News from ಕನ್ನಡಿಗರು

ಮಂತ್ರಾಲಯ ದೇವಸ್ಥಾನಕ್ಕೆ ಹರಿದು ಬಂದ ಕಾಣಿಕೆ ಎಷ್ಟು ಗೊತ್ತೇ?? ಹೊಸ ದಾಖಲೆ ಸೃಷ್ಟಿ

17

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ಎನ್ನುವುದು ಅನಾದಿಕಾಲದಿಂದಲೂ ಕೂಡ ಸನಾತನ ಅಂದರೆ ಹಿಂದೂ ಧರ್ಮವನ್ನು ಪಾಲಿಸಿಕೊಂಡು ಬಂದಂತಹ ಮೂಲ ದೇಶವಾಗಿದೆ. ಹೀಗಾಗಿ ನಮ್ಮಲ್ಲಿ ಧಾರ್ಮಿಕ ಆಚರಣೆಗಳಿಗಾಗಿ ದೇವಸ್ಥಾನಗಳಿಗೆ ಹೋಗಲಾಗುತ್ತದೆ. ಅದರಲ್ಲೂ ನಮ್ಮ ದೇಶದಲ್ಲಿ ಅಸಂಖ್ಯಾತ ಪ್ರಖ್ಯಾತ ದೇವಸ್ಥಾನಗಳ ರಾಶಿಯೇ ಇದೆ ಎಂದು ಹೇಳಬಹುದಾಗಿದೆ. ಅವುಗಳಲ್ಲಿ ಇಂದು ಪುಣ್ಯಕ್ಷೇತ್ರ ವಾಗಿರುವ ಮಂತ್ರಾಲಯದ ಕುರಿತಂತೆ ಒಂದು ವಿಚಾರವನ್ನು ನಿಮಗೆ ಪ್ರಸ್ತುತಪಡಿಸಲು ಹೊರಟಿದ್ದೇವೆ.

ನಿಮಗೆಲ್ಲರಿಗೂ ತಿಳಿದಿರಬಹುದು ಮಂತ್ರಾಲಯದ ರಾಯರ ಸಾನಿಧ್ಯವನ್ನು ಪಡೆಯಲು ಕೇವಲ ನಮ್ಮ ರಾಜ್ಯದಿಂದ ಮಾತ್ರವಲ್ಲದೆ ಹೊರ ರಾಜ್ಯ ಹೊರ ದೇಶಗಳಿಂದಲೂ ಕೂಡ ಭಕ್ತಾಭಿಮಾನಿಗಳ ದಂಡೆ ಹರಿದು ಬರುತ್ತದೆ. ಅದರಲ್ಲೂ ಕಳೆದ ಒಂದು ತಿಂಗಳಿಂದ ಈ ಪುಣ್ಯಕ್ಷೇತ್ರಕ್ಕೆ ಬರುತ್ತಿರುವ ಭಕ್ತಾಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಕೇವಲ ಭಕ್ತಾಭಿಮಾನಿಗಳ ಸಂಖ್ಯೆ ಮಾತ್ರವಲ್ಲದೆ ಅವರು ಹಾಕುತ್ತಿರುವ ಕಾಣಿಕೆಯ ಸಂಗ್ರಹವು ಕೂಡ ಹೆಚ್ಚಾಗಿದೆ ಎಂದು ಹೇಳಬಹುದು. ಅದರಲ್ಲೂ ಜುಲೈ ತಿಂಗಳ ಕಾಣಿಕೆಯ ಒಟ್ಟು ಮೌಲ್ಯ ಮುಜರಾಯಿ ಇಲಾಖೆಯಿಂದ ಈಗ ಹೊರಬಂದಿದ್ದು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಜುಲೈ ತಿಂಗಳ ಹುಂಡಿಗೆ ಒಟ್ಟಾರೆ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು ಒಟ್ಟು 19721825 ರೂಪಾಯಿಗಳು ಸಂಗ್ರಹವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದರಲ್ಲಿ ನಾಣ್ಯ 404059 ಒಂದು ಕೋಟಿ ತೊಂಬತ್ತು ಮೂರು ಲಕ್ಷಕ್ಕೂ ಅಧಿಕ ನೋಟು ಸಂಗ್ರಹವಾಗಿದೆ ಎಂಬುದಾಗಿ ತಿಳಿದು ಬಂದಿದೆ. 16 ಗ್ರಾಂ ಬಂಗಾರ 745 ಗ್ರಾಂ ಬೆಳ್ಳಿ ಸಿಕ್ಕಿದೆ ಎಂಬುದಾಗಿ ಕೂಡ ಮಠದ ವ್ಯವಸ್ಥಾಪಕರು ಮುಜರಾಯಿ ಇಲಾಖೆಗೆ ನೀಡಿರುವ ಹೇಳಿಕೆಯಲ್ಲಿ ಹೇಳಿದ್ದಾರೆ. ಮಂತ್ರಾಲಯ ಪುಣ್ಯಕ್ಷೇತ್ರದ ಈ ತಿಂಗಳ ಹಣದ ಗಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಕಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.