ತಾಯಿಯ ಮತ್ತೊಂದು ಸಂಬಂಧದ ಕುರಿತಂತೆ ತಿಳಿದುಕೊಂಡ ಮಗ; ನಂತರ ನಡೆದಿದ್ದೇನು ಗೊತ್ತೇ?? ಕೆಟ್ಟದಾಗಿ ಆಲೋಚಿಸುವ ಮುನ್ನ ನಡೆದದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೈಕಾಲಜಿಸ್ಟ್ ಹಾಗೂ ಹೆಲ್ತ್ ಕೌನ್ಸಲರ್ ಆಗಿರುವ ನಮೃತ ಜೈನ್ ಎನ್ನುವವರು ಒಬ್ಬ ಹುಡುಗನ ನೈಜ ಘಟನೆ ಕುರಿತಂತೆ ಹೇಳುತ್ತಾರೆ. ಅದೇನೆಂದರೆ ಆತ ತನ್ನ ತಾಯಿಯ ಬೇಡದ ಸಂಬಂಧಗಳ ಕುರಿತಂತೆ ತಿಳಿದಮೇಲೆ ಆತನಿಗೆ ಮಹಿಳೆಯರ ಮೇಲೆ ಭರವಸೆಯೇ ಉಡುಗಿಹೋಗುತ್ತದೆ. ಆತನಿಗೆ ತಾಯಿಯ ಮೊಬೈಲ್ ಅನ್ನು ಚೆಕ್ ಮಾಡಿದ ನಂತರ ಅಲ್ಲಿ ಆಕೆಯ ಮೆಸೇಜನ್ನು ಓದಿದ ನಂತರ ಹುಡುಗನಿಗೆ ತಾಯಿಯ ಬೇಡದ ಸಂಬಂಧದ ಕುರಿತು ತಿಳಿದುಬರುತ್ತದೆ.
ಆದರೆ ಆ ಹುಡುಗನಿಗೆ ತನ್ನ ಅನುಮಾನವನ್ನು ನಿಜ ಮಾಡಿಕೊಳ್ಳಬೇಕಾಗಿತ್ತು ಈ ಕಾರಣಕ್ಕಾಗಿ ತಾಯಿಯ ವಾಟ್ಸಪ್ ಅನ್ನು ತನ್ನ ಲ್ಯಾಪ್ಟಾಪ್ಗೆ ಕನೆಕ್ಟ್ ಮಾಡಿಕೊಳ್ಳುತ್ತಾನೆ. ನಂತರ ಪ್ರತಿದಿನ ತಾಯಿಯ ಮೆಸೇಜ್ ಗಳನ್ನು ಆತ ಓದಲು ಪ್ರಾರಂಭಿಸುತ್ತಾನೆ. ತಾಯಿಯ ಬೇಡದ ಸಂಬಂಧಗಳ ಕುರಿತಂತೆ ತಿಳಿದು ತಾಯಿಯ ಮೇಲೆ ದ್ವೇ’ಷವನ್ನು ಬೆಳೆಸಿಕೊಳ್ಳುತ್ತಾನೆ. ತಾಯಿಯ ಕುರಿತಂತೆ ತಿಳಿದ ನಂತರ ಆತ ತಾಯಿಯ ಬಳಿ ಮಾತುಮಾತಿಗೂ ಜಗಳ ಆಡಲು ಆರಂಭಿಸುತ್ತಾನೆ. ಮನೆಯವರೊಂದಿಗೆ ಎಲ್ಲಾ ಸಂಬಂಧಗಳನ್ನು ದೂರ ಮಾಡಿಕೊಳ್ಳುವುದರಲ್ಲಿ ಪರೋಕ್ಷವಾಗಿ ಯಶಸ್ವಿಯಾಗುತ್ತಾನೆ ಎಂದು ಹೇಳಬಹುದು.
