ಕಿಚ್ಚ ಸುದೀಪ್ ಅವರ ಬದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಮದಕರಿ ನಾಯಕ ಸಿನಿಮಾಗೆ ನಾಯಕನಾಗಿ ಆಯ್ಕೆ ಮಾಡಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪರಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಕ್ವಾಲಿಟಿ ಹಾಗೂ ಕಂಟೆಂಟ್ ಹೊಂದಿರುವ ಸಿನಿಮಾಗಳು ಹೆಚ್ಚಾಗಿ ಬಿಡುಗಡೆಯಾಗುತ್ತಿವೆ ಹಾಗೂ ಪರಭಾಷೆ ಸಿನಿಮಾ ಪ್ರೇಕ್ಷಕರು ಕೂಡ ನಮ್ಮ ಚಿತ್ರಗಳನ್ನು ಅಪ್ಪಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಈ ವರ್ಷ ನಾಲ್ಕು ನೂರು ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾಗಳು ಕೂಡ ಕನ್ನಡ ಚಿತ್ರರಂಗದಿಂದ ಭಾರತೀಯ ಚಿತ್ರರಂಗಕ್ಕೆ ಪರಿಚಿತವಾಗಿದೆ. ಇದೇ ಸಾಲಿನಲ್ಲಿ ಕಂಡು ಬರಬಹುದಾದ ಒಂದು ಚಿತ್ರದ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ರಾಜ ವೀರ ಮದಕರಿ ನಾಯಕ ಎನ್ನುವ ಐತಿಹಾಸಿಕ ಚಿತ್ರದ ಕುರಿತಂತೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಹಾಗೂ ರಾಜೇಂದ್ರ ಸಿಂಗ್ ನಿರ್ದೇಶನದಲ್ಲಿ ಮೂಡಿ ಬರಬೇಕಾಗಿದ್ದ ಈ ಸಿನಿಮಾ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡು ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ಆದರೆ ಈ ಚಿತ್ರದ ನಿರ್ಮಾಪಕ ಆಗಿರುವ ರಾಕ್ಲೈನ್ ವೆಂಕಟೇಶ್ ರವರು ಸದ್ಯದ ಮಟ್ಟಿಗೆ ದರ್ಶನ್ ರವರ 56ನೇ ಸಿನಿಮಾದ ಚಿತ್ರದ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದಾರೆ. ಆದರೂ ನಾವು ಇಂದು ಮಾತನಾಡಲು ಹೊರಟಿರುವುದು ಇದೇ ವಿಚಾರಕ್ಕೆ ಸಂಬಂಧಿಸಿದ ಬೇರೆ ವಿಷಯದ ಕುರಿತಂತೆ.

darshan madakari naayaka | ಕಿಚ್ಚ ಸುದೀಪ್ ಅವರ ಬದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಮದಕರಿ ನಾಯಕ ಸಿನಿಮಾಗೆ ನಾಯಕನಾಗಿ ಆಯ್ಕೆ ಮಾಡಿದ್ದು ಯಾಕೆ ಗೊತ್ತಾ??
ಕಿಚ್ಚ ಸುದೀಪ್ ಅವರ ಬದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಮದಕರಿ ನಾಯಕ ಸಿನಿಮಾಗೆ ನಾಯಕನಾಗಿ ಆಯ್ಕೆ ಮಾಡಿದ್ದು ಯಾಕೆ ಗೊತ್ತಾ?? 2

