ಜಮೀನು ಮಾರಿ ಕಟ್ಟಿಸಿದ ಆಸ್ಪತ್ರೆ ಪೂರ್ಣ: ಲೀಲಾವತಿ ಅಮ್ಮನವರು ಇದಕ್ಕಾಗಿ ಖರ್ಚು ಮಾಡಿದ್ದು ಅದೆಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲಾಕ್ಡೌನ್ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿದ್ದ ಲೀಲಾವತಿ ಅಮ್ಮನವರು ತಮ್ಮ ಪುತ್ರ ವಿನೋದ್ ರಾಜ್ ಅವರ ಜೊತೆಗೆ ಸೇರಿ ಬಡ ಜನರಿಗೆ ಆಹಾರ ಹಾಗೂ ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯವನ್ನು ಮಾಡಿದ್ದರು ಎಂಬುದು ನಮಗೆ ನೆನಪಿದೆ. ಇನ್ನು ಅವರು ಕೃಷಿ ಮಾಡಿಕೊಂಡಿದ್ದ ನೆಲಮಂಗಲದ ಸಮೀಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ ಎನ್ನುವ ಕೊರಗು ಅವರಲ್ಲಿತ್ತು.

ಅದಕ್ಕಾಗಿ ಲೀಲಾವತಿ ಅಮ್ಮ ತಮ್ಮ ಚೆನ್ನೈನಲ್ಲಿರುವ ಜಮೀನನ್ನು ಮಾರಿ ಅದರಲ್ಲಿ ಬಂದ ಹಣದಿಂದ ನೆಲಮಂಗಲದ ಸಮೀಪದಲ್ಲಿರುವ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯನ್ನು ಈಗಾಗಲೇ ಕಟ್ಟಿಸಿದ್ದಾರೆ. ಚಿತ್ರರಂಗದಿಂದ ಸಂಪೂರ್ಣ ದೂರವಾಗಿ ಕೇವಲ ಕೃಷಿಯನ್ನು ಮಾತ್ರ ನಂಬಿಕೊಂಡು ಬರುವ ಅಲ್ಪ ಹಣದಲ್ಲೇ ಸಮಾಜದ ಜೊತೆಗೆ ಹಂಚಿ ತಿನ್ನಬೇಕು ಎನ್ನುವ ಅವರ ಮನೋಭಾವ ನಿಜಕ್ಕೂ ಕೂಡ ಎಲ್ಲರಿಗೂ ಸ್ಪೂರ್ತಿಯಾದದ್ದು. ಇನ್ನು ಸೆಪ್ಟೆಂಬರ್ 28 ರಂದು ನಾಡ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರು ಲೀಲಾವತಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದ್ದಾರೆ.

leelavathi hospital | ಜಮೀನು ಮಾರಿ ಕಟ್ಟಿಸಿದ ಆಸ್ಪತ್ರೆ ಪೂರ್ಣ: ಲೀಲಾವತಿ ಅಮ್ಮನವರು ಇದಕ್ಕಾಗಿ ಖರ್ಚು ಮಾಡಿದ್ದು ಅದೆಷ್ಟು ಕೋಟಿ ಗೊತ್ತೇ??
ಜಮೀನು ಮಾರಿ ಕಟ್ಟಿಸಿದ ಆಸ್ಪತ್ರೆ ಪೂರ್ಣ: ಲೀಲಾವತಿ ಅಮ್ಮನವರು ಇದಕ್ಕಾಗಿ ಖರ್ಚು ಮಾಡಿದ್ದು ಅದೆಷ್ಟು ಕೋಟಿ ಗೊತ್ತೇ?? 2

ಈ ಸಂದರ್ಭದಲ್ಲಿ ಲೀಲಾವತಿ ಅಮ್ಮನವರ ಈ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿನೋದ್ ರಾಜ್ ಅವರು 1 ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂಬುದಾಗಿ ಹೇಳುವ ಮೂಲಕ ಆಸ್ಪತ್ರೆಗೆ ಖರ್ಚಾದ ಒಟ್ಟು ಹಣವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ಹಂಚಿಕೊಳ್ಳಿ.

Comments are closed.