ಒಂಟಿಯಾಗಿ ರೂಮಿನಲ್ಲಿಯೇ ಕುಳಿತುಕೊಳ್ಳುತ್ತಾನೆ. ತಾಯಿಯ ಈ ಕಾರ್ಯದಿಂದಾಗಿ ಮಹಿಳೆಯರ ಮೇಲೆ ಆತನಿಗೆ ಇರುವಂತಹ ನಂಬಿಕೆ ವಿಶ್ವಾಸಗಳು ಕಡಿಮೆಯಾಗಿ ಹಲವಾರು ಬ್ರೇಕಪ್ ಗಳನ್ನು ಕೂಡ ಮಾಡಿಕೊಳ್ಳುತ್ತಾನೆ. ಪ್ರತಿಯೊಬ್ಬ ಮಹಿಳೆಯ ಮೇಲೂ ಕೂಡ ಆತನಿಗೆ ಇರುವಂತಹ ದೃಷ್ಟಿಕೋನವೇ ಬದಲಾಗುತ್ತದೆ. ಕೊನೆಗೂ ಆತ ಈ ಮಾತನ್ನು ತನ್ನ ಬಳಿ ಇಟ್ಟುಕೊಳ್ಳಲು ಆದರೆ ತನ್ನ ಅಕ್ಕನ ಬಳಿ ಇದನ್ನು ಹೇಳಿ ಕೊಳ್ಳುತ್ತಾನೆ.
ಇಬ್ಬರಿಗೂ ಕೂಡ ಈ ವಿಚಾರವನ್ನು ತಾಯಿಯೊಂದಿಗೆ ಹೇಗೆ ಮಾತನಾಡುವುದು ಎನ್ನುವ ಅರಿವಾಗದೇ ಅವರಿಬ್ಬರೂ ಕೂಡ ಸೈಕಾಲಜಿಸ್ಟ್ ನಮೃತ ಜೈನ್ ಅವರ ಬಳಿ ಬರುತ್ತಾರೆ. ಆ ಹುಡುಗ ಮೋಸ ಹೋದವನ ಅನುಭವವನ್ನು ಹೊಂದಿದ್ದ. ತಾಯಿ ತನಗೆ ಮೋಸ ಮಾಡಿದ್ದಾಳೆ ಎನ್ನುವ ಮನೋಭಾವವನ್ನು ಹೊಂದಿದ್ದ. ಹೀಗಾಗಿ ಸೈಕಾಲಜಿಸ್ಟ್ ಆತನನ್ನು ತಾಯಿಯ ಬಳಿ ಇದರ ಕುರಿತಂತೆ ಮಾತನಾಡಲು ಸೂಚಿಸುತ್ತಾರೆ. ಇದಾದ ನಂತರ ಈ ಕುರಿತಂತೆ ತಾಯಿಯ ಬಳಿ ಮಾತನಾಡಿದ ಆಕೆ ಇದರ ಕುರಿತಂತೆ ಒಪ್ಪಿಕೊಳ್ಳಲಿಲ್ಲ ಆದರೆ ಕಾಲಕ್ರಮೇಣವಾಗಿ ಮಕ್ಕಳ ಕುರಿತಂತೆ ಯೋಚನೆ ಮಾಡುತ್ತಾ ಆ ಸಂಬಂಧದಿಂದ ಆಕೆ ಹೊರಬರುತ್ತಾರೆ ಎಂಬುದು ಹುಡುಗನೇ ಹೇಳುತ್ತಾನೆ. ಈಗ ಆ ತಾಯಿ ತನ್ನ ಮಕ್ಕಳಿಗಾಗಿ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದೆ.