ನೀವು ಕೆಲವು ಸಮಯಗಳ ಹಿಂದೆ ಅಂದರೆ ಲಾಕ್ ಡೌನ್ ಗೂ ಮುನ್ನ ರಾಜವೀರ ಮದಕರಿ ನಾಯಕ ಸಿನಿಮಾ ಅನೌನ್ಸ್ ಆದಾಗ ಒಂದು ವಿಚಾರ ಗಂಭೀರ ತಿರುವನ್ನು ಪಡೆದುಕೊಂಡಿತ್ತು ಎಂಬುದನ್ನು ಕೇಳಿದ್ದೀರಿ. ಹೌದು ರಾಜವೀರ ಮದಕರಿ ನಾಯಕ ಸಿನಿಮಾ ಗೆ ಕಿಚ್ಚ ಸುದೀಪ್ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕು ಎನ್ನುವುದಾಗಿ ಕೆಲವರ್ಗದ ಜನರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇಷ್ಟೆಲ್ಲ ಆಗಿದ್ದರೂ ಕೂಡ ರಾಕ್ ಲೈನ್ ವೆಂಕಟೇಶ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನೇ ರಾಜ ವೀರ ಮದಕರಿ ನಾಯಕ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡುತ್ತಾರೆ ಅದಕ್ಕೆ ಕಾರಣ ಏನು ಎಂಬುದಾಗಿ ನೀವು ಕೇಳಬಹುದು. ಹಾಗಿದ್ದರೆ ಬನ್ನಿ ಈ ಕುರಿತಂತೆ ಸವಿವರವಾಗಿ ತಿಳಿದುಕೊಳ್ಳೋಣ.

ಈಗಾಗಲೇ ನೀವು ನೋಡಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಯಾವುದೇ ಪಾತ್ರವನ್ನಾದರೂ ಕೂಡ ಸರ್ವತೋಮುಖ ದೃಷ್ಟಿಕೋನದಲ್ಲಿ ಹಾಗೂ ಸವ್ಯಸಾಚಿಯಾಗಿ ನಿರ್ವಹಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಕುರುಕ್ಷೇತ್ರ ಹಾಗೂ ಸಂಗೊಳ್ಳಿ ರಾಯಣ್ಣ ಸಿನಿಮಾವನ್ನು ನೋಡಿದ ನಂತರ ಐತಿಹಾಸಿಕ ಪಾತ್ರವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರಾಜಕುಮಾರ್ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ಯಾರಾದರೂ ಪರಿಪೂರ್ಣ ಹಾಗೂ ಪರಿಪಕ್ವವಾಗಿ ನಟಿಸುತ್ತಾರೆ ಎಂದರೆ ಅದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬರೇ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಕುರುಕ್ಷೇತ್ರ ಸಿನಿಮಾದ ಪಾತ್ರವನ್ನು ಗಮನಿಸಿದ ನಂತರ ರಾಜ ವೀರ ಮದಕರಿ ನಾಯಕ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೆ ಎಂಬುದಾಗಿ ಈ ಹಿಂದೆಯೇ ಮಾಧ್ಯಮಗಳಿಗೆ ರಾಕ್ ಲೈನ್ ವೆಂಕಟೇಶ್ ರವರು ಹೇಳಿಕೆ ನೀಡಿದ್ದರು. ಹೀಗಾಗಿ ಸುದೀಪ್ ರವರ ಬದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಯಾಕೆ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ ಎಂಬುದನ್ನು ನಾವು ಈ ಮೂಲಕ ಯಾವುದೇ ಗೊಂದಲವಿಲ್ಲದೆ ಅರ್ಥಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ಚಿತ್ರದ ಫಸ್ಟ್ ಲುಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಚಿತ್ರ ಪೂರ್ಣ ಪ್ರಮಾಣದಲ್ಲಿ ಸಿದ್ದವಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ಪಾತ್ರಕ್ಕೆ ಯಾಕೆ ಆಯ್ಕೆ ಆಗಿದ್ದಾರೆ ಎಂಬುದರ ಕುರಿತಂತೆ ಸಂಪೂರ್ಣವನ್ನು ನ್ಯಾಯ ಒದಗಿಸುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರ ಮುಂದಿನ ವರ್ಷ ಸಿದ್ದ ಆಗಬಹುದಾದ ಎಲ್ಲಾ ಸಾಧ್ಯತೆಗಳನ್ನು ಹೊಂದಿದ್ದು, ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ಚಿತ್ರದ ನಾಯಕಿಯಾಗಿ ಯಾರು ಆಯ್ಕೆಯಾಗುತ್ತಾರೆ ಎಂಬುದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಊಹೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.