ಶುರುವಾಯಿತು ಬಿಗ್ ಬಾಸ್ ನಲ್ಲಿ ಕುಚ್ ಕುಚ್: ನೇರವಾಗಿ ಲವ್ ಪ್ರೊಪೋಸ್ ಮಾಡಿದ ಸೈಕ್ ನವಾಜ್. ಯಾವ ಹುಡುಗಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಮನೋರಂಜನೇಯ ಮಹಾಕಣಜ ಆಗಿರುವ ಕಿರುತರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡುತ್ತಿದೆ. ಒಂದು ಕಡೆ ಜಗಳಗಳು ನಡೆಯುತ್ತಿದ್ದರೆ ಇನ್ನೊಂದು ಕಡೆ ಪ್ರೀತಿಯ ಸಿಂಚನ ಹರಿಯುತ್ತಿದೆ.

ಕನ್ನಡ ಸಿನಿಮಾಗಳು ರಿಲೀಸ್ ಆದಾಗೆಲ್ಲ ಚಿತ್ರಮಂದಿರಗಳ ಮುಂದೆ ಹೋಗಿ ತನ್ನ ವಿಶೇಷ ಹಾಗೂ ವಿಭಿನ್ನ ಶೈಲಿಯ ವಿಮರ್ಶೆಗಳನ್ನು ನೀಡುವ ಮೂಲಕ ಜನಪ್ರಿಯನಾಗಿದ್ದ ಸೈಕ್ ನವಾಜ್ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ತನ್ನ ಡೈಲಾಗ್ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಇನ್ನು ಸೈಕ್ ನವಾಜ್ ಈಗ ಬಿಗ್ ಬಾಸ್ ಮನೆಯಲ್ಲಿ ಹುಡುಗಿಗೆ ಪ್ರಪೋಸ್ ಮಾಡುವ ಮೂಲಕ ಸುದ್ದಿ ಆಗ್ತಿದಾನೆ. ಹೌದು ನವಾಜ್ ಪ್ರಪೋಸ್ ಮಾಡಿರೋದು ಐಶ್ವರ್ಯಾಗೆ. ಟಾಸ್ಕ್ ಮಾಡೋ ಜೊತೆಗೆ ನವಾಜ್ ಹುಡುಗಿಯರಿಗೆ ಕಾಳು ಕೂಡ ಹಾಕುತ್ತಿದ್ದಾನೆ. ಅಷ್ಟಕ್ಕೂ ನವಾಜ್ ಪ್ರಪೋಸ್ ಮಾಡಿದ್ದು ಇಲ್ಲಿ ಸುದ್ದಿಯಾಗುತ್ತಿಲ್ಲ, ಬದಲಾಗಿ ಆತ ಪ್ರಪೋಸ್ ಮಾಡೋದಕ್ಕೆ ಬಳಸಿಕೊಂಡಿರುವ ಪದಗಳು ಈಗ ವೈರಲ್ ಆಗುತ್ತಿವೆ.

nawaz proposed aishwarya pissay | ಶುರುವಾಯಿತು ಬಿಗ್ ಬಾಸ್ ನಲ್ಲಿ ಕುಚ್ ಕುಚ್: ನೇರವಾಗಿ ಲವ್ ಪ್ರೊಪೋಸ್ ಮಾಡಿದ ಸೈಕ್ ನವಾಜ್. ಯಾವ ಹುಡುಗಿಗೆ ಗೊತ್ತೇ??
ಶುರುವಾಯಿತು ಬಿಗ್ ಬಾಸ್ ನಲ್ಲಿ ಕುಚ್ ಕುಚ್: ನೇರವಾಗಿ ಲವ್ ಪ್ರೊಪೋಸ್ ಮಾಡಿದ ಸೈಕ್ ನವಾಜ್. ಯಾವ ಹುಡುಗಿಗೆ ಗೊತ್ತೇ?? 2

ಐಶ್ವರ್ಯಗೆ ನವಾಜ್ ಪ್ರಪೋಸ್ ಮಾಡುತ್ತಾ, ಚಿಕ್ಕ ಚಿಕ್ಕದಾಗಿ ಸೇರ್ಕೊಂಡು ದೊಡ್ಡ ದೊಡ್ಡ ಪ್ರೀತಿ ಮಾಡೋಣ. ಚಿಕ್ಕದಾಗಿ ಖುಷಿಪಟ್ಕೊಂಡು ಚಿಕ್ಕ ಮಕ್ಕಳಿಗೆ ಜನ್ಮ ನೀಡೋಣ. ಆ ಚಿಕ್ಕ ಮಕ್ಕಳನ್ನು ದೊಡ್ಡದಾಗಿ ಸಾಕೋಣ. ಇದೇ ಖುಷಿಯಲ್ಲಿ ಸಾಯ್ಬೇಕಾದರೆ ಮಕ್ಕಳು ನಮಗೆ ದೊಡ್ಡ ದೊಡ್ಡ ಸಮಾಧಿ ಕಟ್ಟುತ್ತಾರೆ ಎಂಬುದಾಗಿ ಹಾಸ್ಯಾಸ್ಪದವಾಗಿ ವಿಭಿನ್ನ ಶೈಲಿಯಲ್ಲಿ ನವಾಜ್ ಪ್ರಪೋಸ್ ಮಾಡುತ್ತಾರೆ. ಆದರೆ ಐಶ್ವರ್ಯ ಮಾತ್ರ ನಿನಗೆ ಈತರ ಪ್ರಪೋಸ್ ಮಾಡಿದ್ರೆ ಒಳ್ಳೆ ಹುಡುಗಿನೆ ಸಿಕ್ತಾಳೆ ಎನ್ನುವುದಾಗಿ ಹೇಳಿ ನಯವಾಗಿ ತಿರಸ್ಕರಿಸುತ್ತಾರೆ.

Comments are closed.