Madhavi Latha: ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಯುವ ನಟಿ: ಅಂದು ಆತ ಈಕೆಯನ್ನು ನೇರವಾಗಿ ಏನು ಕೇಳಿದ್ದ ಗೊತ್ತೇ?? ಕೊನೆಗೆ ಯುವ ನಟಿ ಮಾಡಿದ್ದೇನು ಗೊತ್ತೇ??

Madhavi Latha: ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿಯರಲ್ಲಿ ಒಬ್ಬರು ಮಾಧವಿ ಲತಾ (Madhavi Latha). ಇವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಅಂದುಕೊಂಡ ಹಾಗೆ ಯಶಸ್ಸು ಸಿಗಲಿಲ್ಲ. ಸಿನಿಮಾದಲ್ಲಿ ಅದೃಷ್ಟ ಕೈಹಿಡಿಯದ ಕಾರಣಕ್ಕೆ ಮಾಧವಿ ಲತಾ ಅವರು ಬಿಜೆಪಿ (BJP) ಪಕ್ಷದ ಮೂಲಕ ರಾಜಕೀಯ ಲೋಕಕ್ಕೆ ಬಂದರು, ಹಾಗೆಯೇ ಆಧ್ಯಾತ್ಮದ ಕಡೆಗು ಗಮನ ಹರಿಸಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರು ತಮ್ಮ ಸುತ್ತ ಮುತ್ತ ನಡೆಯುತ್ತಿರುವ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ. ಇತ್ತೀಚೆಗೆ ಇವರು ಒಂದು ಇಂಟರ್ವ್ಯೂನಲ್ಲಿ ಪಾಲ್ಗೊಂಡಿದ್ದು, ತಮ್ಮ ಕೆರಿಯರ್ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ.

madhavi latha about industry kannada news | Madhavi Latha: ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಯುವ ನಟಿ: ಅಂದು ಆತ ಈಕೆಯನ್ನು ನೇರವಾಗಿ ಏನು ಕೇಳಿದ್ದ ಗೊತ್ತೇ?? ಕೊನೆಗೆ ಯುವ ನಟಿ ಮಾಡಿದ್ದೇನು ಗೊತ್ತೇ??
Madhavi Latha: ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಯುವ ನಟಿ: ಅಂದು ಆತ ಈಕೆಯನ್ನು ನೇರವಾಗಿ ಏನು ಕೇಳಿದ್ದ ಗೊತ್ತೇ?? ಕೊನೆಗೆ ಯುವ ನಟಿ ಮಾಡಿದ್ದೇನು ಗೊತ್ತೇ?? 2

ಚಿತ್ರರಂಗದಲ್ಲಿ ತಮಗೆ ನೋವು ನೀಡಿದ ಘಟನೆಗಳ ಬಗ್ಗೆ ಮಾಧವಿ ಲತಾ ಅವರು ಮಾತನಾಡಿದ್ದು, ಅವರು ಹೀಗೆ ಹೇಳಿದ್ದಾರೆ.. “ನಾನು ಯಾರಿಗೂ ನೋವು ನೀಡುವುದಿಲ್ಲ.. ನಾನು ಕೋಪ ಮಾಡಿಕೊಳ್ಳುವುದು ಕಷ್ಟ, ಆದರೆ ಒಮ್ಮೆ ನಾನು ತಾಳ್ಮೆ ಕಳೆದುಕೊಂಡರೆ, ಎದುರಿಗೆ ಯಾರಿದ್ದಾರೆ ಎಂದು ಯೋಚನೆ ಕೂಡ ಮಾಡದೆ, ಮಾತನಾಡಿ ಬಿಡುತ್ತೇನೆ, ಈ ವಿಷಯವನ್ನು ಯಾರು ಕೂಡ ನಂಬುವುದಿಲ್ಲ. ಇಲ್ಲಿನ ನಿರ್ಮಾಪಕರು ಅಥವಾ ಬೇರೆ ಯಾರೇ ಆಗಿದ್ದರು, ನನ್ನ ಜೊತೆಗೆ ತಪ್ಪಾಗಿ ವರ್ತನೆ ಮಾಡಿದರೆ, ನಾನು ಕಿರುಚುವುದಿಲ್ಲ, ಶಾಂತವಾಗಿಯೇ ವರ್ತನೆ ಮಾಡುತ್ತೇನೆ.. ಅವರ ವರ್ತನೆ ಇಷ್ಟವಾಗದೆ ಹೋದರೆ, ಆ ಜಾಗದಿಂದ ಹೊರಟು ಹೋಗುತ್ತೇನೆ.. ಇದನ್ನು ಓದಿ..Kannada News: ನಾವು ಟಾಪ್ ನೀವು ಟಾಪ್ ಅನ್ನುವುದಲ್ಲ, ವೀಕೆಂಡ್ ವಿಥ್ ರಮೇಶ್ ನಲ್ಲಿ ಅತಿ ಹೆಚ್ಚು ಟಿಆರ್ಪಿ ಬಂದಿದ್ದು ಯಾರಿಗೆ ಗೊತ್ತೆ? ತಿಳಿದರೆ ನಂಬೋದೇ ಇಲ್ಲ.

