ಯಾವ ಜಿಲ್ಲೆಯವರಾದರು ಅರ್ಜಿ ಸಲ್ಲಿಸಬಹುದಾದ ಹಲವು ಹುದ್ದೆಗಳ ಭರ್ತಿಗೆ ಕರೆ ನೀಡಿದ ಮಂಡ್ಯ ಜಿಲ್ಲಾ ಪಂಚಾಯತ್. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಬೇರೆ ಬೇರೆ ವರ್ಗದ ವಿವಿಧ ಹುದ್ದೆಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ನೀವು ಸರ್ಕಾರಿ ನೌಕರಿಯನ್ನು ಅರಸುತ್ತಿದ್ದರೆ ಇದು ನಿಮಗೆ ಉತ್ತಮ ಅವಕಾಶ. ಇಲ್ಲಿನ ಉದ್ಯೋಗದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಈ ಕೆಳಗೆ ಕೊಡಲಾಗಿದೆ.

ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಒಟ್ಟು 13 ವಿವಿಧ ಹುದ್ದೆಗಳು ಖಾಲಿಯಿದ್ದು ಹಾಗೂ ಹಾಗೂ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಪದವಿ ಹಾಗೂ ಸ್ನಾತಕೋತ್ತರ ವನ್ನು ಮುಗಿಸಿದ್ದರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಫೆಬ್ರುವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳು ಹೀಗಿವೆ. ಟೆಕ್ನಿಕಲ್ ಅಸಿಸ್ಟೆಂಟ್ (ಫಾರೆಸ್ಟ್)- 3 ಹುದ್ದೆಗಳು, ಟೆಕ್ನಿಕಲ್ ಅಸಿಸ್ಟೆಂಟ್(ಹಾರ್ಟಿಕಲ್ಚರ್)-1 ಹುದ್ದೆ, ತಾಲೂಕು IEC ಕೋ-ಆರ್ಡಿನೇಟರ್-2 ಹುದ್ದೆಗಳು, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್-7 ಹುದ್ದೆಗಳು ಖಾಲಿ ಇವೆ. ಇನ್ನು ಟೆಕ್ನಿಕಲ್ ಅಸಿಸ್ಟೆಂಟ್(ಫಾರೆಸ್ಟ್ ಹಾಗೂ ಹಾರ್ಟಿಕಲ್ಚರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ತಾಲೂಕು ಐಸಿಸಿ ಕೋ-ಆರ್ಡಿನೇಟರ್-ಅಭ್ಯರ್ಥಿಗಳು ಛಾಯಾಗ್ರಹಣ, ವೀಡಿಯೋಗ್ರಫಿ, ಫೋಟೋ ಎಡಿಟಿಂಗ್ ಮತ್ತು ವಿನ್ಯಾಸ, ವಿಡಿಯೋ ಎಡಿಟಿಂಗ್ ಮತ್ತು ಡಾಕ್ಯುಮೆಂಟೇಶನ್‌ನಲ್ಲಿ ಪರಿಣಿತಿ ಹೊಂದಿರಬೇಕು. ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್‌ನಲ್ಲಿ ಪರಿಣಿತಿ ಪಡೆದಿರಬೇಕು. ಎಂಎಸ್ ಆಫೀಸ್ ಮತ್ತು ಇತರ ಕಂಪ್ಯೂಟರ್ ಆಪರೇಷನ್ಸ್​​ನಲ್ಲಿ ಜ್ಞಾನವನ್ನು ಹೊಂದಿರಬೇಕು. ಇನ್ನು ಟೆಕ್ನಿಕಲ್ ಅಸಿಸ್ಟೆಂಟ್ – ಫಾರೆಸ್ಟ್ ಹಾಗೂ ಹಾರ್ಟಿಕಲ್ಚರ್ ಹುದ್ದೆಗೆ 21ರಿಂದ 40 ವರ್ಷ ವಯಸ್ಸಿನ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಾಲೂಕು ಐ ಈ ಸಿ ಕೋ-ಆರ್ಡಿನೇಟರ್- 21ರಿಂದ 45 ವರ್ಷ ಹಾಗೂ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗೆ 21ರಿಂದ 35 ವರ್ಷ ವಯಸ್ಸಾಗಿರಬೇಕು.

ಟೆಕ್ನಿಕಲ್ ಅಸಿಸ್ಟೆಂಟ್(ಫಾರೆಸ್ಟ್ ಹಾಗೂ ಹಾರ್ಟಿಕಲ್ಚರ್ ಅಭ್ಯರ್ಥಿಗಳಿಗೆ 24,000 ತಿಂಗಳ ವೇತನ, ತಾಲೂಕು ಐ ಈ ಸಿ ಕೋ-ಆರ್ಡಿನೇಟರ್ ತಿಂಗಳಿಗೆ 24,000 ರೂ. ಹಾಗೂ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್-ನಿಯಮಾನುಸಾರ ವೇತನವನ್ನು ನೀಡಲಾಗುವುದು. ಅಭ್ಯರ್ಥಿಯ ಕಂಪ್ಯೂಟರ್ ಜ್ಞಾನ, ಟೈಪಿಂಗ್ ಟೆಸ್ಟ್, ಪ್ರಾಕ್ಟಿಕಲ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ zpmandya.kar.nic.in ಗೆ ಭೇಟಿ ನೀಡಿ.

Comments are closed.