ಬಿಡುಗಡೆಯಾದ ಈ ವಾರದ ಟಿಆರ್ ಪಿ ರೇಟಿಂಗ್, ಈ ವಾರದ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ನಿಮ್ಮ ನೆಚ್ಚಿನ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತೇ??

ನಮಸ್ಕಾರ ಸ್ನೇಹಿತರೇ ಹೇಗೆ ಸಿನಿಮಾ ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾದ ಕಲೆಕ್ಷನ್ ಗಾಗಿ ಕಾಯುತ್ತಾರೆಯೋ ಹಾಗೆಯೇ ಕಿರುತೆರೆಯ ಅಭಿಮಾನಿಗಳು ತಮ್ಮ ನೆಚ್ಚಿನ ಧಾರವಾಹಿಗಳ ರೇಟಿಂಗ್ ನೋಡಲು ವಾರಾಂತ್ಯದಲ್ಲಿ ಕಾಯುತ್ತಾರೆ. ಇಂದಿನ ವಿಚಾರದಲ್ಲಿ ನಾವು ಈ ವಾರದ ಟಾಪ್ ಸೀರಿಯಲ್ ಯಾವುದು ಎನ್ನುವುದನ್ನು ಹೇಳಲು ಬಂದಿದ್ದೇವೆ. ಯಾವತ್ತೂ ಧಾರವಾಹಿಯ ಟಿಆರ್ಪಿ ರೇಟಿಂಗ್ ಲಿಸ್ಟಿನಲ್ಲಿ ಕೆಳಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಲರ್ಸ್ ಕನ್ನಡ ವಾಹಿನಿ ಈ ಬಾರಿ ಟಾಪ್ 10ರಲ್ಲಿ ತನ್ನ ಮೂರು ಧಾರಾವಾಹಿಗಳನ್ನು ಒಳಗೊಂಡಿದೆ ಎಂಬುದನ್ನು ಈ ಮೂಲಕ ಹೇಳುತ್ತಿದ್ದೇವೆ.

ಅದರಲ್ಲೂ ಹರ್ಷ ಹಾಗೂ ಭುವಿಯ ಸೂಪರ್ ಹಿಟ್ ಧಾರವಾಹಿ ಆಗಿರುವ ಕನ್ನಡತಿ ಹತ್ತರಲ್ಲಿ ತನ್ನ ಜಾಗವನ್ನು ಸಂಪಾದಿಸಿದೆ. ಹೌದು ಗೆಳೆಯರೆ 4.1 ರೇಟಿಂಗ್ ಪಡೆಯುವ ಮೂಲಕ ಕನ್ನಡತಿ ಗಿಣಿರಾಮ ಲಕ್ಷಣ ಈ ಮೂರು ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಗಳು 9ನೇ ಸ್ಥಾನವನ್ನು ಪಡೆದುಕೊಂಡಿವೆ. ಇನ್ನು ಮೊದಲ ಮೂರು ಸ್ಥಾನಗಳಲ್ಲಿ ಎಂದಿನಂತೆ ಸಾಮಾನ್ಯವಾಗಿ ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿಗಳೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾವೆ.

kannada serials 1 | ಬಿಡುಗಡೆಯಾದ ಈ ವಾರದ ಟಿಆರ್ ಪಿ ರೇಟಿಂಗ್, ಈ ವಾರದ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ನಿಮ್ಮ ನೆಚ್ಚಿನ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತೇ??
ಬಿಡುಗಡೆಯಾದ ಈ ವಾರದ ಟಿಆರ್ ಪಿ ರೇಟಿಂಗ್, ಈ ವಾರದ ಟಾಪ್ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ನಿಮ್ಮ ನೆಚ್ಚಿನ ಧಾರಾವಾಹಿಗೆ ಎಷ್ಟನೇ ಸ್ಥಾನ ಗೊತ್ತೇ?? 2

9.5 ರೇಟಿಂಗ್ ಪಡೆಯುವ ಮೂಲಕ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿ 9.3 ರೇಟಿಂಗ್ ಪಡೆಯುವ ಮೂಲಕ ಗಟ್ಟಿಮೇಳ ಎರಡನೇ ಸ್ಥಾನದಲ್ಲಿ ಹಾಗೂ ಮೂರನೇ ಸ್ಥಾನದಲ್ಲಿ 7.5 ರೇಟಿಂಗ್ ಪಡೆಯುವ ಮೂಲಕ ಹಿಟ್ಲರ್ ಕಲ್ಯಾಣ ವಿರಾಜಮಾನವಾಗಿದೆ. ಇವಿಷ್ಟು ಧಾರವಾಹಿಗಳ ರೇಟಿಂಗ್ ಸ್ಥಾನಗಳಾಗಿದ್ದರೆ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಅವುಗಳ ರೇಟಿಂಗ್ ಅನ್ನು ಕೂಡ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ 6.3 ರೇಟಿಂಗ್ ಪಡೆಯುವ ಮೂಲಕ ಮೊದಲನೇ ಸ್ಥಾನದಲ್ಲಿ ಮಿಂಚುತ್ತಿದೆ. ಡ್ಯಾನ್ಸಿಂಗ್ ಐಕಾನ್ ಆಗಿರುವ ಶಿವಣ್ಣ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಕಾರ್ಯಕ್ರಮದ ಜನಪ್ರಿಯತೆಯನ್ನು ಕರ್ನಾಟಕದ ಮೂಲೆಮೂಲೆಗೂ ಹಬ್ಬಿಸಿದೆ ಎಂದು ಹೇಳಬಹುದಾಗಿದೆ. 5.1 ಟಿಆರ್ಪಿ ರೇಟಿಂಗ್ ಪಡೆಯುವ ಮೂಲಕ ಡ್ರಾಮಾ ಜೂನಿಯರ್ಸ್ ಕೂಡ ಎರಡನೇ ಸ್ಥಾನದಲ್ಲಿದೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ 3.1 ರೇಟಿಂಗ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮ ಮೂರನೇ ಸ್ಥಾನದಲ್ಲಿ ಇರುವುದು ನಿಜಕ್ಕೂ ಕೂಡ ಕಾರ್ಯಕ್ರಮದ ವೀಕ್ಷಕರಿಗೆ ಬೇಸರದ ವಿಚಾರವಾಗಿದೆ.

Comments are closed.