Kantara: ಕಾಂತಾರ 2 ಮಾಡಲು ಸಿದ್ದರಾಗಿ, ದೈವದ ಬಳಿ ಅನುಮತಿ ಕೇಳಿದ ರಿಷಬ್ ಶೆಟ್ಟಿ ಗೆ ಹೇಳಿದ್ದೇನು ಗೊತ್ತೇ?? ಬರುವುದಿಲ್ಲವೇ ಕಾಂತಾರ 2??

Kantara: ಕಾಂತಾರ ಚಿತ್ರ ಎಲ್ಲ ನಿರೀಕ್ಷೆಗಳನ್ನು ಮೀರಿ ದೊಡ್ಡ ದಾಖಲೆ ಮಾಡಿದೆ. ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಅದೆಷ್ಟೋ ದಾಖಲೆಗಳನ್ನು ಕನ್ನಡದ ಕಾಂತಾರ ಪುಡಿಪುಡಿ ಮಾಡಿದೆ ಎಂದೇ ಹೇಳಬಹುದು. ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಚಿತ್ರ ಎಂದು ಕಾಂತಾರ ಹೆಗ್ಗಳಿಕೆ ಮಾಡಿದೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ತಯಾರಾದ ಕಥೆ ಇಷ್ಟು ದೊಡ್ಡ ಮಟ್ಟಕ್ಕೆ ಗಳಿಕೆ ಮಾಡಿದ್ದು ನಿಜವಾಗಲೂ ಸಾಧನೆಯ ಸರಿ ಎಂದು ಪ್ರತಿಯೊಬ್ಬ ಪ್ರೇಕ್ಷಕನು ಹೇಳುತ್ತಿದ್ದಾನೆ. ಚಿತ್ರ ನೋಡಿದ ಪ್ರತಿಯೊಬ್ಬರು ಕಾಂತಾರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಬಿಡುಗಡೆಯಾಗಿ ಇಷ್ಟು ದಿನಗಳು ಕಳೆದರೂ ಕೂಡ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಎಷ್ಟೋ ಜನರು ಮತ್ತೆ ಮತ್ತೆ ಚಿತ್ರ ನೋಡುತ್ತಿದ್ದಾರೆ. ಇದೀಗ ಕಾಂತಾರ 2 ಮಾಡುವುದರ ಕುರಿತು ದೈವದ ಅನುಮತಿಯನ್ನು ಚಿತ್ರತಂಡ ಕೇಳಿದೆ. ಈ ವೇಳೆ ಭೂತ ಕೋಲ ದೈವ ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡುವ ಮೂಲಕ ಶಾಕ್ ನೀಡಿದೆ.

ಕಾಂತಾರ ಸಿನಿಮಾ ದೊಡ್ಡಮಟ್ಟದ ಹಿಟ್ ಆದ ಬಳಿಕ ಅದರ ಮುಂದುವರಿದ ಭಾಗವನ್ನು ಕೂಡ ತರಬೇಕು ಎನ್ನುವ ಬೇಡಿಕೆಗಳು ಕೇಳಿಬಂದಿದ್ದವು. ಇದರ ಬಗ್ಗೆ ಚಿತ್ರತಂಡ ಆಲೋಚಿಸಿತು. ಇದೀಗ ಕಾಂತರ 2 ಚಿತ್ರವನ್ನು ತೆರೆಗೆ ತರುತ್ತಿರುವ ಆಲೋಚನೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಮುಂದುವರಿದ ಭಾಗವನ್ನು ಚಿತ್ರಿಸುವುದಕ್ಕಾಗಿ ಚಿತ್ರತಂಡವು ದೈವದ ಅನುಮತಿಯನ್ನು ಕೇಳಲು ಹೋಗಿದೆ. ಮಂಗಳೂರಿನಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಇಡೀ ಚಿತ್ರತಂಡವು ಭಾಗವಹಿಸಿತ್ತು. ರಿಷಭ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಪ್ರಗತಿ ಶೆಟ್ಟಿ (Pragathi Shetty) ಸೇರಿದಂತೆ ಇಡೀ ಚಿತ್ರತಂಡ ಈ ಕೋಲದಲ್ಲಿ ಭಾಗವಹಿಸಿತ್ತು. ಈ ವೇಳೆ ದೈವಕ್ಕೆ ಕಾಂತಾರ 2 ನಿರ್ಮಿಸುವುದರ ಕುರಿತು ಅನುಮತಿ ಪಡೆದಿದೆ. ಇದನ್ನು ಕೇಳಿದ ದೈವವೂ ಚಿತ್ರವನ್ನು ನಿರ್ಮಿಸುವುದಕ್ಕಾಗಿ ಅನುಮತಿಯನ್ನು ನೀಡಿದೆ. ಆದರೆ ಈ ವೇಳೆ ಕೆಲವು ಎಚ್ಚರಿಕೆಗಳನ್ನು ನೀಡಿದೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್; ಸಂಭಾವನೆ ದಾಖಲೆಗಲ್ಲಿ ಪುಡಿ ಪುಡಿ ಮಾಡಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

