ಹಣ ಹೋಯ್ತು, ಗೌರವ ಹೋಯ್ತು, ಎಲ್ಲವನ್ನು ಕಳೆದುಕೊಂಡ ನಟಿ: ಇದಕ್ಕೆ ಕಾರಣ ಅದೊಂದು ಮೆಸೇಜ್. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಆನ್ಲೈನ್ ನಲ್ಲಿ ಜನರಿಗೆ ಮೋಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಸಾಮಾನ್ಯ ಜನರಿಗೂ ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಆನ್ಲೈನ್ ಫಿಶಿಂಗ್ ಗೆ ತುತ್ತಾಗಬೇಕಾದ ಪರಿಸ್ಥಿತಿ ಈಗ ಎದುರಾಗಿದೆ. ಇತ್ತೀಚಿಗಷ್ಟೇ ತಮಿಳು ಚಿತ್ರರಂಗದ ನಟಿ ಆಗಿರುವ ಲಕ್ಷ್ಮಿ ಅವರು ತಾವು ಮೋಸ ಹೋಗಿರುವ ಕುರಿತಂತೆ ವಿಡಿಯೋ ಮಾಡಿ ಪೋಸ್ಟ್ ಮಾಡುವ ಮೂಲಕ ತಮಗಾಗಿರುವ ಮೋಸವನ್ನು ಜನರಿಗೆ ತಿಳಿಸಿದ್ದಾರೆ. ಅನಾಮಧೇಯರು ಕಳಿಸಿದ್ದ ಲಿಂಕನ್ನು ಕ್ಲಿಕ್ ಮಾಡಿದ ನಂತರ ಮೊಬೈಲ್ ಹ್ಯಾಕ್ ಆಯಿತು.

ಅದಾದ ನಂತರ ಅವರ ಫೋಟೋವನ್ನು ಮಾರ್ಫ್ ಮಾಡಿ ಪೋಷಕರಿಗೆ ಕಳಿಸುವ ಬೆದರಿಕೆ ಕೂಡ ನೀಡಲಾಯಿತಂತೆ. ಇದರ ಹಿನ್ನೆಲೆಯನ್ನು ತಿಳಿಸುತ್ತಾ ಲಕ್ಷ್ಮಿ ಅವರು 5 ಲಕ್ಷ ಬಹುಮಾನ ಗೆದ್ದಿರುವುದಾಗಿ ಮೆಸೇಜ್ ಬಂದಿತ್ತಂತೆ ಅದನ್ನು ಕ್ಲಿಕ್ ಮಾಡಿದಾಗ ಯಾವುದೋ ಒಂದು ಆನ್ಲೈನ್ ಲೋನ್ ಆಪ್ ಡೌನ್ಲೋಡ್ ಆಯ್ತು ಎಂಬುದಾಗಿ ಹೇಳುತ್ತಾರೆ. ಅದಾದ ನಂತರವೇ ಮೊಬೈಲ್ ಹ್ಯಾಕ್ ಆಯ್ತು ಎಂಬುದಾಗಿ ಲಕ್ಷ್ಮಿ ತಿಳಿಸುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಆ ಲೋನ್ ಅಪ್ಲಿಕೇಶನ್ ನಿಂದ ನೀವು ಲೋನ್ ತೆಗೆದುಕೊಂಡಿದ್ದೀರಿ ಅದನ್ನು ಮರುಪಾವತಿಸಿ ಎಂಬುದಾಗಿ ಮೆಸೇಜ್ ಲಕ್ಷ್ಮಿ ಅವರಿಗೆ ಬರುತ್ತದೆ.

lakshmi vasudevan 1 | ಹಣ ಹೋಯ್ತು, ಗೌರವ ಹೋಯ್ತು, ಎಲ್ಲವನ್ನು ಕಳೆದುಕೊಂಡ ನಟಿ: ಇದಕ್ಕೆ ಕಾರಣ ಅದೊಂದು ಮೆಸೇಜ್. ಏನಾಗಿದೆ ಗೊತ್ತೇ??
ಹಣ ಹೋಯ್ತು, ಗೌರವ ಹೋಯ್ತು, ಎಲ್ಲವನ್ನು ಕಳೆದುಕೊಂಡ ನಟಿ: ಇದಕ್ಕೆ ಕಾರಣ ಅದೊಂದು ಮೆಸೇಜ್. ಏನಾಗಿದೆ ಗೊತ್ತೇ?? 2

ಅದಾದ ಕೆಲವೇ ದಿನಗಳಲ್ಲಿ ಅವರ ಎಡಿಟ್ ಮಾಡಿರುವ ಫೋಟೋಗಳನ್ನು ವೈರಲ್ ಮಾಡಲಾಗುತ್ತದೆ ಎಂಬುದಾಗಿ ಬೆದರಿಕೆ ಕೂಡ ನೀಡುತ್ತಾರೆ. ಇಷ್ಟಕ್ಕೆ ನಿಲ್ಲದೆ ಅವರ ಫೋಟೋವನ್ನು ಅವರ ವಾಟ್ಸಪ್ ಕಾಂಟಾಕ್ಟ್ ನಲ್ಲಿರುವ ವ್ಯಕ್ತಿಗಳಿಗೆ ಕೂಡ ಕಳಿಸಲಾಗುತ್ತದೆ.
ಈಗಾಗಲೇ ನಟಿ ಸಿಕಂದರಾಬಾದ್ ಸೈಬರ್ ಪೊಲೀಸ್ ಗೆ ಈ ಕುರಿತಂತೆ ದೂರನ್ನು ನೀಡಿದ್ದಾರೆ. ಲಕ್ಷ್ಮಿ ಪೋಸ್ಟ್ ಮಾಡಿರುವ ವಿಡಿಯೋವನ್ನು ನೋಡಿರುವ ಅಭಿಮಾನಿಗಳು ಧೈರ್ಯ ಗೆಡಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂಬುದಾಗಿ ಸಮಾಧಾನ ಮಾಡಿದ್ದಾರೆ. ಸ್ನೇಹಿತರೆ ನೀವು ಕೂಡ ಯಾವುದೇ ಅನಾಮದೈಯ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಇಂತಹ ವಿಚಾರಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

Comments are closed.