ನಿಮ್ಮ ಬಳಿ ಎಲ್ ಐ ಸಿ ಪಾಲಿಸಿ ಇದೆಯಾ?? ಹಾಗಿದ್ದರೆ ಪ್ರತಿ ಗ್ರಾಹಕರು ತಿಳಿಯಲೇಬೇಕಾದ ಸುದ್ದಿ ನೀಡಿದ ಎಲ್ ಐ ಸಿ ಸಂಸ್ಥೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೇಶದ ದೊಡ್ಡ ಭಾರತೀಯ ವಿಮಾ ಕಂಪನಿ ಗ್ರಾಹಕಸ್ನೇಹಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿರುತ್ತದೆ. ಈ ಬಾರಿ ಎಲ್ ಐ ಸಿ ಹೂಡಿಕೆದಾರರಿಗೆ ವಿಶೇಷ ಅವಕಾಶವೊಂದನ್ನು ಮಾಡಿಕೊಡಲಿದೆ. ಅದೇನೆಂದರೆ ಎಲ್ ಐ ಸಿ ಲಾಪ್ಸ್ ಆಗಿದೆ. ಅದನ್ನು ಮರು ಸಕ್ರಿಯ ಗೊಳಿಸಲು ಆಗುತ್ತದೆಯೋ ಇಲ್ಲವೋ ಇದುವರೆಗೆ ಕಟ್ಟಿದ ಹಣವೆಲ್ಲಾ ಹೋಯ್ತಾ ., ಎಂಬುದು ನಿಮ್ಮ ಚಿಂತೆಯಾಗಿದ್ದರೆ, ವಿಮಾ ಕಂಪನಿಯು ಇದಕ್ಕೆ ಅವಕಾಶ ಮಾಡಿಕೊಡುತ್ತಿದೆ.

ಹೌದು, ಪ್ರೀಮಿಯಂ ಪೇಮೆಂಟ್ ನ ಸಮಯದಲ್ಲಿ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗಿದ್ರೆ, ಅದನ್ನು ಈಗ ಮತ್ತೆ ಸಕ್ರೀಯಗೊಳಿಸಬಹುದು. ನಿಮ್ಮ ಪಾಲಿಸಿಗಳ ಮೆಚ್ಯೂರಿಟಿ ಅವಧಿ ಇನ್ನೂ ಪೂರ್ಣಗೊಂಡಿರದಿದ್ದಲ್ಲಿ ನೀವು ಪಾಲಿಸಿಯನ್ನು ಮತ್ತೆ ಆರಂಭಿಸಬಹುದಾಗಿದೆ. ಅದಕ್ಕೂ ಕಾಲಾವಕಾಶವನ್ನು ಕೊಟ್ಟಿರುವ ಕಂಪನಿ ಇದೇ ಫೆಬ್ರವರಿ 7ರಿಂದ ಮಾರ್ಚ್ 25ರವರೆಗೆ ಮತ್ತೆ ಪಾಲಿಸಿ ಆರಂಭಿಸುವ ಅವಕಾಶವನ್ನು ಕೊಟ್ಟಿದೆ. ವಿಮೆ ಎನ್ನುವುದು ಜನರ ಜೀವನಕ್ಕೆ ಅತ್ಯಂತ ಮುಖ್ಯವಾದ ಅಂಶವೂ ಆಗಿದೆ.

lic | ನಿಮ್ಮ ಬಳಿ ಎಲ್ ಐ ಸಿ ಪಾಲಿಸಿ ಇದೆಯಾ?? ಹಾಗಿದ್ದರೆ ಪ್ರತಿ ಗ್ರಾಹಕರು ತಿಳಿಯಲೇಬೇಕಾದ ಸುದ್ದಿ ನೀಡಿದ ಎಲ್ ಐ ಸಿ ಸಂಸ್ಥೆ. ಏನು ಗೊತ್ತೇ??
ನಿಮ್ಮ ಬಳಿ ಎಲ್ ಐ ಸಿ ಪಾಲಿಸಿ ಇದೆಯಾ?? ಹಾಗಿದ್ದರೆ ಪ್ರತಿ ಗ್ರಾಹಕರು ತಿಳಿಯಲೇಬೇಕಾದ ಸುದ್ದಿ ನೀಡಿದ ಎಲ್ ಐ ಸಿ ಸಂಸ್ಥೆ. ಏನು ಗೊತ್ತೇ?? 2

ಅದರಲ್ಲೂ ಆರೋಗ್ಯ ವಿಮೆಗಳು ಇಂದು ಹೆಚ್ಚು ಪ್ರಚಲಿತದಲ್ಲಿದ್ದು, ಕೋವಿಡ್ ಸಮಯದಲ್ಲಿ ಆರೋಗ್ಯ ವಿಮೆಯ ಬಗ್ಗೆ ಕಂಪನಿ ಹೆಚ್ಚು ಮಹತ್ವವನ್ನು ಕೊಟ್ಟಿದೆ. ಹಾಗಾಗಿ ಇಂಥ ಯಾವ ಪಾಲಿಸಿಯೂ ಲ್ಯಾಪ್ಸ್ ಆಗಿ ಗ್ರಾಹಕರಿಗೆ ನಷ್ಟವಾಗಬಾರದು ಎನ್ನುವ ಉದ್ದೇಶದಿಂದ ವಿಮಾ ಕಂಪನಿ ಹೀಗೆ ಮಾಡಿದೆ ಎಂದು ವಿಮಾ ಕಂಪನಿ ತಿಳಿಸಿದೆ. ಅಂದಹಾಗೆ ಲ್ಯಾಪ್ಸ್ ಆಗಿರುವ ಪಾಲಿಸಿಯನ್ನು ಮರು ಆರಂಭಿಸಲು ಕಂಪನಿ ಯಾವುದೇ ಶುಲ್ಕವನ್ನು ವಿಧಿಸದೇ ಇರುವುದು ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ. ಇನ್ನು ಪಾಳಿಸಿಯನ್ನು ಪುನರ್ರಾರಂಭಿಸಲು ಯಾವುದೇ ವೈದ್ಯಕಿಯ ದಾಖಲೆಗಳನ್ನು ಕೂಡ ಸಲ್ಲಿಸುವ ಅಗತ್ಯವಿಲ್ಲ. ಈ ವರೆಗೆ ನಿಮ್ಮ ಪಾಲಿಸಿಯ 5 ಪ್ರೀಮಿಯಂ ಪಾವತಿಸಿದ್ದರೆ ಈ ಲಾಭವನ್ನು ಪಡೆದುಕೊಳ್ಳಬಹುದು.

Comments are closed.