ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮಾತನಾಡಿ ಸಂದೇಶ ರವಾನೆ ಮಾಡಿದ ಮಾಜಿ ಕೋಚ್ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಅವರು ಎಂದಾಕ್ಷಣ ನಮಗೆ ನೆನಪಿಗೆ ಬರುವಂತಹ ವಿಚಾರವೆಂದರೆ ಅವರೊಬ್ಬ ರನ್ ಮಷೀನ್ ಎನ್ನುವುದಾಗಿ. ಒಂದು ಕಾಲದಲ್ಲಿ ಯಾವುದೇ ಗುರಿ ಇರಲಿ ತಂಡದ ಏಕಮಾತ್ರ ಆಟಗಾರನಾಗಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಂತಹ ಕಾರ್ಯವನ್ನು ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ನಾಯಕತ್ವದ ಒತ್ತಡದ ಕಾರಣದಿಂದಾಗಿ ಅವರಿಗೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದಾಗಿ ಕೇಳಿಬಂದಿತ್ತು. ಈಗ ಭಾರತದ ಮೂರು ಫಾರ್ಮೆಟ್ ಗಳಿಂದ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಕೇವಲ ರಾಷ್ಟ್ರೀಯ ತಂಡದಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕನ ಸ್ಥಾನದಿಂದ ರಾಜೀನಾಮೆ ನೀಡಿ ಕೇವಲ ಆಟಗಾರನಾಗಿ ಮಾತ್ರ ಆಡುತ್ತಿದ್ದಾರೆ. ನಾಯಕನ ಸ್ಥಾನದಿಂದ ಹೊರಬಂದ ನಂತರ ವಿರಾಟ್ ಕೊಹ್ಲಿ ಅವರು ಮುಕ್ತವಾಗಿ ಆಡುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ರವರ ವೈಫಲ್ಯ ಮತ್ತೆ ಮುಂದುವರಿದಿದೆ ಎಂಬುದು ನಿಮ್ಮ ಕಣ್ಣೆದುರಿಗೆ ಕಾಣುತ್ತಿದೆ. ಇದರ ಕುರಿತಂತೆ ತಂಡದ ಕೋಚ್ ಹಾಗೂ ವಿರಾಟ್ ಕೊಹ್ಲಿ ರವರ ಹಿತೈಷಿ ಮತ್ತು ಮಾಜಿ ಕ್ರಿಕೆಟಿಗ ಆಗಿರುವ ರವಿಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ravishastri rcb kohli | ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮಾತನಾಡಿ ಸಂದೇಶ ರವಾನೆ ಮಾಡಿದ ಮಾಜಿ ಕೋಚ್ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೇ??
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಮಾತನಾಡಿ ಸಂದೇಶ ರವಾನೆ ಮಾಡಿದ ಮಾಜಿ ಕೋಚ್ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೇ?? 2

ಹೌದು ವಿರಾಟ್ ಕೊಹ್ಲಿ ರವರು ಸಾಕಷ್ಟು ಸಮಯಗಳಿಂದ ಬಯೋ ಬಬಲ್ ನಲ್ಲಿ ಇದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿದೆ. ಸತತವಾಗಿ ತಂಡದ ಪರವಾಗಿ ಕ್ರಿಕೆಟನ್ನು ಆಡುತ್ತಿದ್ದಾರೆ. ಹೀಗಾಗಿ ಅವರಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಅಥವಾ ಇಂಗ್ಲೆಂಡ್ ಪ್ರವಾಸದ ನಂತರ ಒಂದರಿಂದ ಎರಡು ತಿಂಗಳ ಕನಿಷ್ಠ ವಿಶ್ರಾಂತಿ ಸಿಗಲೇ ಬೇಕಾಗಿದೆ ಎಂಬುದಾಗಿ ರವಿಶಾಸ್ತ್ರಿ ರವರು ಸಲಹೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ವಿರಾಟ್ ಕೊಹ್ಲಿ ರವರ ಬಳಿ ಅನುಭವ ಹಾಗೂ ಅದಕ್ಕೆ ತಕ್ಕಂತಹ ಅತ್ಯುತ್ತಮ ಆಟವಿದೆ. ಹೀಗಾಗಿ 6 ರಿಂದ 7 ವರ್ಷಗಳ ಕಾಲ ಆಡುವಂತಹ ಸಾಮರ್ಥ್ಯ ಅವರ ಬಳಿ ಇದೆ ತಂಡ ಅವರನ್ನು ಕಳೆದುಕೊಳ್ಳಬಾರದು ಎನ್ನುವುದಾಗಿ ತಮ್ಮ ಅಭಿಪ್ರಾಯವನ್ನು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ರವಿಶಾಸ್ತ್ರಿ ರವರ ಈ ವಿಚಾರದ ಹಾಗೂ ಸಲಹಾ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.