಣ ನಟಿಸಿದ್ದಾರೆ. ಇನ್ನು ಈ ಚಿತ್ರ ಕರ್ನಾಟಕದಲ್ಲಿಯೂ ಪ್ರದರ್ಶನ ಕಂಡಿತ್ತು. ಮೊದಲ ದಿನ ವಾರಿಸು ಚಿತ್ರವು 757 ಪ್ರದರ್ಶನಗಳನ್ನು ಕಂಡು ಭರ್ಜರಿ ದಾಖಲೆ ನಿರ್ಮಿಸಿತ್ತು. ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳು ಉಂಟಾಗಿದ್ದವು. ಆದರೆ ಬಿಡುಗಡೆಗೊಂಡ ಎರಡನೇ ದಿನಕ್ಕೆ ಚಿತ್ರವು ಬರೋಬರಿ 291 ಪ್ರದರ್ಶನಗಳನ್ನು ಕಳೆದುಕೊಂಡಿದೆ. 757 ಇದ್ದ ಒಟ್ಟು ಪ್ರದರ್ಶನ 466ಕೆ ಇಳಿಕೆ ಕಂಡಿದೆ. ಆ ಮೂಲಕ ಹತ್ತಿರತ್ತಿರ ಸುಮಾರು 300 ಪ್ರದರ್ಶನಗಳನ್ನು ಚಿತ್ರತಂಡವು ಕೇವಲ ಎರಡನೇ ದಿನಕ್ಕೆ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಒಳ್ಳೆ ಕಮಾಯಿ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿದ್ದ ಚಿತ್ರ ತಂಡ ಎರಡೇ ದಿನಕ್ಕೆ ಎಡವಿದೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ಅವರು ಅಭಿನಯಿಸಿದ್ದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಅಂದಹಾಗೆ ಕರ್ನಾಟಕದಲ್ಲಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಅಷ್ಟಾಗಿ ಜನರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಜನ ಈ ಚಿತ್ರವನ್ನು ಒಂದೇ ದಿನಕ್ಕೆ ಸೋಲಿನ ರುಚಿ ಕಾಣಬೇಕಾಗಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಹಾಗೂ ಇಡಿ ಚಿತ್ರತಂಡಕ್ಕೆ ಇನ್ನೂ ಒಂದು ಶಾಕ್ ಎದುರಾಗಿದೆ. ಚಿತ್ರದ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಿದ್ದು ಮಾತ್ರವಲ್ಲ ಬಿಡುಗಡೆಯಾದ ಒಂದು ದಿನಕ್ಕೆ ಚಿತ್ರವು ಸಹ ಲೀಕ್ ಆಗಿ ಹೋಗಿದೆ. ಬಿಡುಗಡೆಗೊಂಡ ಮೊದಲ ದಿನವೇ ಚಿತ್ರದ ಪೈರಸಿ ಆಗಿದ್ದು ವಾರಿಸು ಚಿತ್ರದ ಎಚ್ ಡಿ ಕ್ವಾಲಿಟಿ ಲಿಂಕ್ ವಿವಿಧ ಫೈರಸಿ ತಾಣಗಳಲ್ಲಿ ಲಭ್ಯವಿದೆ. ಟೊರೆಂಟೋ, ತಮಿಳ್ ರಾಕರ್ಸ್ ಸೇರಿದಂತೆ ವಿವಿಧ ಲಿಂಕ್ ಗಳ ಮೂಲಕ ಚಿತ್ರವನ್ನು ಪೈರಸಿ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರವನ್ನು ವಿವಿಧ ಕ್ವಾಲಿಟಿಯಲ್ಲಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದಾದ ಅವಕಾಶವನ್ನು ಪೈರಸಿಯಲ್ಲಿ ನೀಡಲಾಗುತ್ತಿದೆ. ಟೊರೆಂಟೊ, ಟೆಲಿಗ್ರಾಂ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಪೈರಸಿ ಮಾಡಲಾದ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಓದಿ.. Kannada News: ಮದುವೆಯಾಗುತ್ತಿರುವ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ? ಯಾರು ದೊಡ್ಡವರು ಗೊತ್ತೇ??
ಇದಲ್ಲದೆ ಬಿಡುಗಡೆಯಾದ ಒಂದೇ ದಿನಕ್ಕೆ ಅನೇಕ ಜನರು ಈ ಚಿತ್ರದ ಪೈರಸಿ ನಕಲಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಚಿತ್ರತಂಡದ ಕಲೆಕ್ಷನ್ ವಿಷಯವಾಗಿ ಬಹಳ ಹಿನ್ನಡೆ ಉಂಟಾಗಲಿದೆ. ಈಗಾಗಲೇ ಲಕ್ಷಾಂತರ ಜನರು ಲೀಕ್ ಮಾಡಲಾದ ಚಿತ್ರವನ್ನು ವೀಕ್ಷಿಸುತ್ತಿರುವುದರಿಂದಾಗಿ ಚಿತ್ರದ ಗಳಿಕೆಗೆ ಹೊಡೆತ ಬೀಳಲಿದೆ. ಈ ಮೂಲಕ ಬಿಡುಗಡೆಯಾದ ಎರಡೇ ದಿನಗಳಲ್ಲಿ ಚಿತ್ರವು ಎರಡು ದೊಡ್ಡ ಶಾಕ್ ಗಳನ್ನು ಎದುರಿಸುವಂತಾಗಿದೆ. ಇನ್ನು ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ರಶ್ಮಿಕಾ ಮಂದಣ್ಣ ಅವರಿಗೆ ಎರಡೆರಡು ಶಾಕ್ ಎದುರಾಗಿವೆ. ಒಂದೆಡೆ ಕರ್ನಾಟಕದಲ್ಲಿ ರಶ್ಮಿಕ ಅವರನ್ನು ಮತ್ತು ಅವರ ಚಿತ್ರವನ್ನು ಜನರು ತಿರಸ್ಕರಿಸುತ್ತಿದ್ದಾರೆ, ಇನ್ನೊಂದೆಡೆ ಚಿತ್ರ ಪೈರಸಿಯಾಗಿ ಗಳಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ. ಇದನ್ನು ಓದಿ..Kannada news: ಆಸ್ಪತ್ರೆಯಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಸಮಾರಂಭಕ್ಕೆ ಬಂದ ಸಮಂತಾ, ಧರಿಸಿದ್ದ ಸೀರೆ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಬೇಜಾರ್ ಮಾಡ್ಕೋತೀರಾ.
Comments are closed.