News from ಕನ್ನಡಿಗರು

ಬರೋಬ್ಬರಿ ಏಳು ವರ್ಷಗಳ ನಂತರ ಸಿಹಿ ಸುದ್ದಿ ಹಂಚಿಕೊಂಡ ರಾಧಾ ಕಲ್ಯಾಣದ ರಾಧೆ ಖ್ಯಾತಿಯ ಕೃತಿಕಾ. ಏನು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕೇವಲ ಸಿನಿಮಾಗಳು ಮಾತ್ರವಲ್ಲದೆ ಲಾಕ್ ಡೌನ್ ಸಮಯದಲ್ಲಿ ಧಾರವಾಹಿಗಳು ಕೂಡ ಸಿನಿಮಾ ಕ್ಷೇತ್ರಕ್ಕಿಂತ ಹೆಚ್ಚಾಗಿ ಬೆಳೆದು ನಿಂತಿದೆ ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ಸಂಜೆ ಆದರೆ ಸಾಕು ಮನೆಮಂದಿಯಲ್ಲ ಕುಳಿತು ನೋಡುವಂತಹ ಸಾಂಸಾರಿಕ ಕಂಟೆಂಟ್ ಗಳನ್ನು ಧಾರವಾಹಿಗಳು ನೀಡುತ್ತವೆ ಹೀಗಾಗಿ ಧಾರವಾಹಿಗೆ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗವೇ ಕರ್ನಾಟಕದಲ್ಲಿದೆ. ಹೀಗಾಗಿ ಕೇವಲ ಸಿನಿಮಾ ಕಲಾವಿದರಿಗೆ ಮಾತ್ರವಲ್ಲದೆ ಧಾರವಾಹಿ ಕಲಾವಿದರಿಗೂ ಕೂಡ ಅಷ್ಟೇ ದೊಡ್ಡ ಮಟ್ಟದ ಅಭಿಮಾನಿ ಬಳಗ ಇರುತ್ತದೆ.

ಅದರಲ್ಲೂ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ರಾಧಾಕಲ್ಯಾಣ ಧಾರವಾಹಿಯ ಒಬ್ಬ ನಟಿಯ ಕುರಿತಂತೆ. ಹೌದು ಗೆಳೆಯರೇ 2011 ರಲ್ಲಿ ರಾಧಾ ಕಲ್ಯಾಣ ಎನ್ನುವ ಧಾರವಾಹಿ ಜೀ ಕನ್ನಡ ವಾಹಿನಿಯಲು ದೊಡ್ಡ ಮಟ್ಟದ ಜನಪ್ರಿಯ ಧಾರವಾಹಿಯಾಗಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಹೊಂದಿತ್ತು. ಈ ದಾರವಾಹಿಯ ನಾಯಕ ನಟಿಯಾಗಿ ನಟಿಸಿದ್ದ ಕೃತಿಕಾರವೀಂದ್ರ ಈ ಧಾರವಾಹಿಯ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ತಮ್ಮ ನಟನ ಕರಿಯರ್ನಲ್ಲಿ ಯಶಸ್ಸನ್ನು ಗಳಿಸಿದ್ದರು. ರಾಧಾ ಕಲ್ಯಾಣ ಧಾರವಾಹಿಯಲ್ಲಿ ನಟಿಸಿದ ನಂತರ ಕೃತಿಕ ರವೀಂದ್ರ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಐದರ ಸೀಸನ್ ನಲ್ಲಿ ಕೂಡ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಆದರೆ ಇದಾದ ನಂತರ ಯಾವುದೇ ಧಾರವಾಹಿಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ.

ಇದಾದ ನಂತರ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಕೃತಿಕಾ ರವೀಂದ್ರ ಬೇರೆ ಯಾವುದು ಧಾರವಾಹಿಗಳಲ್ಲಿ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಕೃತ್ತಿಕಾ ರವೀಂದ್ರ ಕಿರುತೆರೆಯ ಕಂಬ್ಯಾಕ್ ಮಾಡಲು ಸಿದ್ದರಾಗಿದ್ದಾರೆ. ರಾಘವೇಂದ್ರ ರಾಜಕುಮಾರ್ ರವರ ಪೂರ್ಣಿಮಾ ಎಂಟರ್ಪ್ರೈಸಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿರಿಕನ್ನಡ ಚಾನೆಲ್ ನಲ್ಲಿ ಪ್ರಸಾರವನ್ನು ಆರಂಭಿಸಲಿರುವ ವಿಜಯದಶಮಿ ಧಾರವಾಹಿಯಲ್ಲಿ ಮತ್ತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಆಗಸ್ಟ್ 1ರಿಂದ ರಾತ್ರಿ 8.30 ಕ್ಕೆ ಪ್ರತಿನಿತ್ಯ ಈ ಧಾರವಾಹಿ ಪ್ರಸಾರ ಕಾಣಲಿದೆ ಎಂಬುದಾಗಿ ತಿಳಿದು ಬಂದಿದ್ದು ಕೃತಿಕಾ ಮತ್ತೆ ತಮ್ಮ ಕಿರುತೆರೆ ಅಭಿಮಾನಿಗಳನ್ನು ಹೇಗೆ ರಂಜಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.