ನನಗೆ ಮಗು ಬೇಕು ಆದರೆ ಅದು ಸಾಧ್ಯವಿಲ್ಲ ಎಂದು ಕ್ಯಾಮೆರಾ ಮುಂದೇನೆ ಬಿಕ್ಕಿ ಬಿಕ್ಕಿ ಅತ್ತ ಖ್ಯಾತ ನಟಿ.

ನಮಸ್ಕಾರ ಸ್ನೇಹಿತರೇ ಪ್ರೇಕ್ಷಕರಾದ ನಾವು ಕೇವಲ ಸೆಲೆಬ್ರಿಟಿಗಳ ಐಷಾರಾಮಿ ಜೀವನವನ್ನು ಹಾಗೂ ತೆರೆಯ ಮುಂದಿನ ಬೆಡಗು ಬಿನ್ನಾಣವನ್ನು ಮಾತ್ರ ನೋಡಿರುತ್ತೇವೆ. ಆದರೆ ಅವರ ನಿಜ ಜೀವನದ ಒಳಗುಟ್ಟನ್ನು ನಾವು ಖಂಡಿತವಾಗಿ ಯೋಚಿಸುವುದು ಕೂಡ ಇಲ್ಲ. ಇಂದಿನ ಹಿಂದಿ ಚಿತ್ರರಂಗದ ಹಾಗೂ ಕಿರುತೆರೆಯ ಖ್ಯಾತ ನಟಿಯೊಬ್ಬರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳು ಕೂಡ ಬಂದಿವೆ. ಅದರಲ್ಲಿ ಓಟಿಟಿ ನಲ್ಲಿ ಪ್ರಸಾರ ವಾಗುವಂತಹ ಲಾಕಪ್ ಎನ್ನುವ ಕಾರ್ಯಕ್ರಮ ಕೂಡ ಒಂದು ಹೌದು. ಈ ಕಾರ್ಯಕ್ರಮವನ್ನು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಕಂಗನಾ ರಣಾವತ್ ಅವರು ನಡೆಸಿಕೊಡುತ್ತಿದ್ದಾರೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಈ ಕಾರ್ಯಕ್ರಮ ಬಿಗ್ ಬಾಸ್ ನ ಮತ್ತೊಂದು ರೂಪ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಿಯಾಲಿಟಿ ಶೋ ಕಾರ್ಯಕ್ರಮ ಕೂಡ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ. ಅವರಲ್ಲಿ ಹಿಂದಿ ಕಿರುತೆರೆಯ ಕ್ಷೇತ್ರದ ಖ್ಯಾತ ನಟಿಯಾಗಿರುವ ಪಾಯಲ್ ರೋಹ್ಟಗಿ ರವರ ಕುರಿತಂತೆ ಹೇಳಲು ಹೊರಟಿದ್ದೇವೆ.

payal rohatgi 1 | ನನಗೆ ಮಗು ಬೇಕು ಆದರೆ ಅದು ಸಾಧ್ಯವಿಲ್ಲ ಎಂದು ಕ್ಯಾಮೆರಾ ಮುಂದೇನೆ ಬಿಕ್ಕಿ ಬಿಕ್ಕಿ ಅತ್ತ ಖ್ಯಾತ ನಟಿ.
ನನಗೆ ಮಗು ಬೇಕು ಆದರೆ ಅದು ಸಾಧ್ಯವಿಲ್ಲ ಎಂದು ಕ್ಯಾಮೆರಾ ಮುಂದೇನೆ ಬಿಕ್ಕಿ ಬಿಕ್ಕಿ ಅತ್ತ ಖ್ಯಾತ ನಟಿ. 2

ಹೌದು ಗೆಳೆಯರೇ ಪಾಯಲ್ ರವರು ಈ ಕಾರ್ಯಕ್ರಮದ ವೇಳೆ ಕ್ಯಾಮೆರಾ ಮುಂದೆ ಹೇಳಿರುವಂತಹ ಒಂದು ಘಟನೆ ಈಗ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ ಎಂದರೆ ತಪ್ಪಾಗಲಾರದು. ಪಾಯಲ್ ರವರು ಕಿರುತೆರೆ ನಟ ಆಗಿರುವ ಸಂಗ್ರಾಮ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ. ಅವರಿಬ್ಬರೂ ಮದುವೆಯಾಗಿ ಕೆಲವು ವರ್ಷಗಳು ಕಳೆದರೂ ಕೂಡ ಈಗಾಗಲೇ ದೇವರಿಗೊಂದು ವಿಚಾರದಿಂದ ಸಾಕಷ್ಟು ಬಳಲುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಸಂಗ್ರಾಮ್ ಸಿಂಗ್ ರವರಿಗೆ ಮಕ್ಕಳು ಎಂದರೆ ಎಲ್ಲಿಲ್ಲದ ಪಂಚಪ್ರಾಣ. ಆದರೆ ಪಾಯಲ್ ರವರಿಗೆ ಇರುವಂತಹ ಸಮಸ್ಯೆಯಿಂದಾಗಿ ಅವರಿಗೆ ಮಗು ಜನಿಸುವುದಿಲ್ಲ. ಹೀಗಾಗಿ ಈ ವಿಚಾರದ ಕುರಿತಂತೆ ಪಾಯಲ್ ರವರು ಸಾಕಷ್ಟು ದುಃಖಿತರಾಗಿದ್ದಾರೆ. ಇನ್ನು ಈ ವಿಚಾರವನ್ನು ಕೂಡ ಅವರು ಕ್ಯಾಮರ ಮುಂದೆ ಅಳುತ್ತಲೇ ಹೇಳಿಕೊಂಡಿದ್ದಾರೆ. ನಾನು ಬಂಜೆ ನನಗೆ ಮಕ್ಕಳು ಆಗುವುದಿಲ್ಲ ಎನ್ನುವುದಾಗಿ ದುಃಖದಿಂದ ಮಾತನಾಡಿದ್ದಾರೆ. ಈಗಾಗಲೇ ಈ ದೃಶ್ಯ ವೀಕ್ಷಕರ ಕಣ್ಣಂಚಿನಲ್ಲಿ ಹನಿ ನೀರು ಜಿನುಗುವಂತೆ ಮಾಡಿದೆ.

Comments are closed.