ಕೊನೆಗೂ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕನ್ನಡಿಗರ ಕ್ಷಮೆ ಕೇಳಿದ ತೆಲುಗಿನ ಖ್ಯಾತ ನಟ ನಾನಿ. ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪರಭಾಷ ಚಿತ್ರರಂಗಗಳು ಇಷ್ಟು ವರ್ಷಗಳವರೆಗೂ ಕೂಡ ಕನ್ನಡ ಚಿತ್ರರಂಗದ ಕುಡಿತಿದ್ದ ಸಂಕುಚಿತ ಭಾವನೆಯನ್ನು ಹೊಂದಿದ್ದವು. ಆದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಖಂಡಿತವಾಗಿ ಅವರೆಲ್ಲರಿಗೂ ಕೂಡ ಉತ್ತಮ ಉತ್ತರವನ್ನೇ ನೀಡಿದೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ತೆಲುಗು ಚಿತ್ರರಂಗದ ಸ್ಟಾರ್ ನಟನಾಗಿರುವ ನಾನಿ ರವರು ನೀಡಿರುವ ಹೇಳಿಕೆ ಕನ್ನಡ ಪ್ರೇಕ್ಷಕರ ಭಾವನೆಗೆ ಧಕ್ಕೆ ಯನ್ನು ತರಿಸಿದೆ. ನಜ್ರಿಯ ಹಾಗೂ ನಾನಿ ನಾಯಕ ಹಾಗೂ ನಾಯಕಿಯಾಗಿ ಕಾಣಿಸಿಕೊಂಡಿರುವ ಆಂಟಿ ಸುಂದರಾನಿಕಿ ಸಿನಿಮಾದ ಸಮಾರಂಭವೊಂದರಲ್ಲಿ ಕನ್ನಡದಲ್ಲಿ ಯಾಕೆ ನಿಮ್ಮ ಸಿನಿಮಾವನ್ನು ಡಬ್ ಮಾಡಿಲ್ಲ ಎನ್ನುವುದಾಗಿ ಸಂದರ್ಶಕರು ಪ್ರಶ್ನೆಯನ್ನು ಕೇಳಿದರು.

ಯಾಕೆಂದರೆ ಈ ಸಿನಿಮಾವನ್ನು ಮಲೆಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಡಬ್ ಮಾಡಲಾಗಿತ್ತು. ಆಗ ನಾನಿ ರವರು ಕನ್ನಡಿಗರಿಗೆ ತೆಲುಗು ಅರ್ಥವಾಗುತ್ತದೆ ಅವರು ತೆಲುಗಿನಲ್ಲಿಯೇ ನೋಡಲು ಇಷ್ಟಪಡುತ್ತಾರೆ ಎಂಬ ವಿವಾ’ದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದು ಕನ್ನಡಿಗರನ್ನು ಕೆರಳಿಸಿತ್ತು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ನಾನಿ ರವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ನಾನಿ ರವರನ್ನು ಲೆಫ್ಟ್ ರೈಟ್ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈಗ ಕನ್ನಡಿಗರ ಕ್ಷಮೆಯನ್ನು ಕೇಳಿದ್ದಾರೆ.

nani ante sundaraniki | ಕೊನೆಗೂ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕನ್ನಡಿಗರ ಕ್ಷಮೆ ಕೇಳಿದ ತೆಲುಗಿನ ಖ್ಯಾತ ನಟ ನಾನಿ. ಹೇಳಿದ್ದೇನು ಗೊತ್ತೇ?
ಕೊನೆಗೂ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕನ್ನಡಿಗರ ಕ್ಷಮೆ ಕೇಳಿದ ತೆಲುಗಿನ ಖ್ಯಾತ ನಟ ನಾನಿ. ಹೇಳಿದ್ದೇನು ಗೊತ್ತೇ? 2

ಕ್ಷಮೆ ಕೇಳುತ್ತಾ ನಾನಿ ರವರು, ಡಬ್ಬಿಂಗ್ ಇಲ್ಲದ ಸಂದರ್ಭದಲ್ಲಿಯೂ ಕೂಡ ಕನ್ನಡಿಗರು ನಮ್ಮ ತೆಲುಗು ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಈ ಅರ್ಥದಲ್ಲಿ ನಾನು ಆ ಮಾತನ್ನು ಹೇಳಿದೆ ಆದರೆ ಪೂರ್ಣವಾಗಿ ಹೇಳಲು ಸಾಧ್ಯವಾಗಲಿಲ್ಲ. ಇದನ್ನು ಈಗ ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗುತ್ತಿದೆ. ಇದಕ್ಕೆ ನನ್ನ ಕ್ಷಮೆ ಇರಲಿ ಎಂಬುದಾಗಿ ನಾನಿ ರವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಕುರಿತಂತೆ ಪರೋಕ್ಷವಾಗಿ ಮಾತನಾಡುತ್ತಾ ಕನ್ನಡದ ಸಿನಿಮಾಗಳು ಗಡಿ ಮೀರಿ ಬೆಳೆಯುತ್ತಿರುವುದು ನಮಗೆ ಹೆಮ್ಮೆಯಾಗಿದೆ ಎಂಬುದಾಗಿ ಹೇಳಿದ್ದಾರೆ. ಇದೆ ಜೂನ್ 10ರಂದು ಅಂಟೆ ಸುಂದರಾನಿಕಿ ಸಿನಿಮಾ ಬಿಡುಗಡೆಯಾಗುತ್ತಿದ್ದು ಕರ್ನಾಟಕದಲ್ಲಿ ಈ ಕುರಿತಂತೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

Comments are closed.