ಆಸೀಬಿ ಪರವಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸುಯಶ್ ಪ್ರಭುದೇಸಾಯಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿರಬಹುದು ಆದರೆ ಪಂದ್ಯ ಮಾತ್ರ ಕೊನೆವರೆಗೂ ಕೂಡ ರೋಮಾಂಚಕವಾಗಿ ನಡೆದಿತ್ತು. ಅದರಲ್ಲೂ ದಿನೇಶ್ ಕಾರ್ತಿಕ್ ರವರ ಬ್ಯಾಟಿಂಗ್ ಸಂದರ್ಭದಲ್ಲಿ ಒಂದೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದೇ ಗೆಲ್ಲುತ್ತದೆ ಎಂಬ ಭಾವನೆ ಕೂಡ ಮೂಡಿತ್ತು.

ಇನ್ನು ಈ ಪಂದ್ಯದಲ್ಲಿ ಮತ್ತೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ತನ್ನ ಪಾದಾರ್ಪಣಾ ಪಂದ್ಯದಲ್ಲೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ. ಹೌದು ನಾವು ಮಾತನಾಡುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಆಟಗಾರ ಸುಯಶ್ ಪ್ರಭುದೇಸಾಯಿ ರವರ ಕುರಿತಂತೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಪಾಯಕಾರಿ ಬ್ಯಾಟ್ಸ್ಮನ್ ಆಗಿರುವ ಮೋಹಿನ ಅಲಿ ರವರನ್ನು 3 ರನ್ನಿಗೆ ಅದ್ಭುತ ಫೀಲ್ಡಿಂಗ್ ಮೂಲಕ ರನೌಟ್ ಮಾಡಿದ್ದರು. ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟ್ಸ್ಮನ್ ಆಗಿ ಕೂಡ ಸುಯಶ್ ರವರು ನೆರವನ್ನು ನೀಡಿದ್ದರು. ಹೌದು ಗೆಳೆಯರೇ ಸುಯಶ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 18 ಎಸೆತಗಳಲ್ಲಿ 34 ರನ್ನುಗಳ ವೇಗದ ಆಟವನ್ನು ಆಡಿದರು.

suyash prabhudessai rcb | ಆಸೀಬಿ ಪರವಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸುಯಶ್ ಪ್ರಭುದೇಸಾಯಿ ಯಾರು ಗೊತ್ತಾ??
ಆಸೀಬಿ ಪರವಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸುಯಶ್ ಪ್ರಭುದೇಸಾಯಿ ಯಾರು ಗೊತ್ತಾ?? 2

ಈ ಮೂಲಕ ಈಗ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಮನೆಮಾತಾಗಿದ್ದಾರೆ. ಎಲ್ಲಿದ್ಯಪ್ಪ ಇಷ್ಟುದಿನ ಎನ್ನುವಂತೆ ಸುದ್ದಿಯಾಗಿದ್ದಾರೆ. ಹಾಗಿದ್ದರೆ ಸುಯಶ್ ಯಾರು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಕಳೆದ ಸೀಸನ ನಿಂದಲೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಳೆಯದಲ್ಲಿ ಇವರು ಇದ್ದರು. ಈ ಬಾರಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಯಶ್ ರವರನ್ನು 30 ಲಕ್ಷ ರೂಪಾಯಿ ನೀಡಿ ಖರೀದಿಸಿತ್ತು. ಇನ್ನು ಇವರು ಗೋವಾ ರಾಜ್ಯದ ರಣಜಿ ಪ್ಲೇಯರ್ ಆಗಿದ್ದಾರೆ. ಸುಯಶ್ ಆಡಿರುವ 22 ಟಿ20 ಪಂದ್ಯಗಳಲ್ಲಿ 148ರ ಸ್ಟ್ರೈಕ್ ರೇಟ್ ನಂತೆ 443 ರನ್ಗಳನ್ನು ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ ಮೊದಲ ಪಂದ್ಯದಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತಂಡ ಈ ಆಟಗಾರನನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.