ಸಹಸ್ರಾರು ಜನರಿಂದ ಮೆಚ್ಚುಗೆಗೆ ಒಳಪಟ್ಟ ನಟಿ ಶ್ರೀಲೀಲಾ ರವರ ಡಾನ್ಸ್ ಪ್ರಾಕ್ಟೀಸ್ ವಿಡಿಯೋ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಗುಣ ಸೆಲೆಬ್ರಿಟಿಗಳು ಪ್ರೇಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ. ಆಗಾಗ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಸೆಲೆಬ್ರಿಟಿಗಳು ಯಶಸ್ವಿಯಾಗುತ್ತಾರೆ. ಈಗಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡದ ಖ್ಯಾತ ಯುವ ಉದಯೋನ್ಮುಖ ನಟಿಯಾಗಿರುವ ನಟಿ ಶ್ರೀಲೀಲಾ ರವರ ಕುರಿತಂತೆ.

ಎಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದಿರುವ ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅತಿ ಚಿಕ್ಕ ವಯಸ್ಸಿನಲ್ಲಿ ಪಾದರ್ಪಣೆ ಮಾಡುವ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಸಿನಿಮಾವೇ 100 ದಿನಗಳ ಓಟವನ್ನು ಕಂಡಿತ್ತು. ನಂತರ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಭರಾಟೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ ತೆಲುಗು ಸಿನಿಮಾದಲ್ಲಿ ಕೂಡ ನಟಿಸಿ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹಲವಾರು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಭರವಸೆಯನ್ನು ಕೂಡ ಮೂಡಿಸಿದ್ದಾರೆ. ಒಟ್ಟಾರೆಯಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ಕೂಡ ತಮ್ಮ ಕರಿಯರ್ ಅನ್ನು ಚೆನ್ನಾಗಿ ಕ್ರಾಫ್ಟ್ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಸ್ವರ್ಣಲತಾ ಎನ್ನುವ ಡಾಕ್ಟರ್ ಅವರ ಮಗಳಾಗಿದ್ದಾರೆ ನಟಿ ಶ್ರೀಲೀಲಾ. ಇತ್ತೀಚಿಗಷ್ಟೆ ತೆಲುಗು ಚಿತ್ರರಂಗದಲ್ಲಿ ಪಾದರ್ಪಣೆ ಮಾಡಿದ್ದಾಗ ಶ್ರೀಲೀಲ ರವರ ತಂದೆಯ ಕುರಿತಂತೆ ಸಾಕಷ್ಟು ವಿಚಾರಗಳು ದೊಡ್ಡಮಟ್ಟದಲ್ಲಿ ಸುದ್ದಿಯನ್ನು ಮಾಡಿದ್ದವು. ಸದ್ಯಕ್ಕೆ ನಟಿ ಶ್ರೀಲೀಲಾ ಸುದ್ದಿ ಆಗ್ತಿರೋದು ಬೇರೆ ವಿಚಾರಕ್ಕಾಗಿ. ಸಾಮಾಜಿಕ ಜಾಲತಾಣಗಳ ಲಕ್ಷಾಂತರ ಅಭಿಮಾನಿಗಳನ್ನು ಹಾಗೂ ಫಾಲೋವರ್ಸ್ ಗಳನ್ನು ಹೊಂದಿರುವ ನಟಿ ಶ್ರೀ ಲೀಲ ರವರು ಏನೇ ಮಾಡಿದರೂ ಕೂಡ ಸುದ್ದಿ ಆಗುತ್ತಲೇ ಇರುತ್ತದೆ. ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ರೀಲೀಲಾ ರವರು ರಿಹರ್ಸಲ್ ಮಾಡುತ್ತಿರುವ ನೃತ್ಯದ ದೃಶ್ಯದ ತುಣುಕೊಂ’ದು ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತಿದೆ. ಸಹಸ್ರಾರು ವೀಕ್ಷಣೆಯನ್ನು ಪಡೆದಿರುವ ಈ ವಿಡಿಯೋ ಎಲ್ಲರಿಂದ ಮೆಚ್ಚುಗೆಯನ್ನು ಕೂಡ ಪಡೆದುಕೊಂಡಿದೆ. ನೀವು ಕೂಡ ಈ ವಿಡಿಯೋ ನೋಡಬಹುದಾಗಿದೆ.

Comments are closed.