Gruhalakshmi Scheme: ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ?

arnataka gruha lakshmi scheme update all you want know about dbt money transfer

Gruhalakshmi Scheme: ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಕಾರಣವಾಗಿರುವಂತಹ 5 ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯನ್ನು(Gruha Lakshmi Scheme) ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಆಗಸ್ಟ್ ತಿಂಗಳ ಕೊನೆಯ ದಿನದಂದು ಅಧಿಕೃತವಾಗಿ ಪ್ರಾರಂಭಿಸಲಾಗಿದ್ದು ರಾಜ್ಯದ ಬಹುತೇಕ ಎಲ್ಲಾ ಮನೆಯ ಯಜಮಾನಿಯರಿಗೆ ಈ ಯೋಜನೆಯನ್ನು ತಲುಪಿಸುವಂತಹ ಉದ್ದೇಶ ಹಾಗೂ ಗುರಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಇಟ್ಟುಕೊಂಡಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಆದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಇನ್ನು ಕೂಡ ಸರಿಯಾಗಿ ಹಣ ಸಿಕ್ಕಿಲ್ಲ ಎನ್ನುವುದಾಗಿ ರಾಜ್ಯದ ಹಲವಾರು ಮಹಿಳೆಯರು ದೂರನ್ನು ಸಲ್ಲಿಸುತ್ತಿದ್ದಾರೆ. ಮಹಿಳಾ ಕಲ್ಯಾಣ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರು ಇದಕ್ಕೆ ಪ್ರತಿಕ್ರಿಯಿಸುತ್ತಾ ಆದಷ್ಟು ಶೀಘ್ರದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎನ್ನುವಂತಹ ಭರವಸೆಯನ್ನು ನೀಡಿದ್ದಾರೆ.

Latest update about Gruhalakshmi Scheme – Here is the points you should know before getting money.

ಹೀಗಿದ್ದರೂ ಕೂಡ ಇದುವರೆಗೂ ಯಾಕೆ ಹಣ ಬಂದಿಲ್ಲ ಎಷ್ಟು ಜನರಿಗೆ ಹಣ ಸಿಕ್ಕಿದೆ ಹಾಗೂ ಸಿಕ್ಕಿಲ್ಲ ಎನ್ನುವುದರ ಬಗ್ಗೆ ತಿಳಿದುಕೊಳ್ಳುವ ಅಂತಹ ಕುತೂಹಲ ಖಂಡಿತವಾಗಿ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವರ ಖಾತೆಗೆ ಹಣ ಬಂದಿದೆ ಎಂಬುದಾಗಿ ಮೆಸೇಜ್ ಬಂದಿದ್ರು ಕೂಡ ಖಾತೆಯಲ್ಲಿ ಮಾತ್ರ ಹಣ ಕಾಣುತ್ತಿಲ್ಲ ಅನ್ನೋದಾಗಿ ಕೂಡ ಪ್ರಶ್ನೆ ಮಾಡೋದಕ್ಕೆ ಪ್ರಾರಂಭಿಸಿದ್ದಾರೆ. ಇದು ಗ್ರಹಲಕ್ಷ್ಮಿ ಯೋಜನೆಯ ಬಗ್ಗೆ ರಾಜ್ಯದ ಮಹಿಳೆಯರು ಅಸಮಾಧಾನವನ್ನು ವ್ಯಕ್ತಪಡಿಸಲು ಕಾರಣವಾಗಿದೆ.

ಆದರೆ ರಾಜ್ಯ ಸರ್ಕಾರದ ಮೂಲಗಳು ತಿಳಿಸುವ ಪ್ರಕಾರ ಈಗಾಗಲೇ ಎರಡು ತಿಂಗಳಿಗೆ ಸಾಧ್ಯ ಆಗುವಷ್ಟು ಗೃಹಲಕ್ಷ್ಮಿ ಯೋಜನೆಯ ಹಣವನ್ನು(Gruha Lakshmi Scheme’s Fund) DBT ಮೂಲಕ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೂಡ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಹಾಗಿದ್ರೂ ಖಾತೆಗೆ ಯಾಕೆ ಹಣ ಸೇರ್ಪಡೆ ಆಗುತ್ತಿಲ್ಲ ಅನ್ನೋದನ್ನ ತಿಳ್ಕೊಳ್ಳೋಣ ಬನ್ನಿ. ನೇರವಾಗಿ ಹಣವನ್ನು ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡಲು ಮುಂದಾಗುತ್ತಿದ್ದು ಇದು ಮೊದಲ ಬಾರಿ ಇಂತಹ ನಿಯಮವನ್ನು ನಾವು ಪಾಲಿಸುತ್ತಿದ್ದು RBI ಮೂಲಕ ಹಣದ ವರ್ಗಾವಣೆಗೆ ಅನುಮತಿ ಸಿಗಬೇಕಾಗಿರುತ್ತದೆ ಹೀಗಾಗಿ ಮೊದಲ ತಿಂಗಳು ಮಾತ್ರ ಈ ರೀತಿ ತಡವಾಗಲಿದೆ ಎಂಬುದಾಗಿ ಸಂಬಂಧ ಪಟ್ಟಂತಹ ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಡಿಯಲ್ಲಿ 1.20 ಕೋಟಿ ಅರ್ಜಿಯನ್ನು ರಾಜ್ಯದ ಮಹಿಳೆಯರು ಸಲ್ಲಿಸಲಾಗಿದ್ದು ಈಗಾಗಲೇ DBT ಮೂಲಕ 63 ಲಕ್ಷ ಮಹಿಳೆಯರಿಗೆ ಹಣವನ್ನು ಈಗಾಗಲೇ ವರ್ಗಾವಣೆ ಮಾಡಿದ್ದು ಉಳಿದವರಿಗೆ ವರ್ಗಾವಣೆ ಮಾಡುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದಾಗಿ ಇಲಾಖೆ ತಿಳಿಸಿದೆ. ಮೊದಲ ತಿಂಗಳು ಮಾತ್ರ ನೀವು ಈ ರೀತಿಯ ತಡ ಆಗಿರುವಂತಹ ಪ್ರಕ್ರಿಯೆಗಳನ್ನು ನೋಡಬಹುದಾಗಿದ್ದು ಎರಡನೇ ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರ ಖಾತೆಗೂ ಕೂಡ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ತಿಂಗಳ 15ನೇ ತಾರೀಖಿನಿಂದ ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿಯೊಬ್ಬರ ಖಾತೆಗೆ ವರ್ಗಾಯಿಸಲಾಗುವುದು ಎಂಬುದಾಗಿ ಸಂಬಂಧಪಟ್ಟಂತಹ ಇಲಾಖೆಗಳು ಸ್ಪಷ್ಟ ಭರವಸೆಯನ್ನು ನೀಡಿವೆ.

