ಮಾಧುರಿ ದೀಕ್ಷಿತ್ ರವರು ಖರೀದಿಸಿರುವ ಹೊಸ ಅಪಾರ್ಟ್ಮೆಂಟಿನ ತಿಂಗಳ ಬಾಡಿಗೆ ಎಷ್ಟು ಗೊತ್ತಾ?? ವರ್ಷ ದುಡಿದರೂ ಆಗುವುದಿಲ್ಲ. ಎಷ್ಟಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳು ದುಬಾರಿ ವಸ್ತುಗಳನ್ನು ಖರೀದಿಸುವುದು ಸರ್ವೆ ಸಾಮಾನ್ಯವಾಗಿರುತ್ತದೆ. ಯಾಕೆಂದರೆ ತಮ್ಮ ಘನತೆಗೆ ತಕ್ಕಂತೆ ವಸ್ತುಗಳು ಕೂಡ ದುಬಾರಿ ಆಗಿರಬೇಕು ಎನ್ನುವುದು ಕೂಡ ಅವರ ಯೋಚನೆಯಾಗಿರುತ್ತದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಎವರ್ಗ್ರೀನ್ ಸ್ಟಾರ್ ನಟಿಯಾಗಿರುವ ಮಾಧುರಿ ದೀಕ್ಷಿತ್ ರವರ ಕುರಿತಂತೆ. ಅಂದಿನ ಕಾಲದಲ್ಲಿ ಮಾಧುರಿ ದೀಕ್ಷಿತ್ ರವರು ಎಂದರೆ ಸ್ಟಾರ್ ನಟರಿಗಿಂತ ಕೂಡ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿರುವಂತಹ ನಟಿಯಾಗಿದ್ದರು.

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿ ದಂತಹ ನಟಿ. ಮಾಧುರಿ ದೀಕ್ಷಿತ್ ಸ್ಟೆಪ್ ಹಾಕಿದ್ದಾರೆ ಎಂದರೆ ಆ ಸಿನಿಮಾ ಯಾವುದೇ ಅನುಮಾನವಿಲ್ಲದೆ ಬಾಕ್ಸಾಫೀಸಿನಲ್ಲಿ ಸೂಪರ್ಹಿಟ್ ಆಗುತ್ತಿತ್ತು. ಇಂದಿಗೂ ಕೂಡ ವಯಸ್ಸಾಗಿದ್ದರೂ 25ರ ಹರೆಯದ ಯುವತಿಯರನ್ನು ಕೂಡ ನಾಚಿಸುವಂತೆ ಸುಂದರಿಯಾಗಿದ್ದಾರೆ. ಈಗ ಮಾಧುರಿ ದೀಕ್ಷಿತ್ ರವರು ಸುದ್ದಿ ಆಗುತ್ತಿರುವುದೇ ಇದೇ ದುಬಾರಿ ಮಟ್ಟದ ಖರೀದಿಯ ಕಾರಣಕ್ಕಾಗಿ. ಆದರೆ ಮಾಧುರಿ ದೀಕ್ಷಿತ್ ರವರು ಇಷ್ಟೊಂದು ದುಬಾರಿ ಹಣವನ್ನು ನೀಡಿ ಕೂಡ ಅದನ್ನು ಖರೀದಿ ಮಾಡುತ್ತಿಲ್ಲ. ಹಾಗಿದ್ದರೆ ಮಾಧುರಿ ದೀಕ್ಷಿತ್ ರವರು ಯಾವ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ ಎಂಬುದನ್ನು ತಿಳಿಯೋಣ.

madhuri dixit | ಮಾಧುರಿ ದೀಕ್ಷಿತ್ ರವರು ಖರೀದಿಸಿರುವ ಹೊಸ ಅಪಾರ್ಟ್ಮೆಂಟಿನ ತಿಂಗಳ ಬಾಡಿಗೆ ಎಷ್ಟು ಗೊತ್ತಾ?? ವರ್ಷ ದುಡಿದರೂ ಆಗುವುದಿಲ್ಲ. ಎಷ್ಟಂತೆ ಗೊತ್ತೇ??
ಮಾಧುರಿ ದೀಕ್ಷಿತ್ ರವರು ಖರೀದಿಸಿರುವ ಹೊಸ ಅಪಾರ್ಟ್ಮೆಂಟಿನ ತಿಂಗಳ ಬಾಡಿಗೆ ಎಷ್ಟು ಗೊತ್ತಾ?? ವರ್ಷ ದುಡಿದರೂ ಆಗುವುದಿಲ್ಲ. ಎಷ್ಟಂತೆ ಗೊತ್ತೇ?? 2

ಹೌದು ಮಾಧುರಿ ದೀಕ್ಷಿತ್ ರವರು ತಮ್ಮ ಪತಿ ಡಾಕ್ಟರ್ ನೆನೆ ರವರ ಜೊತೆಗೂಡಿ ಮುಂಬೈನಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗಾಗಿ ಖರೀದಿಸಿದ್ದಾರೆ. ಹೌದು ಈ ಅಪಾರ್ಟ್ಮೆಂಟ್ ಮೂಲಕ ಇಡೀ ಮುಂಬೈ ನಗರ ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತದಂತೆ. ಅಷ್ಟೊಂದು ಎತ್ತರದಲ್ಲಿರುವ ಹಾಗೂ ಅರಮನೆಯ ಇರುವಂತಹ ವಿಶಾಲವಾದ ಪ್ರದೇಶವನ್ನು ಹೊಂದಿದೆ. ಹಾಗಿದ್ದರೆ ಇದರ ತಿಂಗಳ ಬಾಡಿಗೆ ಕೇಳಿದರೆ ನೀವು ಕೂಡ ಸುಸ್ತಾಗುತ್ತೀರಾ. ಹೌದು ಈ ಅಪಾರ್ಟ್ಮೆಂಟ್ನ ತಿಂಗಳ ಬಾಡಿಗೆ ಬರೋಬ್ಬರಿ 12.5 ಲಕ್ಷ ರೂಪಾಯಿ. ಮಧ್ಯಮವರ್ಗದ ಜನರ ವರ್ಷದ ಸಂಬಳ ಎಂಬುದಾಗಿ ಕೂಡ ಇದನ್ನು ಹೇಳಬಹುದಾಗಿದೆ. ಇಷ್ಟೊಂದು ದುಬಾರಿಯಾಗಿರುವ ಅಪಾರ್ಟ್ಮೆಂಟ್ ಅನ್ನು ದಂಪತಿಗಳಿಬ್ಬರು ಸೇರಿಕೊಂಡು ಮರುವಿನ್ಯಾಸ ಮಾಡಲು ಹೊರಟಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.