ಸೈಲೆಂಟ್ ಆಗಿಯೇ ರೂಪೇಶ್ ರಾಜಣ್ಣ ರವರಿಗೆ ಕನ್ನಡದ ಕುರಿತು ಮಂಗಳಾರತಿ ಮಾಡಿದ ಮಯೂರಿ. ನಟಿ ಹೇಳಿದ್ದು ನೋಡಿ, ಶಾಕ್ ಆಗಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಈಗಾಗಲೇ ಪ್ರಾರಂಭವಾಗಿದ್ದು ಮನೆಯೊಳಗೆ ಹೋಗಿರುವ ಸ್ಪರ್ಧಿಗಳಲ್ಲಿ ಕನ್ನಡ ಪರ ಹೋರಾಟಗಾರ ಆಗಿರುವ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ ಸಂಬರ್ಗಿ ಅವರ ನಡುವೆ ಪ್ರತಿಯೊಂದು ವಿಚಾರಕ್ಕೆ ಕೂಡ ಕಿತ್ತಾಟ ನಡೆಯುತ್ತಿದೆ. ಚಿಕ್ಕ ಚಿಕ್ಕ ವಿಚಾರಕ್ಕೂ ಕೂಡ ಇವರಿಬ್ಬರ ನಡುವೆ ವಾಗ್ವಾದ ಪ್ರಾರಂಭವಾಗುತ್ತಿದೆ.

ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಲ್ಲಿ ನೀರನ್ನು ಉಳಿಸುವ ವಿಚಾರವಾಗಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಅವರ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿತ್ತು. ಇವರಿಬ್ಬರ ಹಗ್ಗಜಗಾಟದ ನಡುವೆ ಬಿಗ್ ಬಾಸ್ ಮನೆಯವರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ರೂಪೇಶ್ ರಾಜಣ್ಣ ಕನ್ನಡ ಕುರಿತಂತೆ ಪಾಠ ಮಾಡಲು ಬಂದಾಗ ನಟಿ ಮಯೂರಿ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ನಿಮಗೆ ಮಾತ್ರ ಕನ್ನಡದ ಮೇಲೆ ಕಾಳಜಿ ಇರೋದಾ ನಮಗೆ ಇಲ್ವಾ ಎಂಬುದಾಗಿ ಮಯೂರಿ ಕೋಪದಿಂದಲೇ ಹೇಳಿದ್ದಾರೆ.

mayuri warning to roopesh | ಸೈಲೆಂಟ್ ಆಗಿಯೇ ರೂಪೇಶ್ ರಾಜಣ್ಣ ರವರಿಗೆ ಕನ್ನಡದ ಕುರಿತು ಮಂಗಳಾರತಿ ಮಾಡಿದ ಮಯೂರಿ. ನಟಿ ಹೇಳಿದ್ದು ನೋಡಿ, ಶಾಕ್ ಆಗಿದ್ದು ಯಾಕೆ ಗೊತ್ತೇ??
ಸೈಲೆಂಟ್ ಆಗಿಯೇ ರೂಪೇಶ್ ರಾಜಣ್ಣ ರವರಿಗೆ ಕನ್ನಡದ ಕುರಿತು ಮಂಗಳಾರತಿ ಮಾಡಿದ ಮಯೂರಿ. ನಟಿ ಹೇಳಿದ್ದು ನೋಡಿ, ಶಾಕ್ ಆಗಿದ್ದು ಯಾಕೆ ಗೊತ್ತೇ?? 2

ಇಂಗ್ಲಿಷ್ ಹಾಡು ಕೇಳುತ್ತಿದ್ದ ಸಂದರ್ಭದಲ್ಲಿ ಬಿಗ್ ಬಾಸ್ ನಮಗೆ ಎಚ್ಚರಿಸಿದ ಮೇಲೆ ನೀವು ಯಾಕೆ ಬಂದು ನಮಗೆ ಎಚ್ಚರಿಸಬೇಕು ನಮಗೇನು ಗೊತ್ತಾಗಲ್ವಾ ಎಂಬುದಾಗಿ ಹೇಳಿದ್ದಾರೆ. ನಿಮಗೆ ಮಾತ್ರ ಕನ್ನಡದ ಮೇಲೆ ಕಾಳಜಿ ಇರುವುದು ನನಗೂ ಉತ್ತರ ಕರ್ನಾಟಕ ಕನ್ನಡ, ಹವ್ಯಕ ಕನ್ನಡ ಮಾತನಾಡೋಕೆ ಬರುತ್ತೆ. ನಾವು ಕನ್ನಡದ ಮೇಲಿನ ಪ್ರೀತಿಯನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ ಅಷ್ಟೇ ಎಂಬುದಾಗಿ ರೂಪೇಶ್ ರಾಜಣ್ಣ ಅವರಿಗೆ ನಟಿ ಮಯೂರಿ ಅವರು ಮಂಗಳಾರತಿಯನ್ನು ಮಾಡಿದ್ದಾರೆ. ಈ ಬಗ್ಗೆ ಇವರಿಬ್ಬರಲ್ಲಿ ಯಾರು ಸರಿ ಅಥವಾ ಯಾರು ತಪ್ಪು ಎಂಬ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.