Kannada News: ಅಂದಿನ ಟಾಪ್ ನಟ ವಿಷ್ಣು ಸರ್ ರವರು, ಕೊನೆಯ ಸಿನೆಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಟಾಪ್ ಆಗಿದ್ದರೂ ಇಷ್ಟೇನಾ??

Kannada News: ಸಾಹಸಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಅನೇಕ ವರ್ಷಗಳೇ ಕಳೆದರೂ ಕೂಡ ಅವರ ಮೇಲಿನ ಅಭಿಮಾನಿಗಳ ಅಭಿಮಾನ, ಗೌರವ ಕಡಿಮೆಯಾಗಿಲ್ಲ. ಇತ್ತೀಚಿಗಷ್ಟೇ ಅವರ ಪುಣ್ಯಭೂಮಿಯನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಂದನವನದ ನಟ ನಟಿಯರು, ರಾಜಕೀಯ ಮುಖಂಡರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಭಾಗಿಯಾಗಿದ್ದರು. ಅದ್ದೂರಿಯಾಗಿ ಮೈಸೂರಿನಲ್ಲಿ ಅವರ ಸ್ಮಾರಕದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು. ಇನ್ನು ವಿಷ್ಣುವರ್ಧನ್ ಅಭಿನಯಿಸಿದ ಕೊನೆಯ ಚಿತ್ರವೆಂದರೆ ಅದು ಆಪ್ತರಕ್ಷಕ. ಈ ಚಿತ್ರ ನಟ ವಿಷ್ಣುವರ್ಧನ್ ಅವರು ಸಾವನ್ನಪ್ಪಿದ ನಂತರ ಬಿಡುಗಡೆಗೊಂಡಿತ್ತು. ಅಂದ ಹಾಗೆ ತಮ್ಮ ಕೊನೆಯ ಚಿತ್ರಕ್ಕೆ ನಟ ವಿಷ್ಣುವರ್ಧನ್ ಅವರು ಪಡೆದಿದ್ದು ಎಷ್ಟು ಸಂಭಾವನೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಆಪ್ತರಕ್ಷಕ ಚಿತ್ರವನ್ನು ಬಹಳ ವಿಶೇಷ ರೀತಿಯಲ್ಲಿ ತಯಾರಿಸಲಾಗಿದ್ದು, ಈ ಚಿತ್ರದಲ್ಲಿ ವಿಷ್ಣುವರ್ಧನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಕೂಡ ವಿಜಯರಾಜೇಂದ್ರ ಬಹದ್ದೂರ್ ಪಾತ್ರದಲ್ಲಿ ಅಭಿಮಾನಿಗಳು ವಿಷ್ಣುವರ್ಧನ್ ಅವರಿಗೆ ಬಹುಪರಾಕ್ ಹೇಳಿದರು. ಅಷ್ಟರಮಟ್ಟಿಗೆ ಅವರ ಅಭಿನಯ, ಪಾತ್ರ, ಗೆಟಪ್, ಲುಕ್ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಅಂದಹಾಗೆ ವಿಷ್ಣುವರ್ಧನ್ ಅವರು ವಿಜಯರಾಜೇಂದ್ರ ಬಹದ್ದೂರ್ ಪಾತ್ರದ ಘರನಿ ಘರ ಘರನಿ ಹಾಡಿನಲ್ಲಿ ವಿಶೇಷವಾದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಈ ಹಾಡಿಗಾಗಿ ವಿಷ್ಣುವರ್ಧನ್ ಅವರಿಗೆ ಸಿದ್ಧಪಡಿಸಿದ್ದ ಉಡುಪಿನ ಬೆಲೆ ಎಷ್ಟು ಎಂದು ಕೇಳಿದರೆ ಎಂತವರಿಗೂ ಆಶ್ಚರ್ಯ ಆಗದೆ ಇರದು. ಆಗಿನ ಕಾಲದಲ್ಲಿ ವಿನ್ಯಾಸಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಲಾಗಿತ್ತು. ಇದನ್ನು ಓದಿ..Kannada News: ಎನ್ಟಿಆರ್ ಜೊತೆ ತೆಲುಗು ಸಿನಿಮಾ ಮಾಡಲು, ದೇಶವೇ ನಿಂತು ಹೋಗುವಂತೆ ಸಂಭಾವನೆ ಕೇಳಿದ ಜಾಹ್ನವಿ. ಎಷ್ಟು ಬೇಕಂತೆ ಗೊತ್ತೇ?

