Mahesh Babu: ಮಹೇಶ್ ಬಾಬು ಗೆ ಅದೊಂದು ಸಮಸ್ಯೆ ಆಗೋಯ್ತು: ಸಿನಿಮಾ ಇಂದ ಬ್ರೇಕ್ ತೆಗೆದುಕೊಳ್ತಾರಾ ಮಹೇಶ್ ಬಾಬು: ಪಾಪ ಏನಾಗಿದೆ ಗೊತ್ತೇ??
Mahesh Babu: ಟಾಲಿವುಡ್ (Tollywood) ನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಎಸ್.ಎಸ್.ರಾಜಮೌಳಿ ಅವರೊಡನೆ ಸಿನಿಮಾ ಮಾಡುವುದಕ್ಕಿಂತ ಮೊದಲು ತ್ರಿವಿಕ್ರಂ ಶ್ರೀನಿವಾಸ್ ರಾವ್ (Trivikram Srinivas Rao) ಅವಿರೊಡನೆ ಸಿನಿಮಾ ಮಾಡುತ್ತಿದ್ದಾರೆ. ಖಲೆಜ ನಂತರ ಈ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿದ್ದು, ಮಹೇಶ್ ಬಾಬು ಅವರಿಗೆ ಹೀರೋಯಿನ್ ಆಗಿ ಪೂಜಾ ಹೆಗ್ಡೆ (Pooja Hegde) ಹಾಗೂ ಶ್ರೀಲೀಲಾ (Sreeleela) ನಟಿಸುತ್ತಿದ್ದಾರೆ.
ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಿನಿಮಾ ಮುಹೂರ್ತ ನಡೆದು, ಆಕ್ಟೊಬರ್ ಇಂದ ರೆಗ್ಯುಲರ್ ಶೂಟಿಂಗ್ ಶುರುವಾಗಿದೆ, ಆದರೆ ಈ ಚಿತ್ರತಂಡಕ್ಕೆ ಒಂದರ ನಂತರ ಒಂದು ಅಡೆತಡೆಗಳು ಬರುತ್ತಲೇ ಇದೆ. ಮೊದಲು ಶೂಟಿಂಗ್ ನಡೆಯುವ ಸಮಯದಲ್ಲೇ ನಟ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ (Super Star Krishna) ಅವರು ವಿಧಿವಶರಾದರು, ಬಳಿಕ ಅವರ ತಾಯಿ ಕೂಡ ಇನ್ನಿಲ್ಲವಾದರೂ. ಇದರಿಂದ ಕೆಲ ತಿಂಗಳು ಮಹೇಶ್ ಬಾಬು ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿಲ್ಲ..
ಅದಾದ ನಂತರ ಶೂಟಿಂಗ್ ಶುರುವಾಗಿ ಕೆಲ ಸಮಯ ನಡೆಯಿತು, ಆದರೆ ಈಗ ಮಹೇಶ್ ಬಾಬು ಅವರು 3 ತಿಂಗಳು ಶೂಟಿಂಗ್ ಇಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ಅದಕ್ಕೆ ಕಾರಣ ಏನು ಅಂದ್ರೇ, ಮಹೇಶ್ ಬಾಬು ಅವರಿಗೆ ಸ್ಕಿನ್ ಅಲರ್ಜಿ ಆಗಿದ್ದು, ಬಿಸಿಲಿಗೆ ಹೋದರೆ ಅದು ಜಾಸ್ತಿ ಆಗುತ್ತಿರುವುದರಿಂದ ಶೂಟಿಂಗ್ ಗೆ ಬ್ರೇಕ್ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ. ಹಾಗಾಗಿ ಇನ್ನು ಮೂರು ತಿಂಗಳು ಶೂಟಿಂಗ್ ನಿಲ್ಲಬಹುದು ಎನ್ನಲಾಗುತ್ತಿದೆ..
ಮಹೇಶ್ ಬಾಬು ಅವರು ಈ ಸಮ್ಮರ್ ಮುಗಿಯುವವರೆಗು ವಿದೇಶ ಪ್ರವಾಸಕ್ಕೆ ಹೋಗಿಬರುತ್ತಾರಂತೆ. ಈ ಮೂರು ತಿಂಗಳ ಗ್ಯಾಪ್ ಸಿನಿಮಾ ರಿಲೀಸ್ ಡೇಟ್ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗುತ್ತಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಘೋಷಣೆ ಮಾಡಲಾಗಿದ್ದು, ಹಾಗಾಗಿ ಇನ್ನು ತುಂಬಾ ಸಮಯ ಇರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತಿದೆ.
Comments are closed.