ಅಭಿಮಾನಿಗಳಿಗಾಗಿ ಔತಣ ಕೂಟ ಹಾಕಿಸಿದ ಪ್ರಭಾಸ್, ಅದೆಷ್ಟು ಸಾವಿರ ಮಟನ್ ಚಿಕ್ಕನ್ ಇತ್ತು ಗೊತ್ತೇ?? ಇನ್ನು ಏನೆಲ್ಲಾ ಇದ್ವು ಗೊತ್ತೇ??

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಆಗಿರುವ ಪ್ರಭಾಸ್ ರವರಿಗೆ ಎಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇತ್ತೀಚಿಗಷ್ಟೇ ರೆಬೆಲ್ ಸ್ಟಾರ್ ಪ್ರಭಾಸ್ ರವರ ದೊಡ್ಡಪ್ಪ ಆಗಿರುವ ಕೃಷ್ಣಂರಾಜು ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇದು ಕೇವಲ ಪ್ರಭಾಸ್ ಹಾಗೂ ಕುಟುಂಬದವರಿಗೆ ಮಾತ್ರವಲ್ಲದೆ ಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳಿಗೂ ಕೂಡ ಬೇಸರವನ್ನು ತರಿಸಿತ್ತು.

ಇನ್ನು ಇದೇ ಮೊದಲ ಬಾರಿಗೆ ಅಂದರೆ 11 ವರ್ಷಗಳ ತರುವಾಯ ತಮ್ಮ ದೊಡ್ಡಪ್ಪ ನವರ ಪುಣ್ಯ ಸ್ಮರಣೆಯ ಕಾರ್ಯದ ನಿಮಿತ್ತವಾಗಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ತಮ್ಮ ತವರು ಊರಾಗಿರುವ ಮೊಗಲ್ತೂರಿಗೆ ಆಗಮಿಸಿದ್ದರು. 11 ವರ್ಷಗಳ ನಂತರ ಊರಿಗೆ ಆಗಮಿಸಿರುವ ತಮ್ಮ ನೆಚ್ಚಿನ ನಟ ಪ್ರಭಾಸ್ ಅವರನ್ನು ನೋಡಲು ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಭಿಮಾನಿಗಳು ಲಕ್ಷದ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ಕೂಡ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಅಭಿಮಾನಿಗಳಿಗೆ ಭರ್ಜರಿ ಔತಣಕೂಟವನ್ನು ಕೂಡ ಈ ಸಂದರ್ಭದಲ್ಲಿ ಏರ್ಪಡಿಸಿದ್ದಾರೆ. ಇನ್ನು ಊಟಕ್ಕೆ ಬಳಸಿದ್ದ ಮಾಂಸದ ಬಗ್ಗೆ ಕೇಳಿ ತಿಳಿದುಕೊಂಡರೆ ಖಂಡಿತವಾಗಿ ನೀವು ಕೂಡ ನಿಬ್ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

prabhas arranged food to fans | ಅಭಿಮಾನಿಗಳಿಗಾಗಿ ಔತಣ ಕೂಟ ಹಾಕಿಸಿದ ಪ್ರಭಾಸ್, ಅದೆಷ್ಟು ಸಾವಿರ ಮಟನ್ ಚಿಕ್ಕನ್ ಇತ್ತು ಗೊತ್ತೇ?? ಇನ್ನು ಏನೆಲ್ಲಾ ಇದ್ವು ಗೊತ್ತೇ??
ಅಭಿಮಾನಿಗಳಿಗಾಗಿ ಔತಣ ಕೂಟ ಹಾಕಿಸಿದ ಪ್ರಭಾಸ್, ಅದೆಷ್ಟು ಸಾವಿರ ಮಟನ್ ಚಿಕ್ಕನ್ ಇತ್ತು ಗೊತ್ತೇ?? ಇನ್ನು ಏನೆಲ್ಲಾ ಇದ್ವು ಗೊತ್ತೇ?? 2

20ಕ್ಕೂ ಅಧಿಕ ಬಗೆಯ ಐಟಂ ಗಳನ್ನು ಊಟಕ್ಕಾಗಿ ಸಿದ್ಧಪಡಿಸಲಾಗಿತ್ತು. ಇನ್ನು ಅಡುಗೆಗಾಗಿ ಬರೋಬ್ಬರಿ 9 ಟನ್ ಮಟನ್, 6 ಟನ್ ಚಿಕನ್ ಹಾಗೂ 6 ಟನ್ ಸಿಗಡಿ ಮತ್ತು 4 ಟನ್ ಮೀನುಗಳನ್ನು ಬಳಸಲಾಗಿತ್ತು. ಒಟ್ಟಾರೆಯಾಗಿ ಕಾರ್ಯಕ್ರಮ ಪುಣ್ಯ ಸ್ಮರಣೆ ಆಗಿದ್ದರು ಕೂಡ ದೊಡ್ಡಪ್ಪನ ಆತ್ಮಕ್ಕೆ ಶಾಂತಿ ಸಿಗುವಂತಹ ಔತಣಕೂಟವನ್ನು ಭರ್ಜರಿಯಾಗಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ಏರ್ಪಡಿಸಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ದೊಡ್ಡಪ್ಪನ ಹೆಸರಿನಲ್ಲಿ ಚಾರಿಟಿ ಟ್ರಸ್ಟ್ ಗೆ 3 ಕೋಟಿ ರೂಪಾಯಿ ದೇಣಿಗೆಯನ್ನು ಕೂಡ ಈಗಾಗಲೇ ರೆಬೆಲ್ ಸ್ಟಾರ್ ಪ್ರಭಾಸ್ ರವರು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Comments are closed.