kannada news rishab shetty kantara | Kantara: ಕಾಂತಾರ 2 ಮಾಡಲು ಸಿದ್ದರಾಗಿ, ದೈವದ ಬಳಿ ಅನುಮತಿ ಕೇಳಿದ ರಿಷಬ್ ಶೆಟ್ಟಿ ಗೆ ಹೇಳಿದ್ದೇನು ಗೊತ್ತೇ?? ಬರುವುದಿಲ್ಲವೇ ಕಾಂತಾರ 2??
Kantara: ಕಾಂತಾರ 2 ಮಾಡಲು ಸಿದ್ದರಾಗಿ, ದೈವದ ಬಳಿ ಅನುಮತಿ ಕೇಳಿದ ರಿಷಬ್ ಶೆಟ್ಟಿ ಗೆ ಹೇಳಿದ್ದೇನು ಗೊತ್ತೇ?? ಬರುವುದಿಲ್ಲವೇ ಕಾಂತಾರ 2?? 2

ರಿಷಬ್ ಶೆಟ್ಟಿ (Rishab Shetty) ಅವರು ಕಾಂತಾರ ಎರಡು ಭಾಗವನ್ನು ಚಿತ್ರಿಸುವುದರ ಕುರಿತಾಗಿ ದೈವದ ಅನುಮತಿಯನ್ನು ಕೇಳಿದ್ದಾರೆ. ಆಗ ದೈವವೂ ಚಿತ್ರಕ್ಕೆ ಅನುಮತಿಯನ್ನು ನೀಡಿತು. ಕಾಂತಾರ ಎರಡನೇ ಭಾಗವನ್ನು ತರಲು ದೈವ ಒಪ್ಪಿಕೊಂಡಿದೆ. ಆದರೆ ಇದೇ ವೇಳೆ ಚಿತ್ರತಂಡಕ್ಕೆ ಕೆಲವು ಎಚ್ಚರಿಕೆಗಳನ್ನು ದೈವವೂ ನೀಡಿದೆ. ಅದರಂತೆ ಈ ಮೊದಲು ಎಷ್ಟು ಶುದ್ಧ ಭಾವನೆಗಳೊಂದಿಗೆ, ಭಯ ಭಕ್ತಿಯಿಂದ ಚಿತ್ರವನ್ನು ನಿರ್ಮಿಸಲಾಗಿತ್ತು. ಅದೇ ಭಯ ಭಕ್ತಿಯಿಂದ ಮುಂದಿನ ಭಾಗವನ್ನು ಕೂಡ ಚಿತ್ರಿಸಬೇಕು. ನಿಮ್ಮ ಭಾವ ಪವಿತ್ರವಾಗಿಲ್ಲದಿದ್ದರೆ ಚಿತ್ರಕ್ಕೆ ಒಳ್ಳೆಯದಾಗುವುದಿಲ್ಲ. ದೈವವನ್ನು ನಂಬಿ ನೀವು ಚಿತ್ರ ನಿರ್ಮಿಸಿದ್ದೀರಿ. ಹಾಗಾಗಿ ದೇವರೇ ನಿಮ್ಮ ಚಿತ್ರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಯಿತು. ಇದೀಗ ಅದನ್ನು ಮತ್ತೆ ಮುಂದುವರಿಸುತ್ತಿದ್ದೀರಿ, ಅದೇ ತಂಡದೊಂದಿಗೆ ಮೊದಲಿನಂತೆ ಶಿಸ್ತಿನಿಂದ ಚಿತ್ರ ತಯಾರಿಸಿ. ದೈವ ನಿಮ್ಮ ಜೊತೆಗೆ ಸದಾ ಇರುತ್ತದೆ ಎಂದು ಪಂಜುರ್ಲಿ ದೈವ ಹೇಳಿದೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ಕನ್ನಡತಿಯಲ್ಲಿ ಹೊಸ ಟ್ವಿಸ್ಟ್, ದಿಡೀರ್ ಎಂದು ಬದಲಾದ ಹರ್ಷ, ಈ ಬದಲಾವಣೆ ಇಂದೇ ಇರುವ ಪ್ಲಾನ್ ಏನು ಗೊತ್ತೇ??

Comments are closed.