ಹಿಟ್ಲರ್ ಕಲ್ಯಾಣದ ಮೂಲಕ ಮನೆಮಾತಾಗಿರುವ ಎಡವಟ್ಟು ರಾಣಿ ಲೀಲಾ ರವರಿಗೆ ಯಾವ ಕನ್ನಡದ ಸ್ಟಾರ್ ನಟನ ಜೊತೆ ಸಿನಿಮಾ ಮಾಡುವ ಆಸೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಪ್ರಸಾರವಾಗುತ್ತಲೇ ಇವೆ. ಸಿನಿಮಾಗಳಿಗೆ ಮಾತ್ರವಲ್ಲದೆ ಧಾರಾವಾಹಿಗಳಿಗೂ ಕೂಡ ಹಾಗೂ ಧಾರವಾಹಿಯ ನಟನಟಿಯರಿಗೂ ಕೂಡ ಅವರದೇ ಆದಂತಹ ಅಭಿಮಾನಿ ಬಳಗವಿದೆ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರವಾಹಿ ಕುರಿತಂತೆ. ದಿಲೀಪ್ ರಾಜ್ ರವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿ ಈಗ ಕಿರುತೆರೆ ಪ್ರಿಯರಿಗೆ ಅತ್ಯಂತ ನೆಚ್ಚಿನ ಧಾರವಾಹಿಗಳಲ್ಲಿ ಒಂದಾಗಿದೆ. ಇನ್ನು ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ದಿನದಿಂದ ದಿನಕ್ಕೆ ಟ್ವಿಸ್ಟ್ ಹಾಗೂ ಮನರಂಜನೆ ಹೆಚ್ಚಾಗುತ್ತಲೇ ಇದೆ.

ಅದರಲ್ಲಿ ಎಡವಟ್ಟು ಲೀಲಾ ಪಾತ್ರಧಾರಿ ಎಲ್ಲರ ಮೆಚ್ಚಿನ ನಟಿಯಾಗಿದ್ದಾರೆ. ಒಂದಲ್ಲ ಒಂದು ಎಡವಟ್ಟಿನಿಂದಾಗಿ ಎಡವಟ್ಟು ಲೀಲಾ ಎಂದು ಹೆಸರಾಗಿದ್ದಾರೆ. ಲೀಲಾ ಹಾಗೂ ಎದೆ ನಡುವಿನ ಸಂಚಿಕೆಗಳು ಪ್ರೇಕ್ಷಕರಲ್ಲಿ ದೊಡ್ಡಮಟ್ಟದಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕುತ್ತವೆ. ಇನ್ನು ಲೀಲಾ ಪಾತ್ರಧಾರಿಯಾಗಿರುವ ಮಲೈಕಾ ರವರಿಗೆ ಇದು ಮೊದಲ ಧಾರವಾಹಿ ಆಗಿರುವುದರಿಂದಾಗಿ ನರ್ವಸ್ ಎನ್ನುವುದು ಅವರಲ್ಲಿ ಹೆಚ್ಚಾಗಿ ಕಂಡಿತ್ತು. ಆದರೆ ದಿಲೀಪ್ ರಾಜ್ ರವರ ಹಿಟ್ಲರ್ ಕಲ್ಯಾಣ ಧಾರಾವಾಹಿ ತಂಡ ಮಲೈಕ ರವರಿಗೆ ಕಂಫರ್ಟ್ ಫೀಲಿಂಗ್ ನೀಡಿದೆ ಎಂದರೆ ತಪ್ಪಾಗಲಾರದು. ಇನ್ನು ಮಲೈಕಾ ರವರು ಕೂಡ ಲೀಲಾ ಪಾತ್ರಧಾರಿಯಾಗಿ ಯಾವುದೇ ಅನುಭವಿ ನಟಿಗೂ ಕಮ್ಮಿ ಇಲ್ಲದಂತೆ ನಟಿಸುತ್ತಿದ್ದಾರೆ.

malaika vasupal | ಹಿಟ್ಲರ್ ಕಲ್ಯಾಣದ ಮೂಲಕ ಮನೆಮಾತಾಗಿರುವ ಎಡವಟ್ಟು ರಾಣಿ ಲೀಲಾ ರವರಿಗೆ ಯಾವ ಕನ್ನಡದ ಸ್ಟಾರ್ ನಟನ ಜೊತೆ ಸಿನಿಮಾ ಮಾಡುವ ಆಸೆ ಗೊತ್ತೇ??
ಹಿಟ್ಲರ್ ಕಲ್ಯಾಣದ ಮೂಲಕ ಮನೆಮಾತಾಗಿರುವ ಎಡವಟ್ಟು ರಾಣಿ ಲೀಲಾ ರವರಿಗೆ ಯಾವ ಕನ್ನಡದ ಸ್ಟಾರ್ ನಟನ ಜೊತೆ ಸಿನಿಮಾ ಮಾಡುವ ಆಸೆ ಗೊತ್ತೇ?? 2

ಮುಂದಿನ ದಿನಗಳಲ್ಲಿ ಅವರು ಸಿನಿಮಾದಲ್ಲಿ ನಟಿಸಿದರು ಕೂಡ ಯಾವುದೇ ಆಶ್ಚರ್ಯಪಡಬೇಕಾಗಿಲ್ಲ. ಕನ್ನಡ ಚಿತ್ರರಂಗದಲ್ಲಿ ಅವರು ಯಾವ ನಟನ ಜೊತೆಗೆ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದನ್ನು ನಿಮಗೆ ಹೇಳುತ್ತೇವೆ ಬನ್ನಿ. ಮೊದಲಿನಿಂದಲೂ ಕೂಡ ರಾಕಿಂಗ್ ಸ್ಟಾರ್ ಯಶ್ ರವರ ಅಭಿಮಾನಿಯಾಗಿರುವ ಲೀಲಾ ಅವರ ಜೊತೆಗೆ ಒಂದಾದರು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದಾರೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಈ ಕನಸು ನನಸಾಗಲಿ ಎಂಬುದಾಗಿ ಹಾರೈಸೋಣ. ಮೊದಲನೇ ಧಾರವಾಹಿ ಆಗಿದ್ದರೂ ಕೂಡ ಮಲೈಕಾ ರವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಖ್ಯೆ ಲಕ್ಷಗಟ್ಟಲೆ ಯಲ್ಲಿದ್ದಾರೆ. ಇದೇ ರೀತಿ ಜನಪ್ರಿಯತೆಯನ್ನು ತಮ್ಮ ಕರಿಯರ್ ಜರ್ನಿ ಯುದ್ಧಕ್ಕೂ ಪಡೆಯಲಿ ಎಂದು ಹಾರೈಸೋಣ.

Comments are closed.