ಈಗಾಗಲೇ ಕೆಲವೊಂದು ಟೆಕ್ನಿಕಲ್ ಕಾರಣಗಳಿಂದಾಗಿ ಕೂಡ ಅರ್ಜಿ ಸ್ವೀಕೃತಿ ಆಗುತ್ತಿಲ್ಲ ಎಂಬ ಮಾಹಿತಿಗಳು ಕೂಡ ತಿಳಿದು ಬಂದಿದೆ. ಪ್ರತಿಯೊಂದು ಕಡೆಗಳಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಅರ್ಜಿ ಸಲ್ಲಿಸಿ ಎನ್ನುವುದಾಗಿ ಜಾಗೃತಿಯನ್ನು ಕೂಡ ಮೂಡಿಸಲಾಗುತ್ತದೆ. ಒಂದು ವೇಳೆ ಅರ್ಜಿ ಸಲ್ಲಿಕೆ ಆಗಿಲ್ಲ ಎಂದಾದಲ್ಲಿ ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ತಾಲೂಕು ಮಟ್ಟದ ಮಹಿಳಾ ಕಲ್ಯಾಣ ಇಲಾಖೆಯ CDPO ಅಧಿಕಾರಿಗಳವರೆಗೂ ಕೂಡ ನೀವು ಅರ್ಜಿ ಸಲ್ಲಿಕೆಗಾಗಿ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಸರ್ಕಾರ ತಿಳಿಸಿದೆ. ಈಗಾಗಲೇ ಸಲ್ಲಿಕೆ ಆಗಿರುವಂತಹ 1.20 ಕೋಟಿ ಅರ್ಜಿ ಮಾತ್ರವಲ್ಲದೆ ಇನ್ನೂ ಹೆಚ್ಚಳ 80,000 ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅಧಿಕಾರವನ್ನು ಹಾಗೂ ಅರ್ಹತೆಯನ್ನು ಹೊಂದಿದ್ದಾರೆ.

arnataka gruha lakshmi scheme update all you want know about dbt money transfer
arnataka gruha lakshmi scheme update all you want know about dbt money transfer

ಆದರೆ ಪ್ರತಿಯೊಬ್ಬರೂ ಕೂಡ ಈ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್(Bank Account Linked With Aadhar Card) ಆಗಿದೆಯಾ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ಆಗಿಲ್ಲದೆ ಹೋದಲ್ಲಿ ಲಿಂಕ್ ಮಾಡಿಸಿಕೊಳ್ಳಿ ಎಂಬುದಾಗಿ ಹೇಳಲಾಗಿದೆ. ಇನ್ನು ಇದೇ ಕಾರಣಕ್ಕಾಗಿ ರೇಷನ್ ಕಾರ್ಡ್ ನಲ್ಲಿ ಕೂಡ ಮನೆಯ ಯಜಮಾನರನ್ನು ಮಹಿಳಾ ಯಜಮಾನಿಯರನ್ನಾಗಿ ಬದಲಾವಣೆ ಮಾಡಲಾಗಿದೆ.

ಈ ಯೋಜನೆ (Gruhalakshmi Scheme) ಕುರಿತಂತೆ ಮಾತನಾಡಿರುವ ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಹಣ ಬಿಡುಗಡೆ ಆಗದೆ ಇರುವ ಖಾತೆಗಳನ್ನು ಗುರುತಿಸಿ ಅವುಗಳ ಸಮಸ್ಯೆಯನ್ನು ಪರಿಹರಿಸಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅಂತಹ ಖಾತೆಗಳಿಗೂ ಕೂಡ ಹಣವನ್ನು ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸಗಳು ಪ್ರಕ್ರಿಯೆಯಲ್ಲಿವೆ ಎಂಬುದಾಗಿ ಹೇಳಿದ್ದಾರೆ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. Insurance Policy
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10
ಕರ್ನಾಟಕದ ಜನತೆಗೆ ಬಿಗ್ ಶಾಕ್- ದಿಡೀರ್ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರು ಡಿಲೀಟ್. ಕಾರಣ ಏನಂತೆ ಗೊತ್ತೇ? Ration card latest Updates

Comments are closed.