ಈ ಇಂಡಸ್ಟ್ರಿಯಲ್ಲಿ ಎಲ್ಲೆಲ್ಲಿ ಹೇಗೆ ನಡೆದುಕೊಳ್ಳಬೇಕೋ, ಹಾಗೆ ನಡೆದುಕೊಳ್ಳಬೇಕು.. ನಮ್ಮ ಕೆಲಸಗಳನ್ನು ನಾವು ಕೂಲ್ ಆಗಿ ಮಾಡಿಕೊಳ್ಳಬೇಕು..” ಎಂದಿದ್ದಾರೆ ಮಾಧವ್ ಲತಾ. ಸ್ವಲ್ಪ ಸಮಯದ ಹಿಂದೆ ಇವರ ಬಗ್ಗೆ ವೈರಲ್ ಆಗಿದ್ದ ಸುದ್ದಿಯ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಮೈಗ್ರೇನ್ ಸಮಸ್ಯೆ ಇದೆ, ಇದು ಎಲ್ಲರ ಕಣ್ಣಿಗೆ ಚಿಕ್ಕ ಸಮಸ್ಯೆ ಎಂದು ಅನ್ನಿಸಬಹುದು. ಆದರೆ ಅನುಭವಿಸುವವರಿಗೆ ಆ ನೋವು ಎಂಥದ್ದು ಎಂದು ಗೊತ್ತಿರುತ್ತದೆ. ಹಾಗಾಗಿ ನಾನು ಮೈಗ್ರೇನ್ ಗೆ ಯಾವಾಗಲು ಮಾತ್ರೆ ತೆಗೆದುಕೊಳ್ಳುತ್ತೇನೆ. ಒಮ್ಮೆ ನಾನು ಲವ್ ಸಿನಿಮಾ ನೋಡಿದೆ, ಆ ಸಿನಿಮಾದಲ್ಲಿ ನಟಿ ರೇವತಿ ಅವರು ಯಾವಾಗಲೂ ಮಾತ್ರೆಗಳನ್ನು ತೆಗೆದುಕೊಂಡು, ಕೊನೆಗೆ ಅವರ ಮೇಲೆ ಯಾವುದೇ ಔಷಧಿ ಕೆಲಸ ಮಾಡದ ಸ್ಥಿತಿಗೆ ತಲುಪುತ್ತಾರೆ. ಆ ಸಿನಿಮಾ ನೋಡಿ, ಮುಂದೆ ನನಗೂ ಹಾಗೆ ಆಗಬಹುದು ಅನ್ನಿಸಿತು. ಆಗ ನನಗೆ ಮಾನಸಿಕವಾಗಿ ಖಿನ್ನತೆ ಉಂಟಾಯಿತು.

ಆಗ ನನ್ನ ಮೇಲೆ ಯಾವುದೇ ಮಾತ್ರೆ ಕೆಲಸ ಮಾಡುವುದಿಲ್ಲ ಎಂದು ಪೋಸ್ಟ್ ಹಾಕಿದೆ.. ಬೆಳಗ್ಗೆ ಎದ್ದು ನೋಡಿದರೆ, ನಾನು ಸತ್ತು ಹೋಗುತ್ತಿದ್ದೇನೆ ಎಂದು ಸುದ್ದಿ ವೈರಲ್ ಆಗಿತ್ತು. ನನ್ನ ಫ್ರೆಂಡ್ಸ್ ಕಾಲ್ ಹೇಳಿದರು, ನಾನು ಸುದ್ದಿ ನೋಡಿ ಶಾಕ್ ಆದೆ..ಲಾಕ್ ಡೌನ್ ಗಿಂತ ಮೊದಲು ನಾನು ಖಿನ್ನತೆಗೆ ಒಳಗಾಗಿದ್ದೆ, ನಂತರ ಅದು ಹೆಚ್ಚಾಯಿತು. ಆ ವೇಳೆ ನಾನು ಉಸಿರನ್ನು ನಿಲ್ಲಿಸಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಾನು ಅದಕ್ಕಾಗಿ ಪ್ರಯತ್ನ ಮಾಡಲಿಲ್ಲ..” ಎಂದು ನಡೆದ ಘಟನೆ ಬಗ್ಗೆ ನಟಿ ಮಾಧವಿ ಲತಾ ತಿಳಿಸಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.