kannada news vishnuvardhan | Kannada News: ಅಂದಿನ ಟಾಪ್ ನಟ ವಿಷ್ಣು ಸರ್ ರವರು, ಕೊನೆಯ ಸಿನೆಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಟಾಪ್ ಆಗಿದ್ದರೂ ಇಷ್ಟೇನಾ??
Kannada News: ಅಂದಿನ ಟಾಪ್ ನಟ ವಿಷ್ಣು ಸರ್ ರವರು, ಕೊನೆಯ ಸಿನೆಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಟಾಪ್ ಆಗಿದ್ದರೂ ಇಷ್ಟೇನಾ?? 2

ಈ ಹಾಡಿನಲ್ಲಿ ವಿಷ್ಣುವರ್ಧನ್ ಅವರು ಧರಿಸಬೇಕಾದ ಬಟ್ಟೆಯ ವಿನ್ಯಾಸದ ಚಿತ್ರವನ್ನು ಸಿದ್ದಗೊಳಿಸಲಾಗಿತ್ತು. ಆದರೆ ಅದೇ ರೀತಿಯ ಉಡುಪನ್ನು ಗಲ್ಲಿ ಗಲ್ಲಿಗಳಲ್ಲಿ ನೂರಾರು ಅಂಗಡಿಗಳಲ್ಲಿ ತಡಕಾಡಿದರು ಸಿಕ್ಕಿರಲಿಲ್ಲವಂತೆ. ಕೊನೆಯಲ್ಲಿ ಯಾವುದೋ ಅಂಗಡಿಗಳಲ್ಲಿ ಸಿಕ್ಕಿದಂತೆ, ಅದನ್ನು ಅಂತಿಮವಾಗಿ ವಿನ್ಯಾಸಗೊಳಿಸಿ, ಫೈನಲ್ ಮಾಡಲು ಬರೋಬ್ಬರಿ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಖರ್ಚಾಯಿತು. ಆಗಿನ ಕಾಲದಲ್ಲೇ ಇಷ್ಟು ದೊಡ್ಡ ಮೊತ್ತದ ಹಣವನ್ನು ಕೇವಲ ಒಂದು ಉಡುಪಿಗಾಗಿ ಚಿತ್ರತಂಡ ಸುರಿದಿತ್ತು. ಇನ್ನು ಆಪ್ತರಕ್ಷಕ ಚಿತ್ರವು ನಟ ವಿಷ್ಣುವರ್ಧನ್ ಅವರು ಸಾವನಪ್ಪಿದ ಬಳಿಕ ತೆರೆಕಂಡಿದ್ದು. ಹಾಗಾಗಿ ಅಲ್ಲಿಗೆ ಈ ಚಿತ್ರ ವಿಷ್ಣುವರ್ಧನ್ ಅವರ ಕೊನೆಯ ಚಿತ್ರವಾಯಿತು. ಇನ್ನು ಈ ಚಿತ್ರಕ್ಕಾಗಿ ನಟ ವಿಷ್ಣುವರ್ಧನ್ ಅವರು ಬರೋಬ್ಬರಿ 50 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಕೆಲವೇ ಕೆಲವು ದಿನಗಳ ಹಿಂದೆ ಅಬ್ಬರಿಸಿ, ದೇಶವನ್ನೇ ಶೇಕ್ ಮಾಡಿ ಕೃತಿ ಶೆಟ್ಟಿ, ಸಿನಿಮಾ ಇಂದ ದೂರ ಹೋಗುತ್ತಾರಾ? ಕನ್ನಡತಿ ಆಟಕ್ಕೆ ಬ್ರೇಕ್? ಏನಾಗಿದೆ ಗೊತ್ತೇ?

Comments are closed.