ಮಗ ಸಾಕ್ತಾನೆ ಅಂತ ಚಿನ್ನ ಹಣ ಆಸ್ತಿ ಎಲ್ಲವನ್ನು ನೀಡಿದ ತಂದೆ, ಇಂದು ಮಗನ ಮುಂದೆ ಏನು ಮಾಡುತ್ತಿದ್ದಾರೆ ಗೊತ್ತಾ? ಮಗನಿಗೆ ಶಾಕ್.

ನಮಸ್ಕಾರ ಸ್ನೇಹಿತರೇ ಪೋಷಕರು ತಮ್ಮ ಮಕ್ಕಳನ್ನು ಹೆತ್ತು ಹೊತ್ತು ಸಾಕುವುದು ಒಂದು ಅವರು ಉತ್ತಮ ಜೀವನವನ್ನು ಸಾಗಿಸಲಿ ಎಂದು ಮತ್ತೊಂದು ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮ ಆಸರಿಗೆ ಆಗಲಿ ಎಂದು. ಆದರೆ ಮಕ್ಕಳು ಮಾತ್ರ ಮೊದಲ ಕಾರಣ ಯಶಸ್ವಿಯಾದ ನಂತರ ಎರಡನೇ ಕಾರಣ ದತ್ತ ತಲೆ ಕೂಡ ಕೆಡಿಸಿಕೊಳ್ಳದೆ ತಮ್ಮ ಜೀವನವಾಯಿತು ತಾವಾಯಿತು ಎಂಬುದಾಗಿ ತಮ್ಮ ಪಾಡಿಗೆ ಇದ್ದು ಬಿಡುತ್ತಾರೆ.

ಹೌದು ಸ್ನೇಹಿತರೆ ವಿಜಯಪುರ ಜಿಲ್ಲೆಯ ಇಂಡಿ ಗ್ರಾಮದಲ್ಲಿ ನಡೆದಿರುವ ನೈಜ ಘಟನೆ ಈಗ ಇದೇ ತರಹದ ಪ್ರಶ್ನೆಗಳನ್ನು ಉದ್ಭವವಾಗುವಂತೆ ಮಾಡುತ್ತಿದೆ. ಹೌದು ಸ್ನೇಹಿತರೆ ಮಕ್ಕಳು ಬೆಳೆದ ಮೇಲೆ ತಂದೆಯರ ಕುರಿತಂತೆ ಯಾಕೆ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ ಎಂಬುದು ಇಂದಿಗೂ ಕೂಡ ಯಕ್ಷಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಇನ್ನು ಈ ಗ್ರಾಮದಲ್ಲಿ ಕುಪೇಂದ್ರ ಆನೂರು ಎಂಬ ವ್ಯಕ್ತಿ ತಮ್ಮ ಮಗನ ಮನೆಯ ಮುಂದೆ ನಾಲ್ಕು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ ಇವರು ಪ್ರತಿಭಟನೆ ಮಾಡುವುದಕ್ಕೆ ಮೂಲ ಕಾರಣ ತನ್ನನ್ನು ತನ್ನ ಮಗ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬುದು.

ಹೌದು ಸ್ನೇಹಿತರೆ ಅವರು ಹೇಳುವಂತೆ ಅವರು ಶಿಕ್ಷಕರಾಗಿದ್ದಾರೆ. ಶಿಕ್ಷಕ ವೃತ್ತಿಯಿಂದ ದುಡಿದಂತಹ ಹಣ ಹಾಗೂ ತನ್ನ ಎಲ್ಲಾ ಸರ್ವಸ್ವವನ್ನು ತನ್ನ ಮಗನ ಹೇಳಿಗೆಗಾಗಿ ನಾನು ಬಳಸಿದ್ದೇನೆ ಎಂಬುದಾಗಿ ಅವರು ಹೇಳುತ್ತಿದ್ದಾರೆ. ಆದರೆ ಈಗ ನನ್ನ ವೃದ್ಧಾಪ್ಯದ ಸಂದರ್ಭದಲ್ಲಿನ ಕಾಳಜಿಯನ್ನು ಕೂಡ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ ನೀಡುತ್ತಿದ್ದಾರೆ. ಹೌದು ಸ್ನೇಹಿತರೆ ಕುಪ್ಪೇಂದ್ರ ಆನೂರು ರವರು ತನ್ನ ಮಗನಿಗೆ ಜಮೀನು 50 ಸಾವಿರ ಹಣ ಹಾಗೂ 50 ಗ್ರಾಂ ಚಿನ್ನವನ್ನು ಕೂಡ ನೀಡಿದ್ದಾರಂತೆ. ಆದರೆ ಮಗ ಮಾತ್ರ ಪಟ್ಟಣದಲ್ಲಿ ಮನೆಯನ್ನು ಮಾಡಿಕೊಂಡು ಜೀವಿಸುತ್ತಿದ್ದಾರೆ ನನ್ನನ್ನು ಇಲ್ಲಿ ಹಳ್ಳಿಯಲ್ಲಿ ಮುರುಕು ಮನೆಯಲ್ಲಿ ಬಿಟ್ಟಿದ್ದಾನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ನಾನು ಕೊಟ್ಟಿರುವ ಚಿನ್ನ ಆಸ್ತಿ ಹಾಗೂ ಹಣ ಎಲ್ಲವನ್ನೂ ನನಗೆ ವಾಪಸ್ಸು ನೀಡಲಿ ಎಂಬುದಾಗಿ ಪ್ರತಿಭಟನೆಯ ಮೂಲಕ ಕೋರಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಸ್ನೇಹಿತರೇ.

Comments are closed.