ಆರ್ಸಿಬಿ ತಂಡ ಪರ ಇದ್ದ ಕನ್ನಡಿಗನ ದಾಖಲೆಯನ್ನು ಅಳಿಸಿ ಹಾಕಿದ ಹರ್ಷಲ್ ಪಟೇಲ್. ಹೊಸ ದಾಖಲೆ ಸೃಷ್ಟಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ಎಲ್ಲಾ ವಿಚಾರಗಳು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾಗೂ ತಂಡದ ಅಭಿಮಾನಿಗಳ ಪರವಾಗಿ ಸಾಗಿಕೊಂಡು ಬರುತ್ತಿದೆ ಎಂದರೆ ತಪ್ಪಾಗಲಾರದು. ನಿಜಕ್ಕೂ ಕೂಡ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಘಟಿತ ಪ್ರದರ್ಶನದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸಂತುಷ್ಟರಾಗಿದ್ದಾರೆ ಎಂದು ಹೇಳಬಹುದಾಗಿದೆ.

ಈ ಬಾರಿ ಪ್ರತಿಯೊಂದು ವಿಧದಲ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಚಕವಾಗಿ ಗೆದ್ದರೂ ಕೂಡ ಅಭಿಮಾನಿಗಳಿಗೆ ಗೆದ್ದ ಸಂತೋಷವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದು ಗೆಲುವು ಹಾಗೂ ಎರಡು ಸಾಲುಗಳಲ್ಲಿ ಗೆ ಪಾಯಿಂಟ್ಸ್ ಟೇಬಲ್ ನಲ್ಲಿ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮಿಂಚುತ್ತಿದೆ. ಇನ್ನು ನಿಮಗೆ ತಿಳಿದಿರುವಂತೆ ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲ್ ರವರು ತಮ್ಮ ಅಕ್ಕನನ್ನು ಅಕಾಲಿಕವಾಗಿ ಕಳೆದುಕೊಂಡಿದ್ದರು. ಹೀಗಾಗಿ ಅವರು ಟೂರ್ನಿಯ ಮಧ್ಯದಲ್ಲೇ ಮನೆಗೆ ಹೋಗಿದ್ದರು. ಮತ್ತೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ಕಾಣುವುದು ಅನುಮಾನ ಎಂದು ಎಲ್ಲರೂ ಭಾವಿಸಿದ್ದರು.

harshal patel rcb | ಆರ್ಸಿಬಿ ತಂಡ ಪರ ಇದ್ದ ಕನ್ನಡಿಗನ ದಾಖಲೆಯನ್ನು ಅಳಿಸಿ ಹಾಕಿದ ಹರ್ಷಲ್ ಪಟೇಲ್. ಹೊಸ ದಾಖಲೆ ಸೃಷ್ಟಿ. ಏನು ಗೊತ್ತೇ??
ಆರ್ಸಿಬಿ ತಂಡ ಪರ ಇದ್ದ ಕನ್ನಡಿಗನ ದಾಖಲೆಯನ್ನು ಅಳಿಸಿ ಹಾಕಿದ ಹರ್ಷಲ್ ಪಟೇಲ್. ಹೊಸ ದಾಖಲೆ ಸೃಷ್ಟಿ. ಏನು ಗೊತ್ತೇ?? 2

ಆದರೆ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಮತ್ತೆ ಆಗಮಿಸಿ ತಂಡದ ಗೆಲುವಿನ ರೂವಾರಿ ಕೂಡ ಆಗಿದ್ದರು. ಈ ಮಧ್ಯದಲ್ಲಿ ಹರ್ಷಲ್ ಪಟೇಲ್ ರವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದೇನೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದಿರುವ ಸಾಧನೆಯನ್ನು ಮಾಡಿದ್ದಾರೆ. ಇದುವರೆಗೂ ಈ ದಾಖಲೆ 72 ವಿಕೆಟ್ಗಳನ್ನು ಪಡೆದುಕೊಂಡಿರುವ ಕನ್ನಡಿಗ ವಿನಯ್ ಕುಮಾರ್ ಅವರ ಹೆಸರಿನಲ್ಲಿತ್ತು. ಈಗ 73 ವಿಕೆಟ್ಗಳನ್ನು ಪಡೆಯುವ ಮೂಲಕ ಹರ್ಷಲ್ ಪಟೇಲ್ ರವರ ಹೆಸರಿಗೆ ಬಂದಿದೆ. ಇನ್ನು ತಂಡದ ಅತ್ಯಂತ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಖ್ಯಾತಿಗೆ ಇಂದಿಗೂ ಕೂಡ ಯಜುವೇಂದ್ರ ಚಹಾಲ್ ರವರೆ ಇದ್ದಾರೆ. ಇವರು ಟೋಟಲ್ ಬೆಂಗಳೂರು ತಂಡದ ಪರವಾಗಿ ಒಟ್ಟು 139 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಬೆಂಗಳೂರು ತಂಡದ ಸಾರ್ವಕಾಲಿಕ ಯಶಸ್ವಿ ಬೌಲರ್ ಎಂದರೆ ಅದು ಯಜುವೇಂದ್ರ ಚಹಾಲ್.

Comments are closed.