ಬೇರೆ ಭಾಷೆಗಳಿಂದ ಸಿನಿಮಾ ಆಫರ್ ಗಳು ಬರುತ್ತಿವೆ, ಮುಂದೆ ಕನ್ನಡ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರಶಾಂತ್ ನೀಲ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರಶಾಂತ್ ನೀಲ್ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮರುಹುಟ್ಟನ್ನು ನೀಡುತ್ತಾರೆ. ಇನ್ನು ತಮ್ಮ ಎರಡನೇ ನಿರ್ದೇಶನದ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 1 ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇಡೀ ಜಗತ್ತಿಗೆ ವಿಸ್ತರಿಸುತ್ತಾರೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಇನ್ನು ಇಂದು ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ನಾನು ಎರಡನೇ ರಾಜಮೌಳಿ ಅಲ್ಲ ಬದಲಾಗಿ ಮೊದಲನೇ ಪ್ರಶಾಂತ್ ನೀಲ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಆದರೆ ಕನ್ನಡಿಗರಿಗೆ ಅವರ ಕುರಿತಂತೆ ಇರುವಂತಹ ಒಂದು ಬೇಸರದ ವಿಚಾರವೇನೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಪ್ರಶಾಂತ್ ನೀಲ್ ರವರು ಪರಭಾಷೆಗಳಿಗೆ ಹೋಗುತ್ತಿದ್ದಾರೆ ಎನ್ನುವುದು. ಯಾಕೆಂದರೆ ಈಗಾಗಲೇ ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಆಗಿರುವ ಪ್ರಭಾಸ್ ರವರೊಂದಿಗೆ ಸಲಾರ್ ಸಿನಿಮಾವನ್ನು ಮಾಡುತ್ತಿದ್ದಾರೆ. ಪ್ರಶಾಂತ ಮೇಲೆ ಅವರ ಮುಂದಿನ ಸಿನಿಮಾ ಜೂನಿಯರ್ ಎನ್ಟಿಆರ್ ಅವರ ಜೊತೆಗೆ. ಹೀಗಾಗಿ ಕೆಜಿಎಫ್ ಸರಣಿ ಚಿತ್ರಗಳ ಯಶಸ್ಸಿನ ನಂತರ ಕನ್ನಡ ಚಿತ್ರರಂಗವನ್ನೇ ಮರೆತರ ಎನ್ನುವುದಾಗಿ ಎಲ್ಲರಲ್ಲೂ ಪ್ರಶ್ನೆ ಮೂಡುತ್ತದೆ. ಇದಕ್ಕೆ ಉತ್ತರಿಸುತ್ತ ಪ್ರಶಾಂತ್ ನೀಲ್ ರವರು ನಾನು ಎಲ್ಲೇ ಸಿನಿಮಾ ಮಾಡಿದರು ಕನ್ನಡವನ್ನು ನಿರ್ಲಕ್ಷಿಸುವುದಿಲ್ಲ. ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗುವುದಿಲ್ಲ.

prashanth neel NTR | ಬೇರೆ ಭಾಷೆಗಳಿಂದ ಸಿನಿಮಾ ಆಫರ್ ಗಳು ಬರುತ್ತಿವೆ, ಮುಂದೆ ಕನ್ನಡ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರಶಾಂತ್ ನೀಲ್ ಹೇಳಿದ್ದೇನು ಗೊತ್ತೇ??
ಬೇರೆ ಭಾಷೆಗಳಿಂದ ಸಿನಿಮಾ ಆಫರ್ ಗಳು ಬರುತ್ತಿವೆ, ಮುಂದೆ ಕನ್ನಡ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರಶಾಂತ್ ನೀಲ್ ಹೇಳಿದ್ದೇನು ಗೊತ್ತೇ?? 2

ನನ್ನ ಆರಂಭವಾಗಿದ್ದು ಇಲ್ಲಿಯೇ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಸಿನಿಮಾಗಳನ್ನು ಮಾಡುತ್ತೇನೆ ಎಂಬುದಾಗಿ ಪ್ರಶಾಂತ್ ನೀಲ್ ರವರು ಉತ್ತರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರಿಗೂ ಕೂಡ ಒಂದು ಸಿನಿಮಾ ಮಾಡುವ ಮಾತನ್ನು ನೀಡಿದ್ದಾರಂತೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರಶಾಂತ್ ನೀಲ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕಾಂಬಿನೇಷನ್ನಲ್ಲಿ ಮತ್ತೊಂದು ಮಾಸ್ ಸಿನಿಮಾವನ್ನು ನೋಡುವ ಸಾಧ್ಯತೆ ದಟ್ಟವಾಗಿದೆ. ಕನ್ನಡ ಚಿತ್ರರಂಗವನ್ನು ಬಿಟ್ಟು ಪರಭಾಷೆಗಳಿಗೆ ಹೋಗಲಿದ್ದಾರೆ ಎನ್ನುವ ಮಾತನ್ನು ಪ್ರಶಾಂತ್ ನೀಲ್ ರವರು ಪರೋಕ್ಷವಾಗಿಯೇ ಸತ್ಯಕ್ಕೆ ದೂರ ಎಂಬುದನ್ನು ಸಾಬೀತುಪಡಿಸಿದ್ದಾರೆ.

Comments are closed.