ಇದರ ಕುರಿತಂತೆ ಇನ್ನೆಷ್ಟು ವಿವರವಾಗಿ ತಿಳಿಯುವುದಾದರೆ ಆ ಮಕ್ಕಳ ಅಮ್ಮ ಅಪ್ಪ ಇಬ್ಬರು ಕೂಡ ಬೇರೆ ಬೇರೆ ಅಭಿರುಚಿಯನ್ನು ಹೊಂದಿದ್ದರು. ತಾಯಿಗೆ ಹೊರಗೆ ಹೋಗುವುದು ಹಾಗೂ ಉತ್ತಮ ಕ್ಷಣಗಳನ್ನು ಕಳೆಯುವುದು ಇಷ್ಟವಾದರೆ ತಂದೆಗೆ ಅದು ಇಷ್ಟ ಇರಲಿಲ್ಲ. ಹೀಗಾಗಿ ತಾಯಿಗೆ ಸಾಮಾನ್ಯವಾಗಿ ಬೇರೆ ಕಡೆಗೆ ಆಕರ್ಷಣೆ ಬೆಳೆಯುತ್ತದೆ. ಈ ಸಂದರ್ಭದಲ್ಲಿ ನಮೃತಾ ಜೈನ್ ರವರು ಮಕ್ಕಳ ಬಳಿ ಹೇಳಿ ತಂದೆ ಹಾಗೂ ತಾಯಿ ಇಬ್ಬರನ್ನು ಕೂಡ ಜೊತೆಯಾಗಿ ಸೇರುವಂತಹ ಪಿಕ್ನಿಕ್ ಡಿನ್ನರ್ ಲಂಚ್ ಪ್ಲಾನ್ ಗಳನ್ನು ಮಾಡುವಂತೆ ಹೇಳಿ ಒಂದಾಗಿಸಲು ಪ್ರಯತ್ನಿಸುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ತಾಯಿಗೆ ಕೂಡ ಮಗನ ಮನಸ್ಸು ಸರಿ ಇಲ್ಲ ಎನ್ನುವುದಾಗಿ ಹೇಳಿ ಆತನಿಗೆ ನೆಚ್ಚಿನ ಸಮಯಗಳನ್ನು ಕಳೆಯಲು ಹೇಳುತ್ತಾರೆ.
ಇದರಿಂದಾಗಿ ಆ ತಾಯಿಯ ಮನಸ್ಸಿನಲ್ಲಿ ಕೂಡ ಬದಲಾವಣೆ ಪ್ರಾರಂಭವಾಗಿ ತಮ್ಮ ಮಕ್ಕಳಿಗೆ ಹೆಚ್ಚಿನ ಸಮಯವನ್ನು ಹಾಗೂ ಕುಟುಂಬಕ್ಕಾಗಿ ಹೆಚ್ಚಿನ ಸಮಯವನ್ನು ನೀಡಲು ಪ್ರಾರಂಭಿಸುತ್ತಾರೆ. ಈಗ ತಮ್ಮ ಕುಟುಂಬದೊಂದಿಗೆ ಸಂತೋಷವಾಗಿ ಜೀವನವನ್ನು ನಡೆಸುತ್ತಿರುವ ಆಕೆ ಯಾವುದೇ ಬೇರೆಯ ಸಂಬಂಧದಲ್ಲಿ ಇಲ್ಲ. ತಂದೆ ಅಥವಾ ತಾಯಿಯ ಬೇರೆಯ ಸಂಬಂಧಗಳು ಅಥವಾ ಬೇರೆ ಆಗುತ್ತಿರುವುದರ ಕುರಿತಂತೆ ಮಕ್ಕಳಿಗೆ ತಿಳಿದುಬಂದರೆ ಅದರಲ್ಲೂ ಹದಿಹರೆಯದ ಮಕ್ಕಳಿಗೆ ತಿಳಿದುಬಂದರೆ ಅವರ ಜೀವನದಲ್ಲಿ ಸಾಕಷ್ಟು ವ್ಯತಿರಿಕ್ತ ಹಾಗೂ ಅ’ಪಾಯಕಾರಿ ಪ್ರಭಾವಗಳು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಪೋಷಕರು ಮಕ್ಕಳ ಕುರಿತಂತೆ ಈ ಈ ಸಮಯದಲ್ಲಿ ಯೋಚಿಸಬೇಕಾಗುತ್ತದೆ. ಆದರೆ ಈ ಕಥೆಯಲ್ಲಿ ಮಕ್ಕಳು ಹಾಗೂ ಸೈಕಾಲಜಿಸ್ಟ್ ತೆಗೆದುಕೊಂಡ ಉಪಾಯ ಖಂಡಿತವಾಗಿ ಒಂದು ಕುಟುಂಬದ ಸಂತೋಷ ಹಾಗೂ ಶಾಂತಿಯನ್ನು ಕಾಪಾಡುವ ಎಂದರೆ ತಪ್ಪಾಗಲಾರದು.
Comments are closed.