ಕೋಟಿ ಕೋಟಿ ಖರ್ಚು ಮಾಡಿ ಮದುವೆಯಾಗುತ್ತಿರುವ ಆಲಿಯಾ ಭಟ್, ರಣಬೀರ್ ಕಪೂರ್ ರವರ ಮದುವೆಗೆ ಬರುತ್ತಿರುವ ಅತಿಥಿಗಳು ಎಷ್ಟು ಕಡಿಮೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮದುವೆಯ ಸೀಸನ್ ಮಾಡಿಕೊಂಡು ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಸತತವಾಗಿ ಖ್ಯಾತನಾಮರು ಇತ್ತೀಚಿಗೆ ಮದುವೆಯಾಗುತ್ತಿರುವುದು ಇದಕ್ಕೆ ಪ್ರಮುಖವಾದ ಕಾರಣ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ರಾಜಸ್ಥಾನದಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ಜೋಡಿ ಗಳಾಗಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಅದ್ದೂರಿಯಾಗಿ ಮದುವೆಯಾಗಿದ್ದರು.

ಈಗ ಹಲವಾರು ವರ್ಷಗಳಿಂದ ಪ್ರೇಮ ಪಕ್ಷಿಗಳಾಗಿ ಬಾಲಿವುಡ್ ಅಂಗಳದಲ್ಲಿ ಹಾರಾಡುತ್ತಿರುವ ಅಲಿಯ ಭಟ್ ಹಾಗೂ ರಣಬೀರ್ ಕಪೂರ್ ಅವರು ಅತಿಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಸುದ್ದಿ ಗಾಳಿ ಸುದ್ದಿಯಂತೆ ಹಲವಾರು ಸಮಯಗಳ ಕಾಲ ಬಾಲಿವುಡ್ನಲ್ಲಿ ಹಾರಾಡುತ್ತಿತ್ತು. ಅಂತೂ ಇಂತೂ ಇಬ್ಬರು ಅತಿಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ವಿಚಾರಗಳು ಅವರ ಅಭಿಮಾನಿಗಳಿಗೆ ಮತ್ತಷ್ಟು ಸಂತೋಷವನ್ನುಂಟುಮಾಡಿದೆ. ಇನ್ನು ಈ ಮದುವೆ ನಡೆಯುತ್ತಿರುವುದು ಮುಂಬೈನ ಚೆಂಬೂರಿನಲ್ಲಿ. ಇಲ್ಲಿ ರಣಬೀರ್ ಕಪೂರ್ ಅವರ ಪೂರ್ವಜರ ಆರ್ ಕೆ ಸ್ಟುಡಿಯೋ ಇದೆ. ಇಲ್ಲಿಯ ಮದುವೆಯನ್ನು ಮಾಡಿಕೊಳ್ಳುವುದು ರಣಬೀರ್ ಕಪೂರ್ ಅವರ ಆಸೆಯಾಗಿದೆ. ಇನ್ನು ಇವರಿಬ್ಬರ ಮದುವೆಗೆ ಬರುತ್ತಿರುವ ಅತಿಥಿಗಳ ಸಂಖ್ಯೆ ಖಂಡಿತವಾಗಿ ನಿಮಗೆ ಅತ್ಯಾಶ್ಚರ್ಯ ವನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

alia bhatt ranbir kapoor | ಕೋಟಿ ಕೋಟಿ ಖರ್ಚು ಮಾಡಿ ಮದುವೆಯಾಗುತ್ತಿರುವ ಆಲಿಯಾ ಭಟ್, ರಣಬೀರ್ ಕಪೂರ್ ರವರ ಮದುವೆಗೆ ಬರುತ್ತಿರುವ ಅತಿಥಿಗಳು ಎಷ್ಟು ಕಡಿಮೆ ಗೊತ್ತೇ??
ಕೋಟಿ ಕೋಟಿ ಖರ್ಚು ಮಾಡಿ ಮದುವೆಯಾಗುತ್ತಿರುವ ಆಲಿಯಾ ಭಟ್, ರಣಬೀರ್ ಕಪೂರ್ ರವರ ಮದುವೆಗೆ ಬರುತ್ತಿರುವ ಅತಿಥಿಗಳು ಎಷ್ಟು ಕಡಿಮೆ ಗೊತ್ತೇ?? 2

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯೆಂದರೆ ಜನಜಂಗುಳಿ ತುಂಬಿರುತ್ತದೆ ಎಂಬುದಾಗಿ ನೀವು ಅಂದುಕೊಂಡಿರುತ್ತೀರಿ. ಅದು ಸರ್ವೇಸಾಮಾನ್ಯ ಕೂಡ ಹೌದು ಯಾಕೆಂದರೆ ಸೆಲೆಬ್ರಿಟಿಗಳಿಗೆ ಗಣ್ಯಾತಿಗಣ್ಯ ಸ್ನೇಹಿತರ ಹಿಂಡೇ ಇರುತ್ತದೆ. ಹೀಗಾಗಿ ಎಲ್ಲರನ್ನೂ ಕೂಡ ಮದುವೆಗೆ ಆಹ್ವಾನ ಮಾಡುತ್ತಾರೆ. ಆದರೆ ಆಲಿಯಾ ಭಟ್ ರವರ ಸಹೋದರ ನಾಗಿರುವ ರಾಹುಲ್ ಭಟ್ ರವರು ಹೇಳಿರುವ ಮಾಹಿತಿಯ ಪ್ರಕಾರ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರ ಕುಟುಂಬಸ್ಥರನ್ನು ಹೊರತುಪಡಿಸಿ ಕೇವಲ 28 ಜನ ಅತಿಥಿಗಳು ಮಾತ್ರ ಮದುವೆಗೆ ಹಾಜರಾಗಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇದು ನಿಜಕ್ಕೂ ಕೂಡ ಶಾ’ಕಿಂಗ್ ವಿಚಾರ ಎಂದರೆ ತಪ್ಪಾಗಲಾರದು. ಇದನ್ನು ತಿಳಿದ ನಂತರ ಆ 28 ಮಂದಿ ಯಾರು ಎನ್ನುವುದಾಗಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.

Comments are closed.