ನಟಿ ಲೀಲಾವತಿ ಅಮ್ಮನವರ ಆರೋಗ್ಯ ಸರಿ ಇಲ್ಲ ಎಂದ ತಕ್ಷಣ ಸ್ಯಾಂಡಲ್ ವುಡ್ ತಾರೆಯರು ಮನೆಗೆ ಹೋಗಿ ಏನು ಮಾಡಿದ್ದಾರೆ ವಿಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಒಂದು ಖುಷಿಯ ವಿಚಾರ ಅಂದ್ರೆ ಒಬ್ಬ ನಟ ಅಥವಾ ನಟಿ ಆರೋಗ್ಯ ಕಳೆದುಕೊಂಡಾಗ ಅಥವಾ ಆರ್ಥಿಕವಾಗಿ ಕುಸಿದಾಗ ಚಿತ್ರರಂಗದ ಉಳಿದವರು ಸ್ಪಂದಿಸುವ ರೀತಿ. ಈ ಮಾತು ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ. ಇದಕ್ಕೆ ಒಂದು ಉದಾಹರಣೆ ನಟಿ ಲೀಲವತಿಯವರ ಆರೋಗ್ಯ ವಿಚಾರಿಸಲು ಚಿತ್ರರಂಗದ ಹಲವರು ಅವರ ನಿವಾಸಕ್ಕೆ ದೌಡಾಯಿಸಿದ್ದು.

ಹೌದು ಸ್ನೇಹಿತರೇ ಚಂದನವನದಲ್ಲಿ ಸಾಕಷ್ಟು ವರ್ಷ ಅಭಿನಯ ಮಾಡಿ ಜನರನ್ನು ರಂಜಿಸಿದ್ದ ನಟಿ ಲೀಲಾವತಿ ತಮ್ಮ ಮಗ ವಿನೋದ್ ರಾಜ್ ಜೊತೆ ವಾಸವಾಗಿದ್ದಾರೆ. ಇತ್ತೀಚೆಗೆ ಅವರು ಬಿದ್ದು ಪೆಟ್ಟುಮಾಡಿಕೊಂಡಿದ್ದರು. ಇದೀಗ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಬಂದಿರುವ ಲೀಲಾವತಿಯವರನ್ನು ವಿಚಾರಿಸಿಕೊಳ್ಳಲು ಕನ್ನಡ ನಟನಟಿಯರು ಭೇಟಿ ನೀಡುತ್ತಿದ್ದಾರೆ. ನಟಿ ಸುಧಾರಾಣಿ, ನಟಿ ಶ್ರುತಿ ಹಾಗೂ ನಟಿ ಮಾಳವಿಕಾ ಕೂಡ ಲೀಲವತಿಯವರ ಮನೆಗೆ ಭೇಟಿ ನೀಡಿದ್ದರು.

ಲೀಲವತಿಯವರ ಭೇಟಿಯ ಬಗ್ಗೆ ನಟಿ ಸುಧಾರಣಿಯವರು ತಮ್ಮ ಇನ್ಸ್ಟಾ ಗ್ರಾಮ್ ಪುಟದಲ್ಲಿ ಹೀಗೆ ಬರೆದು ಕೊಂಡಿದ್ದಾರೆ. “ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ.

ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ. ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು,

ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ.. ಎಂದು ಹೇಳಿದ್ದಾರೆ ನಟಿ ಸುಧಾರಾಣಿ. ಇನ್ನು ಲೀಲಾವತಿ ಅಮ್ಮನ ಜೊತೆಗಿನ 2 ಫೋಟೊಗಳನ್ನು ಹಾಕಿ ‘ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ

ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ. ಇಂದು ನಾನು, ಶ್ರುತಿ ಮತ್ತು ಮಾಳವಿಕಾ ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿ ಸುಂದರ ಕ್ಷಣಗಳನ್ನು ಕಳೆದೆವು. ಒಳ್ಳೆಯ ಆತಿಥ್ಯ ನೀಡಿದ್ದಕ್ಕೆ ವಿನೋದ್ ರಾಜ್ ಅವರಿಗೆ ಧನ್ಯವಾದಗಳು..” ಎಂದು ಬರೆದುಕೊಂಡಿದ್ದಾರೆ. ನಟಿ ಸುಧಾರಾಣಿ, ಶ್ರುತಿ ಹಾಗೂ ಮಾಳವಿಕಾ ಲೀಲಾವತಿ ಯವರೊಂದಿಗೆ ಹೆಚ್ಚು ಸಮಯ ಕಳೆದು ಲೀಲವತಿಯವರು ತುಸು ಗೆಲುವಾಗುವಂತೆ ಮಾಡಿದ್ದಾರೆ.

Comments are closed.